ಕಥೆ-591
ದೃಷ್ಟಿ ಒಳ್ಳೆಯದಾದರೆ ಸೃಷ್ಟಿಯಲ್ಲಾ ಒಳ್ಳೆಯದು
ನವದಂಪತಿಗಳು ಒಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮರುದಿನ ಬೆಳಗ್ಗೆ ಪಕ್ಕದ ಮನೆಯಾಕೆ ಬಟ್ಟೆಗಳನ್ನು ಒಗೆದು ಒಣಗಿಸಲು ಹಾಕುತ್ತಿರುವುದನ್ನು ಈಕೆ ಕಿಟಕಿಯಿಂದ ನೋಡಿದಳು. ಒಗೆದ ಬಟ್ಟೆಗಳ ಕೊಳೆ ಸರಿಯಾಗಿ ಹೋಗಿಲ್ಲ ಅಂತ ಆಕೆಗೆ ಅನಿಸಿತು. ನೀಟಾಗಿ ಬಟ್ಟೆ ಒಗೆಯಲು ಆಕೆಗೆ ಗೊತ್ತಿಲ್ಲದಿರಬಹುದು. ಪಕ್ಕದ ಮನೆಯಾಕೆ ಬಟ್ಟೆಗಳನ್ನು ಒಗೆದು ಹಾಕುವಾಗಲೆಲ್ಲಾ ಕಿಟಕಿಯಿಂದ ನೋಡುತ್ತಾ ವ್ಯಂಗ್ಯವಾಗಿ ತನ್ನ ಪತಿಯತ್ರ ಹೇಳುತ್ತಿದ್ದಳು. ಪತ್ನಿಯ ಮಾತಿಗೆ ಆತ ಏನೂ ಪ್ರತಿಕ್ರಿಯಿಸುತ್ತಿರಲಿಲ್ಲ.ಸುಮರು ಒಂದು ತಿಂಗಳ ನಂತರ ಒಂದು ದಿನ ಬೆಳಗ್ಗೆ ಕಿಟಕಿಯಿಂದ ಹೊರಗೆ ನೋಡಿದಾಗ ಒಣಗಿಸಲು ಹಾಕಿದ ಬಟ್ಟೆಗಳು ಶುಭ್ರವಾಗಿರುವ ಬಟ್ಟೆಗಳನ್ನು ನೋಡಿ ಆಶ್ಚರ್ಯದಿಂದ ಪತಿಯತ್ರ ಹೇಳುತ್ತಾಳೆ " ರೀ.. ನೋಡಿ ಆಕೆ ಇವತ್ತು ಚೆನ್ನಾಗಿ ಬಟ್ಟೆ ಒಗೆಯುವುದನ್ನು ಕಲಿತಿದ್ದಾಳೆ ನನಗೆ ಆಶ್ಚರ್ಯವಾಗುತ್ತಿದೆ. ನಿನ್ನೆ ಯಾರೋ ಆಕೆಗೆ ನೀಟಾಗಿ ಬಟ್ಟೆ ಒಗೆಯಲು ಕಲಿಸಿರಬೇಕು .'' ಅಂತ ಪುನಃ ಅಪಹಾಸ್ಯ ಮಾಡುತ್ತಾ ಹೇಳಿದಳು. ಆತ ಹೇಳುತ್ತಾನೆ " ಇವತ್ತು ನೀನು ಏಳುವುದಕ್ಕಿಂತ ಮುಂಚೆಯೇ ನಾನು ಎದ್ದು ನಮ್ಮ ಮನೆಯ ಕಿಟಕಿಯ ಗಾಜುಗಳನ್ನು ಕ್ಲೀನ್ ಮಾಡಿದ್ದೆ ಎಂದನು..
ಆಕೆಗೆ ತನ್ನ ತಪ್ಪಿನ ಅರಿವಾಯಿತು. ಆಕೆಗೆ ಬೇರೇನೂ ಹೇಳೋದಕ್ಕೆ ಇರಲಿಲ್ಲ. ಪಕ್ಕದ ಮನೆಯಾಕೆಯ ತಪ್ಪುಗಳನ್ನು ಈಕೆ ಕಾಣಲು ಕಾರಣ ಈಕೆಯ ಮನೆಯ ದೂಳುಗಳಿಂದ ಕೂಡಿದ ಕಿಟಕಿಯ ಗಾಜುಗಳೇ ಆಗಿದ್ದವು. ನಾವು ಇತರರನ್ನು ನೋಡುವಾಗ ನಮ್ಮ ಮನಸಿನ ಕಿಟಕಿಗಳ ಗಾಜುಗಳು ಶುಭ್ರವಾಗಿರಲಿ. ನಮ್ಮೊಳಗಿನ ಕಿಟಕಿಯ ಗಾಜುಗಳು ದೂಳುಗಳಿಂದ ಕೂಡಿದ್ದರೆ, ನಮ್ಮ ಎದುರಿಗಿರುವವರು ಎಷ್ಟೇ ಒಳ್ಳೆಯವರಾಗಿದ್ದರೂ ನಮಗೆ ಕೆಟ್ಟವರಂತೆ ಕಾಣಿಸುತ್ತಾರೆ..
👍💐💐💐💐
No comments:
Post a Comment