Saturday, March 15, 2025

 ಕಥೆ-689

ಇನ್ನೊಬ್ಬರಿಗೆ ಸಹಾಯ ಹೀಗೂ ಮಾಡಬಹುದೇ?


ಸಾಲು ಸಾಲು ರಜೆಗಳಿದ್ದುದರಿಂದ ಬಸ್ಸಿನಲ್ಲಿ ಜನ ಕಿಕ್ಕಿರಿದು ತುಂಬಿದ್ದರು. ಹರಸಾಹಸ ಮಾಡಿ ಅಜ್ಜ ಬಸ್ ಹತ್ತಿದ. ಕೂಡಲು ಜಾಗವಿರಲಿಲ್ಲ. ಅಷ್ಟರಲ್ಲಿ ಕುಳಿತಿದ್ದ ಯಾರೋ ಒಬ್ಬ ಎದ್ದು ನಿಂತು ತನ್ನ ಆಸನವನ್ನು ಬಿಟ್ಟು ಕೊಟ್ಟನು, ಅವನು ಸ್ವಲ್ಪ ಮುಂದೆ ತೆರಳಿ ನಿಂತನು. ಅಜ್ಜ ಮರು ಮಾತನಾಡದೆ ಕುಳಿತುಕೊಂಡ.  


ಅಷ್ಟರಲ್ಲಿ ಮುಂದೆ ಬಂದ ಸ್ಟಾಪ್ ನಲ್ಲಿ ಒಬ್ಬರು ಪ್ರಯಾಣಿಕರು ಇಳಿದರು. ಖಾಲಿಯಾದ ಆ ಸೀಟಿನಲ್ಲಿ ಆಜ್ಜನಿಗೆ ಸೀಟ್ ಬಿಟ್ಟು ಕೊಟ್ಟಿದ್ದ ಆ ಪ್ರಯಾಣಿಕ ಮತ್ತೆ ಕುಳಿತನು.


ಅಷ್ಟರಲ್ಲಿ ಮತ್ತೊಬ್ಬ ಪ್ರಯಾಣಿಕ ಬಸ್ ಹತ್ತಿದ. ಮತ್ತೆ ಅವನು ಎದ್ದುನಿಂತು ಆ ಹೊಸಬನಿಗೆ ಮತ್ತೆ ತನ್ನ ಆಸನವನ್ನು ಕೊಟ್ಟನು. 


ಹೀಗೆಯೇ ಮುಂದಿನ ನಾಲ್ಕೈದು ನಿಲ್ದಾಣಗಳಲ್ಲಿ ಅವನು ಕುಳಿತಿರುವ ಆಸನವನ್ನು ಎಲ್ಲರಿಗೂ ನೀಡುವುದನ್ನು ಅವನು ಮುಂದುವರಿಸಿದ.


ಅಜ್ಜ ಎಲ್ಲವನ್ನೂ ಗಮನಿಸುತ್ತಿದ್ದ, ಕೊನೆಯ ನಿಲ್ದಾಣದಲ್ಲಿ ಬಸ್ ಇಳಿಯುವ ಮೊದಲು ಅವನೊಂದಿಗೆ ಮಾತನಾಡಿದ. "ನೀನು ಕುಳಿತು ಕೊಳ್ಳುವ ಬದಲು ನಿನ್ನ ಆಸನವನ್ನು ಬೇರೆಯವರಿಗೆ ಏಕೆ ನೀಡುತ್ತಿರುವೆ?" ಎಂದು ಕೇಳಿದ. 


ಅವನ ಉತ್ತರ ಆಶ್ಚರ್ಯ ತಂದಿತ್ತು. "ನಾನು ವಿದ್ಯಾವಂತನಲ್ಲ, ಶ್ರೀಮಂತನೂ ಅಲ್ಲ. ಕೂಲಿ ಕೆಲಸ ಮಾಡುವವನು. ಯಾರಿಗೂ ಯಾವುದೇ ರೀತಿಯಲ್ಲಿ ಸಹಾಯ ಮಾಡಲು ನನಗೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ನಾನು ಇದನ್ನು ಪ್ರತಿದಿನ ಮಾಡುತ್ತಿದ್ದೇನೆ. ಈ ಕೆಲಸ ತುಂಬಾ ಸುಲಭ" ಎಂದನು.


 ಮುಂದುವರಿದು ನುಡಿದ 


"ನಾನು ಸೀಟು ಕೊಟ್ಟಾಗ ನನಗೆ ಪ್ರತಿಯಾಗಿ ಧನ್ಯವಾದ ಸಲ್ಲಿಸುತ್ತಾರೆ, ನಾನು ಯಾರಿಗೂ ಏನನ್ನೂ ಕೊಡಲಾಗದ ಪರಿಸ್ಥಿತಿಯಲ್ಲಿದ್ದೇನೆ, ಈ ತೃಪ್ತಿಯೇ ನನಗೆ ಸಾಕು. ಆ ತೃಪ್ತಿಯಿಂದ ನಾನು ಆರಾಮವಾಗಿ ಮಲಗುತ್ತೇನೆ" ಎಂದನು.


ನಾವು ಬೇರೆಯವರಿಗೆ ಕೊಡಬೇಕೆಂದರೆ ನಮ್ಮ ಬಳಿ ಏನೂ ಇಲ್ಲದಿದ್ದರೂ ಯಾವುದಾದರೊಂದು ರೂಪದಲ್ಲಿ ಕೊಡಬಹುದು. ನಾವು ಶ್ರೀಮಂತರು ಮತ್ತು ಸ್ಥಿತಿವಂತರಾಗಿದ್ದರೆ ಮಾತ್ರ ನಾವು ಇನ್ನೊಬ್ಬರಿಗೆ ಏನನ್ನಾದರೂ ನೀಡಬಹುದು ಎಂದು ಯೋಚಿಸುವುದು ತಪ್ಪು ಎಂದು ತಿಳಿಸಿದ ಆ ಯುವಕನ ನಡೆ ನಿಜಕ್ಕೂ ಆಶ್ಚರ್ಯಕರ. ಅನುಕರಣಿಯ...

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು