Sunday, December 1, 2024

 ಕಥೆ-596

ಜೀವನದ ಶ್ರೇಯಸ್ಸು


ನಮ್ಮ ಬದುಕಿಗೆ ಎರಡು ಪ್ರಧಾನ ಅಂಗಗಳು. 1) ಬಹಿರಂಗ 2) ಅಂತರಂಗ. ಬಹಿರಂಗವು ಅಂದರೆ ದೇಹವು ಗೋಚರ, ಕಾಣುವಂಥದ್ದು. ಅಂತರಂಗ ಅಥವಾ ಭಾವವು ಅಗೋಚರ. ನಮ್ಮನ್ನು ಬಿಟ್ಟು ಬೇರೆ ಯಾರಿಗೂ ಕಾಣಲಾರದ್ದು. ಒಮ್ಮೊಮ್ಮೆ ನಮ್ಮ ಈ ಭಾವ ಪ್ರಪಂಚವು ನಮಗೇ ಸಂಪೂರ್ಣ ಗೋಚರಿಸದು, ಕಾಣದು. ಕಾಣುವ ಬಹಿರಂಗ ಹಾಗೂ ಕಾಣದ ಅಂತರಂಗ ಇವೆರಡರ ಸುಂದರ ಸಮನ್ವಯವೇ ನಮ್ಮ ಬದುಕು. ಹಾಗೆ ನೋಡಿದರೆ, ಬಹಿರಂಗಕ್ಕಿಂತ ಅಂತರಂಗಕ್ಕೆ ಹೆಚ್ಚು ತೂಕವಿದೆ. ಏಕೆಂದರೆ ಭಾವದ ಸಾಮರ್ಥ್ಯವೇ ಅಷ್ಟು ಆಗಾಧವಾದುದು. ನಾವು ನಿಷ್ಕ್ರಿಯವಾಗಿದ್ದರೂ ನಮ್ಮ ಮನಸ್ಸು ನಿಷ್ಕ್ರಿಯವಾಗಿರುವುದಿಲ್ಲ. ಅದು ಏನಾದರೂ ಕಾರ್ಯ ಮಾಡುತ್ತಲೇ ಇರುತ್ತದೆ. ಸದಾ ಚಟುವಟಿಕೆಯಿಂದ ಇರು ಇದೆ. ನಾವು ಮಲಗಿದರೂ ನಮ್ಮ ಮನಸ್ಸು ಮಲಗಿರುವುದಿಲ್ಲ. ಸುಂದರ ಕನಸುಗಳನ್ನಾದರೂ ಹೆಣೆಯುತ್ತಿರುತ್ತದೆ. ಒಂದೇ ಒಂದು ಕ್ಷಣ ಅದು ವಿಶ್ರಮಿಸುವುದಿಲ್ಲವೆಂದು ಹೇಳಬಹುದು. ಈ ಮನಸ್ಸಿನ ಅವಿಶ್ರಾಂತ ದುಡಿಮೆಯ ಮೇಲೆ ನಮ್ಮ ಜೀವನದ ಶ್ರೇಯಸ್ಸು ನಿಂತಿದೆ . ನಿದ್ದೆಯಲ್ಲಿ ಕಾಣುವದು ಕನಸಲ್ಲ ಯಾವುದು ನಮ್ಮನ್ನು ನಿದ್ದೆ ಮಾಡಲು ಬಿಡುವುದಿಲ್ಲವೋ ಅದೇ ನಮ್ಮ ನಿಜವಾದ ಕನಸು.. ಆ ಕನಸು ನನಸಾಗಲು ಪ್ರಯತ್ನಪಟ್ಟರೆ ಅದೇ ನಮ್ಮ ಶ್ರೇಯಸ್ಸು..

-ಶ್ರೀ ಸಿದ್ದೇಶ್ವರ ಸ್ವಾಮಿಗಳು

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು