ಕಥೆ-587
*ವೃದ್ಧರಾಗಬಾರದು, ಹಿರಿಯರಾಗಬೇಕು.....*
ಈ *ಎರಡರ ನಡುವಿನ ವ್ಯತ್ಯಾಸವನ್ನು ತಿಳಿದುಕೊಂಡು ನಾವು ಈ ಅಮೂಲ್ಯ ಜೀವನವನ್ನು ಪೂರ್ತಿಯಾಗಿ ಆನಂದಿಸಬೇಕು.*
ಒಬ್ಬ ವ್ಯಕ್ತಿಯು ವಯಸ್ಸಾದಾಗ
ವೃದ್ಧ ಅಲ್ಲ ಹಿರಿಯ ಆಗಬೇಕು.
*"ವೃದ್ಧಾಪ್ಯ"* ಇನ್ನೊಬ್ಬರನ್ನು ಆಧಾರಕ್ಕಾಗಿ ಹುಡುಕುತ್ತದೆ.
*"ಹಿರಿತನ"* ಜನರಿಗೆ ಆಧಾರ ನೀಡುತ್ತದೆ.
*" ವೃದ್ಧಾಪ್ಯ"* ಮರೆಮಾಚಲು ಬಯಸುತ್ತದೆ.
*"ಹಿರಿತನ"* ಬೆಳಕಿಗೆ ತರಲು ಬಯಸುತ್ತದೆ.
*" ವೃದ್ಧಾಪ್ಯ"* ಸ್ವಲ್ಪ ಅಹಂಕಾರಿಯಾಗಿರುತ್ತದೆ.
*ಹಿರಿತನ* ಅನುಭವಿ, ವಿನಯಶೀಲ ಮತ್ತು ಸಂಯಮಿಯಾಗಿರುತ್ತದೆ.
*"ವೃದ್ಧಾಪ್ಯ"* ಹೊಸ ತಲೆಮಾರಿನ ವಿಚಾರಗಳಲ್ಲಿ ಮೂಗುತೂರಿಸಿ ತಿದ್ದಲು ಹೊರಡುತ್ತದೆ.
*"ಹಿರಿತನ"* ಯುವ ಪೀಳಿಗೆಗೆ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಬದುಕಲು ಅನುವು ಮಾಡಿಕೊಡುತ್ತದೆ,
*"ವೃದ್ಧಾಪ್ಯ"* ನಮ್ಮ ಕಾಲದಲ್ಲಿ ಹೀಗಿತ್ತು ; ಹಾಗಿತ್ತು ಎಂದು ಚಿಟ್ಟು ಹಿಡಿಸುತ್ತದೆ. *"ಹಿರಿತನ"* ಬದಲಾಗುತ್ತಿರುವ ಕಾಲದೊಡನೆ ತನ್ನ ನಂಟು ಬೆಳೆಸಿ ಅದನ್ನು ತನ್ನದಾಗಿಸಿಕೊಳ್ಳುತ್ತದೆ.
*"ವೃದ್ಧಾಪ್ಯ"* ಹೊಸ ಪೀಳಿಗೆಯ ಮೇಲೆ ತನ್ನ ಅಭಿಪ್ರಾಯವನ್ನು ಹೇರುತ್ತದೆ.
*"ಹಿರಿತನ"* ಯುವ ಪೀಳಿಗೆಯ ಅಭಿಪ್ರಾಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತದೆ ಮತ್ತು ಗೌರವಿಸುತ್ತದೆ,
*"ವೃದ್ಧಾಪ್ಯ"* ಜೀವನದ ಸಂಜೆಯಲ್ಲಿ ಅದರ ಅಂತ್ಯವನ್ನು ಹುಡುಕುತ್ತದೆ.
"*ಹಿರಿತನ*"ಜೀವನದ ಸಂಜೆಯಲ್ಲೂ ನವೋದಯವನ್ನು ಕಾಣುತ್ತದೆ ಹಾಗೂ ಯುವಪೀಳಿಗೆಯ ಸ್ಫೂರ್ತಿಯಿಂದ ಪ್ರೇರಿತವಾಗುತ್ತದೆ.
*"ಹಿರಿತನ"* ಮತ್ತು *"ವೃದ್ಧಾಪ್ಯ"* ಗಳ ನಡುವಿನ ವ್ಯತ್ಯಾಸವನ್ನು ಗಂಭೀರವಾಗಿ ಅರ್ಥ ಮಾಡಿಕೊಳ್ಳುವ ಮೂಲಕ ನಾವು ಈ ಜೀವನವನ್ನು ಪೂರ್ಣvವಾಗಿ ಆನಂದಿಸಲು ಸಮರ್ಥರಾಗುತ್ತೇವೆ.
*ವಯಸ್ಸು ಎಷ್ಟೇ ಇರಲಿ ಸದಾ ಹೂವಿನಂತೆ ಅರಳಿ*
ಉಲ್ಲಾಸ, ಉತ್ಸಾಹಗಳಿಂದ ಬದುಕೋಣ ಮತ್ತು ಇತರರ ಜೀವನಕ್ಕೆ ಸ್ಫೂರ್ತಿಯಾಗಿರೋಣ. 🙏
- ಸಂಗ್ರಹ : ಸೌಜನ್ಯ
No comments:
Post a Comment