Thursday, May 22, 2025

 ಕಥೆ-740

ಹೃದಯ ದೀಪ (Heart Lamp)

ವಸ್ತು ಪರಮಾಣುಗಳಿಂದ ಮಾಡಲ್ಪಟ್ಟಿದ್ದರೆ

ಜಗತ್ತು ಕಥೆಗಳಿಂದ 

ಮಾಡಲ್ಪಟ್ಟಿದೆ.

ಕನ್ನಡದ ಆಸ್ತಿ ನಮ್ಮ ಮಾಸ್ತಿ,

  ಅನೇಕ ಸಣ್ಣ ಸಣ್ಣ ಕಥೆಗಳನ್ನು ಬರೆದಿರುವುದರಿಂದ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರನ್ನು ಸಣ್ಣ ಕಥೆಗಳ ಜನಕ ಎಂದು ಕರೆಯುತ್ತೇವೆ

ಪ್ರತಿಯೊಬ್ಬರ ಜೀವನವೂ ಒಂದು ಕಥೆ ಅಲ್ಲವೇ...

ಕಥೆ ಎಂಬುದು ಪಾತ್ರದಾರಿಗಳನ್ನೊಳಗೊಂಡ ಕಾಲ್ಪನಿಕ ಅಥವಾ ನೈಜ ಘಟನೆಗಳ ಖಾತೆಯಾಗಿದೆ.

Stories are the engines of our imaginations

 ಪ್ರತಿ ಸಣ್ಣ ವಿಷಯವೂ ಇಡೀ ಕಥೆಯ ತೂಕವನ್ನು ಒಳಗೊಂಡಿರುತ್ತದೆ. ಒಳ್ಳೆಯ ಕಥೆಗಳಿಗೆ ತೂಕವಿದೆ, ಒಳ್ಳೆಯ ಬೆಲೆ ಮತ್ತು ಗೌರವವಿದೆ. ಅಂತಹ ಕಥಾ ಸಂಕಲನ- ಹೃದಯ ದೀಪ...

ಬಾನು ಮುಷ್ತಾಕ್ ಅವರ "ಹೃದಯ ದೀಪ"(Heart Lamp) ಕಥಾ ಸಂಕಲನಕ್ಕೆ 2025 ರ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಂದಿರೋದು ಹೆಮ್ಮೆಯ ವಿಷಯ..

ಮುಸ್ಲಿಂ ಮಹಿಳೆಯರ ದೈನಂದಿನ ಜೀವನದಲ್ಲಿನ ನೋವುಗಳು ಮತ್ತು ಮೌನ ದಂಗೆಗಳನ್ನು ಅರ್ಥೈಸುವ ಮತ್ತು ಅವರ ಜೀವನದ ರೀತಿ ರಿವಾಜುಗಳ ಕುರಿತಾದ ಘಟನೆಗಳನ್ನು ಈ ಕಥಾ ಸಂಕಲನ ಹೊಂದಿದೆ..

 1990 ಹಾಗೂ 2023ರ ನಡುವೆ ಪ್ರಕಟವಾಗಿದ್ದ 12 ಕಥೆಗಳನ್ನು ಒಳಗೊಂಡಿರುವ ಈ ಸಂಕಲನವನ್ನು ದೀಪಾ ಭಸ್ತಿ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದರು.‌ 

ಬೂಕರ್ ಪ್ರಶಸ್ತಿ ಎನ್ನುವುದು ಪ್ರತಿ ಸಾಹಿತಿಯ ಕನಸು. ಬೂಕರ್ ಪ್ರಶಸ್ತಿಯ ಕನಸನ್ನು ಕನ್ನಡಿಗರೂ ಕಂಡಿದ್ದರು. ಅದು ಮೊದಲ ಬಾರಿ ಈಡೇರಿದೆ. ಇದರೊಂದಿಗೆ ಕನ್ನಡದ ಕೃತಿಯೊಂದಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಹಾಗೂ ಗೌರವ ಸಂದಿದೆ.ಇದು ಕನ್ನಡಕ್ಕೆ, ಕನ್ನಡಿಗರಿಗೆ ಸಂದ ಗೌರವ... ಇದಕ್ಕೆ ಕಾರಣರಾದ ಬಾನು ಮುಷ್ತಾಕ್ ಮತ್ತು ದೀಪಾ ಭಸ್ತಿ ಅವರಿಗೆ ಅಭಿನಂದನೆಗಳು..

ಚಿಕ್ಕವರಿದ್ದಾಗ ಪಂಚತಂತ್ರ ಕಥೆಗಳು, ಈಸೋಪನ ಕಥೆಗಳು ತೆನಾಲಿರಾಮನ ಕಥೆಗಳು, ಅಕ್ಬರ್ ಬೀರಬಲ್ ನ ಕಥೆಗಳನ್ನು ಕೇಳುತ್ತಿದ್ದೆವು ಓದುತ್ತಿದ್ದೆವು. ಈಗ ಮಕ್ಕಳಿಗೆ ಪಠ್ಯಕ್ರಮದ ಒತ್ತಡದಿಂದಾಗಿ ಮಕ್ಕಳಿಗೆ ಮೌಲ್ಯ ಶಿಕ್ಷಣದ ಕಥೆಗಳು ಸಿಗದಂತಾಗಿದೆ, ಮೌಲ್ಯ ಶಿಕ್ಷಣ ಮಾನವ ಜೀವನದ ಭದ್ರ ಬುನಾದಿಯಾಗಬೇಕು, ಇಲ್ಲದಿದ್ದರೆ ಸಮಾಜಕ್ಕೆ ತೊಂದರೆ ಕಟ್ಟಿಟ್ಟ ಬುತ್ತಿ.. 

ನಮ್ಮ ಸರ್ಕಾರವು ಈ ವರ್ಷದಿಂದ ಮೌಲ್ಯ ಶಿಕ್ಷಣವನ್ನು ಕಡ್ಡಾಯಗೊಳಿಸಿರುವುದು ಸ್ವಾಗತಾರ್ಹ.. 

ಡಾಕ್ಟರ್ ಆಗು ಇಂಜಿನಿಯರ್ ಆಗು ಅಧಿಕಾರಿಯಾಗು, ಏನೇ ಆಗು ಮೊಟ್ಟಮೊದಲು ಮನುಷ್ಯನಾಗು ಎನ್ನುವುದನ್ನು ಕಲಿಸುವುದೇ ಮೌಲ್ಯ ಶಿಕ್ಷಣ..

 ಕಥೆಗಳಿಂದ ಪ್ರಯೋಜನಗಳು

1)ಜೀವನಕ್ಕೆ ಬೇಕಾದ ಭದ್ರ ಬುನಾದಿ

2)ಕಲ್ಪನೆ(Imagination)

3)ಕ್ಯೂರಿಯಾಸಿಟಿ 

4)ಕಾನ್ಫಿಡೆನ್ಸ್ level ಹೆಚ್ಚಳ. 

5)Focus ಏಕಾಗ್ರತೆ ಹೆಚ್ಚಳ.

6)ಭಾಷಾ ಕೌಶಲ ಅಭಿವೃದ್ಧಿ. 

7)ಸಂವಹನ ಕೌಶಲ ಅಭಿವೃದ್ಧಿ 8)ಸಹಾನುಭೂತಿ ಬೆಳವಣಿಗೆ.

9)ಸಾಧನೆಗೆ ಸ್ಫೂರ್ತಿ  

10)ಮಿಗಿಲಾಗಿ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಸಹಾಯಕ.

"Sharing our story is one of the greatest gift we can give to the world"


ಕಥೆ ಕೇಳೋಣ ಕಥೆ ಹೇಳೋಣ..

-ಶಂಕರಗೌಡ ಬಸಾಪೂರ

ಸ.ಪ.ಪೂ.ಕಾ(ಪ್ರೌ.ಶಾ.ವಿ) ಹಿರೇಮ್ಯಾಗೇರಿ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು