ಕಥೆ-687
ಕಲಿಕೆಗೆ ಮಾರ್ಕ್ಸ್ ಬರದಿದ್ದರೂ ಪರವಾಗಿಲ್ಲ ರಿಮಾರ್ಕ್ಸ್ ಇರಬಾರದು..
ಸ್ಯಾಮ್ ಮತ್ತು ಟಾಮ್ ಎಂಬ ಇಬ್ಬರು 9ನೇ ತರಗತಿ ಮಕ್ಕಳು, ತನ್ನ ತೀಕ್ಷ್ಣ ಬುದ್ಧಿಶಕ್ತಿಯಿಂದ ಸ್ಯಾಮ್ ಪ್ರತಿ ಪರೀಕ್ಷೆಯಲ್ಲೂ ಉತ್ತೀರ್ಣನಾದನು, ಹೀಗೆ ಅಂಕ ಪಡೆದಂತೆಲ್ಲ, ಅವನಲ್ಲಿ ದುರಹಂಕಾರ ಹೆಚ್ಚುತ್ತಾ ಹೋಯಿತು, ವಿನಯಶೀಲತೆ ಮರೆಯಾಯಿತು, ಹಿರಿಯರು ಕಿರಿಯರು ಎನ್ನುವುದು ಉಳಿಯಲಿಲ್ಲ.. ನಾನು ಎಂಬ ಅಹಂಕಾರ ಬೆಳೆಯುತ್ತಾ ಹೋಯಿತು.. ಅದು ಅವನ ಪ್ರತಿಭೆಯ ಮೇಲೆ ಕರಿ ನೆರಳು ಬೀರಲು ಶುರು ಮಾಡಿತು. ಅವನು ತನ್ನ ಅಹಂಕಾರದಿಂದ ಅತ್ತ ನೌಕರಿ ಪಡೆಯದೆ, ಇತ್ತ ಸ್ವಉದ್ಯೋಗ ಮಾಡದೆ ಸಮಾಜಕ್ಕೆ ದಂಡಪಿಂಡವಾದನು.. ಅವನಿಂದ ಎಲ್ಲರೂ ದೂರವಾದರು...
ಮತ್ತೊಂದೆಡೆ, ಟಾಮ್ ದಯಾಳು, ಆದರೆ ಅವನು ತನ್ನ ಅಧ್ಯಯನದಲ್ಲಿ ಹೆಣಗಾಡುತ್ತಿದ್ದನು. ಆದರೆ ಅವನ ವಿನಯಶೀಲತೆ ಮತ್ತು ವಿದೇಯತೆ, ಎಲ್ಲರಿಗೂ ಇಷ್ಟವಾಗುತ್ತಿದ್ದವು.. ಮುಂದೆ ಪ್ರಯತ್ನ ಪಟ್ಟು ಸ್ವಂತ ಉದ್ಯೋಗ ಮಾಡಿ ಸಾಕಷ್ಟು ಜನರಿಗೆ ಉದ್ಯೋಗ ನೀಡಿದ...
ಈ ಕಥೆ ಒಂದು ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.. ಒಬ್ಬ ವ್ಯಕ್ತಿಯನ್ನು ನಿಜವಾಗಿಯೂ ಉತ್ತಮ ವಿದ್ಯಾರ್ಥಿಯನ್ನಾಗಿ ಮಾಡುವುದು ಯಾವುದು ?
ಕೇವಲ ಹೆಚ್ಚು ಅಂಕಗಳನ್ನು ಪಡೆಯುಡುವುದು ಉತ್ತಮ ವಿದ್ಯಾರ್ಥಿ ಲಕ್ಷಣವಲ್ಲ.. ವಿನಯವಿಲ್ಲದ ವಿದ್ಯೆ ವ್ಯರ್ಥ..
ನಾನು ಕಂಡಂತೆ ಶಾಲಾ ಹುಡುಗರಲ್ಲಿ ಒಗ್ಗಟ್ಟು ಅತ್ಯುತ್ತಮವಾಗಿರುತ್ತದೆ... ಅಷ್ಟೇ ಕಿಡಿಗೇಡಿತನ, ತುಂಟತನ, ಮತ್ತು ಹೆಚ್ಚಿನ ಕ್ರಿಯಾಶೀಲತೆ ಇರುತ್ತದೆ, ಅಷ್ಟೇ ಉಂಬತನವಿರುತ್ತದೆ ಅವರಲ್ಲಿರುವ ಆ Hyper potential ( ಹೆಚ್ಚು ಕ್ರಿಯಾಶೀಲತೆ) ಯನ್ನು ಅವರ ಆಸಕ್ತಿ ರಂಗಕ್ಕೆ ಬಳಸಿದ್ದೆ ಆದರೆ ಅವರೊಬ್ಬ ಸಾಧಕರಾಗುತ್ತಾರೆ...
ಇತ್ತೀಚಿಗೆ ಶಾಲಾ ಹುಡುಗರಲ್ಲಿ ಕ್ರಿಕೆಟ್ ವ್ಯಕ್ತಿಗಳ ಆರಾಧನೆ, ಸಿನಿಮಾ ನಟರ ಆರಾಧನೆ ಮತ್ತು ಇತ್ತೀಚಿಗೆ ಅಶ್ಲೀಲ ಪದಗಳ ಜಾನಪದ ಹುಚ್ಚು, ಮತ್ತು ಆರಾಧನೆ ಹೆಚ್ಚಾಗುತ್ತಿದೆ.. ಅದೊಂದು ಆಕರ್ಷಣೆ.. ಆ ಆಕರ್ಷಣೆಯೇ ಅನುಕರಣೀಯವಾದರೆ ವಿದ್ಯಾರ್ಥಿಗಳು ವರ್ತನೆಯಲ್ಲಿ ಬದಲಾಗುತ್ತಾರೆ... ಬದಲಾವಣೆಗಳು ಅವರ ಹೇರ್ ಕಟಿಂಗ್ ನಲ್ಲಿ (ಎಷ್ಟೋ ವಿದ್ಯಾರ್ಥಿಗಳು ಹೆಬ್ಬುಲಿ ಕಟಿಂಗ್ ನಲ್ಲಿ ಶಾಲೆಗೆ ಬರುತ್ತಿವೆ) ಅವರ ಉಡುಗೆ ತೊಡುಗೆಗಳಲ್ಲಿ ಬದಲಾವಣೆ (ಎಷ್ಟೋ ವಿದ್ಯಾರ್ಥಿಗಳು ನೈಟ್ ಪ್ಯಾಂಟ್ ನಲ್ಲಿ ಶಾಲೆಗೆ ಬರುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ), ಮೋಜು ಮಸ್ತಿ, ಕೆಲವೊಂದು ಚಟಗಳು ಆವರಿಸಿಕೊಳ್ಳಬಹುದು.. ಯಾರೊಂದಿಗೆ ಹೇಗೆ ಮಾತನಾಡಬೇಕೆಂಬುದನ್ನು ಸಹ ಮರೆತುಬಿಡುತ್ತಾರೆ.. ಅವರ ಹೆತ್ತ ತಂದೆ ತಾಯಿಗಳಿಗೆ ಅಗೌರವ ತೋರಲು ಆರಂಭಿಸುತ್ತಾರೆ.. ನಂತರ ಶಾಲೆಗೆ ಬಂದಾಗ ಶಿಕ್ಷಕರ ಜೊತೆ ಸಹ ಇದು ಪುನರಾವರ್ತನೆ ಆಗುತ್ತದೆ..
ಹೆತ್ತ ತಂದೆ ತಾಯಿಗಳಿಗೆ ಮತ್ತು ಗುರುಗಳಿಗೆ ಗೌರವ ಕೊಡದ ಸಮಾಜ ಯಾವತ್ತೂ ಉದ್ಧಾರ ಆಗಲ್ಲ, ಅದು ಅವನತಿಯ ಹಾದಿ ಹಿಡಿದಂತೆ...
ಕೆಲವೊಂದು ಸಂದರ್ಭದಲ್ಲಿ ಇಂತಹ ವಿದ್ಯಾರ್ಥಿಗಳಿಗೆ ಪ್ರೀತಿ ವಿಶ್ವಾಸದಿಂದ ತಿಳಿ ಹೇಳಿದಾಗ ಬದಲಾಗುತ್ತಾರೆ, ಕೆಲವೊಮ್ಮೆ ಬದಲಾವಣೆ ಮಾಡಬಹುದಾದ ಪ್ರೀತಿಯಿಂದ ನೀಡಿದ ಚಿಕ್ಕ ಶಿಸ್ತಿನ ಕ್ರಮಗಳಿಗೆ ಬದಲಾಗುತ್ತಾರೆ.. ಆಗಲು ಬದಲಾಗದಿದ್ದಾಗ,ಇಂತಹ ದುರ್ವರ್ತನೆಗಳು ಹೆಚ್ಚಾದಾಗ ಆ ಮಕ್ಕಳನ್ನು ಮೋನೋತಜ್ಞರ ಸಹಾಯದಿಂದ ಬದಲಿಸಬಹುದಾಗಿದೆ... ಇಲ್ಲದಿದ್ದರೆ ಸಮಾಜದಲ್ಲಿ ಅವರು ಮುಂದೆ ರೌಡಿಗಳು ಆಗಬಹುದು...
ಎಲ್ಲರಿಗೂ ಮನೋವೈದ್ಯರ ಅಗತ್ಯವಿಲ್ಲ.. ಮೊಗ್ಗಿನ ಮನಸ್ಸಿನಂತಹ, ಸರಿ ತಪ್ಪುಗಳ ಅರಿವಿಲ್ಲದ.. ಸದ್ಯದ ಜನರೇಷನ್ ಮಕ್ಕಳು ನಾವೆಲ್ಲಿ ಎಡವುತ್ತಿದ್ದೇವೆ ಎಂದು ವಿಮರ್ಶೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಂದೊದಗಿದೆ.. ವಿದ್ಯಾರ್ಥಿ ಜೀವನ ಬಂಗಾರದ ಜೀವನ ಅಂತಾರೆ, ನಾವದನ್ನು ಬದಲಿಸಿಕೊಳ್ಳಬೇಕಿದೆ.. ಅದು ಬಂಗಾರದಂತ ಸಮಯ ( Golden time).. ಇದನ್ನು ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ ಒಬ್ಬ ವ್ಯಕ್ತಿಗೆ ಬಹಳಷ್ಟು ಸೀರಿಯಸ್ ಆದಾಗ ಅವನನ್ನು ಕೂಡಲೇ ಆಸ್ಪತ್ರೆಗೆ ಸೇರಿಸುವ ಸಮಯವೇ ಗೋಲ್ಡನ್ ಟೈಮ್, ಆ ಸಮಯದಲ್ಲಿ ಆ ವ್ಯಕ್ತಿ ಆಸ್ಪತ್ರೆ ಸೇರದಿದ್ದರೆ ಮಧ್ಯದಲ್ಲಿಯೇ ಪ್ರಾಣ ಕಳೆದುಕೊಳ್ಳಬಹುದು.. ಹಾಗೆ ವಿದ್ಯಾರ್ಥಿಗಳು ಈ ಸಮಯವನ್ನು ಸದ್ಬಳಕೆ ಮಾಡಿಕೊಂಡರೆ Success ಆಗಿ ಭವಿಷ್ಯ ಉಜ್ವಲ ಮಾಡಿಕೊಳ್ಳಬಹುದು.... ಇಲ್ಲದಿದ್ದರೆ failure ಆಗಿ ಭವಿಷ್ಯ ಹಾಳಾಗಲೂಬಹುದು.. ವಿದ್ಯಾರ್ಥಿ ಜೀವನ ಕಾದ ಬಂಗಾರದಂತೆ, ಆ ಸಮಯ ಬಳಸಿ ವಿದ್ಯಾರ್ಥಿಗಳು ಉತ್ತಮ ಚಿನ್ನಾಭರಣ ಆಗಬೇಕಿದೆ.. ಆಗ ನಿಮಗೆ ಹೆಚ್ಚು ಗೌರವ ತಾನಾಗಿಯೇ ಸಿಗುತ್ತದೆ..
ಉತ್ತಮ ವಿದ್ಯಾರ್ಥಿಯಾಗಲು ಧರಿಸಲೇಬೇಕಾದ ಆಭರಣಗಳೆಂದರೆ,
ಒಳ್ಳೆಯ ಕೇಳುಗ,
ಸಂವಹನ ಕೌಶಲ,
ಓದುವ ಹವ್ಯಾಸ
( ಜ್ಞಾನದ ಹಸಿವು) ವಿನಯತೆ-ಪ್ರಾಮಾಣಿಕತೆ,
ಜವಾಬ್ದಾರಿ, ಗುರಿ ಸಾಧನೆಗೆ ತುಡಿತ,
ಸಮಯಪಾಲನೆ,
ಸ್ಪರ್ಧಾತ್ಮಕ- ಸ್ನೇಹಪರ ಮನೋಭಾವ
ಕಷ್ಟಪಟ್ಟು ದುಡಿದು ತಿನ್ನಬೇಕೆಂಬ ಭಾವನೆ ಇರಬೇಕು...
ವಿದ್ಯೆಯನ್ನು ಅರಿತುಕೊಳ್ಳಲು ಬರುವ ಅಭ್ಯರ್ಥಿಗೆ ವಿನಯವು ಯಾವತ್ತೂ ಭೂಷಣ...
ವಿದ್ಯೆಗೆ ವಿನಯವೇ ಭೂಷಣ
- Shankargouda Basapur
GHS Hiremyageri
No comments:
Post a Comment