Sunday, February 9, 2025

 DD National live Pariksha pe charche with PM

ಕಥೆ-662

ಬದಲಾವಣೆ ಆದಾಗ ಮಕ್ಕಳ ಪ್ರಗತಿ

ಇವತ್ತು ನಾವು ಮಕ್ಕಳನ್ನು ನಮ್ಮಿಷ್ಟದಂತೆ ಬೆಳೆಸುವ ಪ್ರಯತ್ನವನ್ನು ಮಾಡುತ್ತೇವೆಯೇ ಹೊರತು ಅವರಲ್ಲಿರುವ ಆಸಕ್ತಿ ರಂಗ ಗುರುತಿಸುವುದಿಲ್ಲ.. ಮಕ್ಕಳನ್ನು ನಾವುಗಳು ನಮ್ಮ ಆಸಕ್ತಿರಂಗದಲ್ಲಿ ಬೆಳೆಸಲು ಪ್ರಯತ್ನಿಸುತ್ತೇವೆ.. ನಮ್ಮ ಆಸಕ್ತಿ ರಂಗವೂ ಮಕ್ಕಳ ಆಸಕ್ತಿ ರಂಗವು ಒಂದೇ ಆಗಿದ್ದಾಗ ಅದು ಉತ್ತಮ ಫಲಿತಾಂಶವನ್ನು ತಂದುಕೊಡುತ್ತದೆ.. ಅದು ವಿಭಿನ್ನವಾದಾಗ ಮಕ್ಕಳಿಗೆ ತೊಂದರೆ ಆಗುತ್ತದೆ.. ನಾವು ಮಕ್ಕಳ ಆಸಕ್ತಿರಂಗವನ್ನು ಅರಿತುಕೊಳ್ಳಬೇಕಿದೆ..

ಅದಕ್ಕೆ ಪೂರಕ ವಾತಾವರಣ ನಿರ್ಮಾಣವಾದಾಗ, ಅದಕ್ಕೆ ಸಂಬಂಧಿಸಿದ ಸಾಧಕರ ಕಥೆ ಹೇಳಿದರೆ.. ಸೂಕ್ತ ಮಾರ್ಗದರ್ಶನ ಮಾಡಿದ್ದೆ ಆದರೆ ಮಕ್ಕಳ ಪ್ರಗತಿ ಅತ್ಯುತ್ತಮವಾಗಿರುತ್ತದೆ.. ಮಕ್ಕಳ ಆಸಕ್ತಿ ಇರುವ ವಿಷಯದಲ್ಲೇ ಸಾಧಕರ ಕಥೆಗಳನ್ನ ಆಯ್ಕೆ ಮಾಡಿಕೊಳ್ಳಬೇಕು. ಅತ್ಯಂತ ಎತ್ತರದ & ಶ್ರೇಷ್ಠವಾದ ಆದರ್ಶಗಳು ನಮ್ಮ ಮಕ್ಕಳ ಕೈಗೆ ಸಿಗುವಂತಾಗಬೇಕಾಗಿದೆ.. ಇದಕ್ಕಾಗಿ ನಮಗೆ ಮತ್ತು ಮಕ್ಕಳಿಗೆ ಗ್ರಂಥಾಲಯದ ಬಳಕೆ ಬೇಕಾಗಬಹುದು... ಸೂಕ್ತ ತರಬೇತಿ ಬೇಕಾಗಬಹುದು... ಓದಿನಲ್ಲಿ ಹಿಂದಿರುವ ವಿದ್ಯಾರ್ಥಿ ಬೇರೆ ಯಾವುದೋ ಒಂದು ರಂಗದಲ್ಲಿ ಮುಂದಿರುತ್ತಾನೆ.. ಅದನ್ನು ಗುರುತಿಸುವಲ್ಲಿ ನಾವು ವಿಫಲರಾಗುತ್ತೇವೆ.. ಅತಿಯಾದ ಒತ್ತಡದಿಂದ ಹೇರುವ ಯಾವುದೇ ವಿಷಯಗಳು ಮಕ್ಕಳಲ್ಲಿ ಅಡ್ಡ ಪರಿಣಾಮಗಳನ್ನುಂಟು ಮಾಡುತ್ತವೆ ಎಂಬುದು ರುಜುವತಾಗಿದೆ, ದೀರ್ಘಕಾಲಿಕ ಒತ್ತಡ ಮಕ್ಕಳಲ್ಲಿ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ. ಬದಲಾವಣೆ ಆದಾಗ ಮಕ್ಕಳ ಪ್ರಗತಿಯಲ್ಲಿ ಬದಲಾವಣೆ ಸಾಧ್ಯ...

- Shankargouda Basapur 

     GHS Hiremyageri

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು