Tuesday, November 19, 2024

 ಕಥೆ-585

ಉಪಯೋಗವಿಲ್ಲದ ವಿದ್ಯೆ ವ್ಯರ್ಥ

ಒಮ್ಮೆ ರಾಮಕೃಷ್ಣ ಪರಮಹಂಸರು ತಮ್ಮ ಶಿಷ್ಯರೊಂದಿಗೆ ಗಂಗಾನದಿಯ ತೀರ ಬದಲ್ಲಿ ಕುಳಿತಿದ್ದಾಗ ತಾಂತ್ರಿಕನೊಬ್ಬ ಬಂದು ಅವರಿಗೆ ಸವಾಲು ಹಾಕಿದ. ನನ್ನ ಹಾಗೆ ನೀರಿನ ಮೇಲೆ ನಡೆದು ತೋರಿಸಬಲ್ಲಿರಾ ನೀವು ಎಂದು. ರಾಮಕೃಷ್ಣರು ನೀನು ನಿನ್ನ ಸಾಧನೆಯನ್ನು ಪ್ರದರ್ಶಿಸು ಎಂದರು. ಆಗ ಆ ತಾಂತ್ರಿಕ ಜಂಬದಿಂದ ನೀರಿನ ಮೇಲೆ ನದಿಯ ಇನ್ನೊಂದು ತೀರದವರೆಗೆ ನಡೆದು ವಾಪಸು ಬಂದು ಹೇಳಿದ. ನನ್ನ ಹಾಗೆ ನೀವು ಮಾಡಬಲ್ಲಿರಾ ಎಂದು. ಆಗ ರಾಮಕೃಷ್ಣರು ಶಾಂತರಾಗಿ ನೀನು ಹೀಗೆ ಬೇರೆಯವರನ್ನು ನದಿ ದಾಟಿಸಬಲ್ಲೆಯಾ ಎಂದು ಕೇಳಿದರು. ಆಗ ಅವನು ಅಹಂಕಾರದಿಂದ ಇದು ನನ್ನ 20 ವರ್ಷಗಳ ಸಾಧನೆ. ಬೇರೆಯವರು ಇದನ್ನು ಮಾಡಲು ಸಾಧ್ಯವಿಲ್ಲ ಎಂದನು. ಆಗ ಪರಮಹಂಸರು ನೋಡು ನಿನ್ನ ಸಾಧನೆಗಿಂತ ಆ ಅಂಬಿಗನ ಕೆಲಸವೇ ವಾಸಿ. ಅವನು ಒಂದು ರೂಪಾಯಿ ಕೊಟ್ಟರೆ ಅವನ ದೋಣಿಯಲ್ಲಿ 50 ಜನರನ್ನು ನದಿ ದಾಟಿಸುವನು ಎಂದು ಹೇಳಿದರು. ಆಗ ಆ ತಾಂತ್ರಿಕ ನಾಚಿಕೆಯಿಂದ ತಲೆತಗ್ಗಿಸಿಕೊಂಡು ಹೊರಟು ಹೋದನು. ಜನರಿಗೆ ಉಪಯೋಗವಾಗದ ಯಾವುದೇ ವಿದ್ಯೆ ಎಷ್ಟು ದೊಡ್ಡದಾದರೂ ಅದರಿಂದ ಉಪಯೋಗವಿಲ್ಲ ಯಾರೂ ಮೆಚ್ಚುವುದಿಲ್ಲ.

👍...

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು