ಕಥೆ-704
ಬಡತನ ಸಾಧನೆಗೆ ಹಿನ್ನಡೆಯಲ್ಲ,
ಅದು ರಾಯಬಾಗ ತಾಲೂಕಿನ ನಿಪನಾಳ ಗ್ರಾಮ. ಅಲ್ಲೊಂದು ತಗಡಿನ ಮನೆ. ತಂದೆ ಇಲ್ಲ. ತಾಯಿ ಮತ್ತು 'ಇಬ್ಬರು ಸಹೋದರರು ಕೂಲಿ ಮಾಡುತ್ತಾ ಕಾವೇರಿ ಪವಾಡಿ ಮಲ್ಲಾಪುರೆಯನ್ನು ಓದಿಸಿದರು. ಆ ಕಾವೇರಿ ಈಗ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ನಾಲ್ಕನೇ Rank....
ಇರಲು ಉತ್ತಮ ಮನೆಯೂ ಇಲ್ಲ. ಚಿಕ್ಕದಾದ ತಗಡಿನ ಮನೆ, ತಾಯಿ ಮತ್ತು ಸಹೋದರರು ದುಡಿಮೆ ಮಾಡಿದರಷ್ಟೇ ಮನೆ ಮಂದಿಗೆಲ್ಲ ಊಟ. ಇಷ್ಟೆಲ್ಲ ಕಷ್ಟ, ಸಮಸ್ಯೆಗಳಿದ್ದರೂ ಕಾವೇರಿಯ ಓದಿಗೆ ಎಲ್ಲಿಯೂ ಹಿನ್ನಡೆ ಆಗಿಲ್ಲ. ಬಡತನ ಸಾಧನೆಗೆ ಹಿನ್ನಡೆಯಲ್ಲ, ಪ್ರಯತ್ನ ಮಾಡದೇ ಇರೋದು ಸಾಧನೆಗೆ ಹಿನ್ನಡೆ...
ನನ್ನ ತಾಯಿ, ಸಹೋದರರು ನನಗಾಗಿ ಬಹಳ ಕಷ್ಟಪಟ್ಟಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ಬರೆದು ಜನ ಸೇವೆ ಮಾಡುವ ಬಯಕೆಯಿದೆ.
-ಕಾವೇರಿ ಪವಾಡಿ ಮಲ್ಲಾಪುರೆ ವಿದ್ಯಾರ್ಥಿನಿ
No comments:
Post a Comment