ಕಥೆ-599
Realise real eyes,
ಮನೆ ಎನ್ನುವ ಶಬ್ದವನ್ನು ನುಡಿಯುವುದರಿಂದ ನಮ್ಮ ಮನಸ್ಸು ಮನೆಯಷ್ಟೇ ಆಗುತ್ತದೆ. ಆಕಾಶ ಎಂಬ ಶಬ್ದವನ್ನು ಕೇಳುವುದರಿಂದ ನಮ್ಮ ಮನಸ್ಸು ಆಕಾಶದಷ್ಟೇ ವಿಸ್ತಾರವಾಗುತ್ತದೆ. ಹಾಗೇ ಯಾರು ನಿರಂತರ ಒಳ್ಳೆಯದನ್ನು ನೆನೆಯುತ್ತಾರೆಯೋ ಅವರು ಒಳ್ಳೆಯವರೇ ಆಗುತ್ತಾರೆ. ಸಾಮಾನ್ಯವಾಗಿ ಎಲ್ಲರ ಲಕ್ಷ್ಯವು ಮನೆಯತ್ತ ಮನೆಯೊಳಗಿರುವ ಸಣ್ಣ- ಪುಟ್ಟ ವಸ್ತುಗಳತ್ತ ಇರುತ್ತದೆಯೇ ವಿನಃ ವಿಶಾಲವಾದ ಆಗಸದತ್ತ ಇರುವುದಿಲ್ಲ.
ಹಾಗೇ ಸಾಮಾನ್ಯವಾಗಿ ಎಲ್ಲರೂ ಪ್ರಾಪಂಚಿಕ ವಿಷಯಗಳನ್ನೇ ನೋಡುತ್ತಾರೆ, ಒಬ್ಬ ವ್ಯಕ್ತಿಯಲ್ಲಿರುವ ಕೆಟ್ಟದ್ದನ್ನೇ, ನಕಾರಾತ್ಮಕ ಭಾವನೆಗಳನ್ನು ಕೊಂಡುಕೊಳ್ಳುತ್ತಾರೆ ವಿನಃ ಅವರಲ್ಲಿರುವ ಒಳ್ಳೆಯ ಸಕಾರಾತ್ಮಕ ಭಾವನೆಗಳನ್ನು ನೋಡಲು ಇಷ್ಟಪಡುವುದಿಲ್ಲ, ಉತ್ತಮ ಜೀವನವನ್ನು ಅನುಭವಿಸಬೇಕು, ಆನಂದಿಸಬೇಕು ಎನ್ನುವುದಿಲ್ಲ.We don't realise real eyes, ಆದರೆ ಸಂತರು, ಶರಣರು ನಮ್ಮೊಂದಿಗೆ ಪ್ರಪಂಚದಲ್ಲಿದ್ದರೂ, ವಾಸ್ತವತೆಯನ್ನು ಎಂದೂ ಮರೆಯುವುದಿಲ್ಲ.
ಅಂತೆಯೇ ಅವರು ಪ್ರಾಪಂಚಿಕ ಬಂಧನಕ್ಕೆ ಒಳಗಾಗುವುದಿಲ್ಲ. ಜೀವನ್ಮುಕ್ತರಾಗುತ್ತಾರೆ, ಲೋಕಪೂಜ್ಯರೆನಿಸುತ್ತಾರೆ. ದೊಡ್ಡಗುರಿಯುಳ್ಳವರು ದೊಡ್ಡವರಾಗುತ್ತಾರೆ. !
No comments:
Post a Comment