Saturday, November 23, 2024

 ಕಥೆ-589

ಸಾರ್ಥಕ ಮತ್ತು ಸಂತೃಪ್ತ ಬದುಕು..

ವ್ಯಾಸ ಮಹರ್ಷಿಗಳು ಮಹಾಜ್ಞಾನಿಗಳು. ಒಂದು ದಿನ ಅವರು ಪಾದಚಾರಿಗಳಾಗಿ ಒಂದು ಹಳ್ಳಿಯ ಹತ್ತಿರ ಹಾಯ್ದು ಹೊರಟಿದ್ದರು. ಆ ಹಳ್ಳಿಯ ರೈತರೆಲ್ಲರೂ ಸೇರಿ ವ್ಯಾಸ ಮಹರ್ಷಿಗಳ ದರ್ಶನಕ್ಕೆ ಹೋದರು. ಶ್ರದ್ಧಾ-ಭಕ್ತಿಯಿಂದ ಮಹಾತ್ಮರಿಗೆ ವಂದಿಸಿ ರೈತರು ಕೇಳಿದರು "ಪೂಜ್ಯರೆ, ನಾವು ಯಾವುದೇ ಧರ್ಮ ಗ್ರಂಥಗಳನ್ನು, ಶಾಸ್ತ್ರಗಳನ್ನು ಓದಿದವರಲ್ಲ ಕೇಳಿದವರಲ್ಲ. ಮೇಲಾಗಿ ನಾವು ಪ್ರಾಪಂಚಿಕರು, ನಮಗೆ ದೇವರ ಪೂಜೆಯನ್ನು ಭಕ್ತಿಯನ್ನು ಮಾಡುವುದಕ್ಕೆ ತಮ್ಮಂತೆ ಸಮಯವನ್ನು ನೀಡಲಿಕ್ಕೂ ಆಗುವುದಿಲ್ಲ. ಹಾಗಾದರೆ ನಾವು ದೇವರನ್ನು ಪೂಜಿಸಿ ಭಕ್ತಿಯನ್ನು ಮಾಡಿ, ಮುಕ್ತಿಯನ್ನು ಪಡೆಯುವುದು ಹೇಗೆ? ನಮಗೊಂದು ಸರಳ-ಸುಂದರ ಭಕ್ತಿಮಾರ್ಗವನ್ನು ದಯವಿಟ್ಟು ಹೇಳಿರಿ,'' ರೈತರ ಮುಗ್ಧ ಭಕ್ತಿಗೆ ಮೆಚ್ಚಿದ ವ್ಯಾಸಮಹರ್ಷಿಗಳು ಹೃದಯ ಬಿಚ್ಚಿ ಹೇಳಿದರು- "ರೈತರಾದ ನೀವು, ಪರಮಾತ್ಮನ ಸಮಾನವಾದ ಅನ್ನವನ್ನು ಜಗತ್ತಿಗೆ ಬೆಳೆದು ಕೊಡುತ್ತೀರಿ. ಅನ್ನ ದೇವರ ಮುಂದೆ ಯಾವ ದೇವರು ಇಲ್ಲ, ಭೂಮಿಯಲ್ಲಿ ಮಳೆಗಾಳಿ ಚಳಿ ಬಿಸಿಲು ಯಾವುದನ್ನೂ ಲೆಕ್ಕಿಸದೇ ದಿನವಿಡಿ ಆಯುಷ್ಯವಿಡೀ ದುಡಿಯುತ್ತೀರಿ. ಅದಕ್ಕಾಗಿ ಗಳೆ-ಗಾಡಿ ಹರಗುವುದು-ಬಿತ್ತುವುದು ಉತ್ತುವುದು ಮಾಡುತ್ತೀರಿ. ನೀವು ಮಾಡುವ ಈ ಕಾರ್ಯಗಳನ್ನೇ ದೇವಕಾರ್ಯಗಳೆಂದು ಮಾಡಿರಿ. ಅದೇ ಪೂಜೆಯಾಗುತ್ತದೆ. ಬೇರೆ ಪೂಜೆ ನಿಮಗೇಕೆ? ನಿಮ್ಮ ದೈನಂದಿನ ಬದುಕೇ ಒಂದು ದಿವ್ಯ ಆರಾಧನೆಯಾಗುತ್ತದೆ. ನಿಮ್ಮ ದುಡಿಮೆಯ ಫಲವೇ ಮಹಾಪ್ರಸಾದವಾಗುತ್ತದೆ!'” ಮಹರ್ಷಿಗಳ ಈ ಹೃದಯಸ್ಪರ್ಶಿ ಉಪದೇಶವನ್ನು ಕೇಳಿದ ರೈತರು ತಮ್ಮ ಬದುಕು ಸಾರ್ಥಕವಾಯಿತೆಂದು ಮಹರ್ಷಿಗಳಿಗೆ ಮನಸಾರೆ ವಂದಿಸಿ ತಮ್ಮ ಬದುಕನ್ನೇ ಒಂದು ದಿವ್ಯ ಆರಾಧನೆ ಮಾಡಿಕೊಳ್ಳುವ ದೃಢಸಂಕಲ್ಪದೊಂದಿಗೆ ತಮ್ಮ ಮನೆಯತ್ತ ಭರವಸೆಯ ಹೆಜ್ಜೆಯನ್ನು ಹಾಕಿದರು. 


ವಿದ್ಯಾರ್ಥಿಗಳು ದೇವರ ಪೂಜೆ, ದೇವರ ಹರಕೆ, ದೇವರಲ್ಲಿ ಬೇಡಿಕೊಂಡರೆ ಪಾಸ್ ಆಗುತ್ತೇನೆಂದು ಸಮಯ ಹರಣ ಮಾಡದೆ, ಭರವಸೆ ಮತ್ತು ಆತ್ಮವಿಶ್ವಾಸದ ಹೆಜ್ಜೆಗಳೊಂದಿಗೆ ವಿದ್ಯಾರ್ಥಿಗಳು ಓದು ಮತ್ತು ವ್ಯಕ್ತಿತ್ವ ವಿಕಸನದ ಕಡೆ ಗಮನಕೊಡಬೇಕು. ಓದುವ ಸಮಯದಲ್ಲಿ ಓದುವ ಕಾರ್ಯವೇ, ದೇವ ಕಾರ್ಯವೆಂದು ಭಾವಿಸಿ, (ಜ್ಞಾನಕ್ಕಿಂತ ಮಿಗಿಲಾದರು ಯಾವುದು ಇಲ್ಲ.) ಓದಿನಿಂದ ಉತ್ತಮ ಫಲಿತಾಂಶ ಪಡೆದು, ಸ್ವಾವಲಂಬಿಯಾಗಿ ಬದುಕಿ ಸಮಾಜಕ್ಕೆ ಒಳ್ಳೆ ಕೆಲಸಗಳನ್ನು ಮಾಡಿದ್ದೆ ಆದರೆ ಅದೇ ಮಹಾಪ್ರಸಾದವೆಂದು ಎಂದುಕೊಳ್ಳಬೇಕು. ಅದು ನಿಜವಾದ ಸಾರ್ಥಕ ಮತ್ತು ಸಂತೃಪ್ತ ಬದುಕು.. (ಕಾಯಕದಿಂದ ಕೈಲಾಸ ಸಾಧ್ಯ)

-ಶ್ರೀ ಸಿದ್ದೇಶ್ವರ ಸ್ವಾಮಿಗಳು

👍💐

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು