Friday, July 25, 2025

 ಕಥೆ-802

ಪಿಡಿಒ ಪರೀಕ್ಷೆಗೆ ಸಿದ್ಧತೆ ಹೇಗೆ?

ಪಿ.ಡಿ.ಒ (Panchayat Development Officer) ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆ ಯಾವುದೇ ಪದವಿ. ನೀವು ಪದವಿ ಮುಗಿಯುವವರೆಗೆ ಅರ್ಜಿ ಸಲ್ಲಿಸಲು ಬರುವುದಿಲ್ಲ. ಆದರೆ ತಯಾರಿ ನಡೆಸಬಹುದು. ಪಿ.ಡಿ.ಒ ನೇಮಕಾತಿ ಪರೀಕ್ಷೆ ಬಹು ಆಯ್ಕೆಯ 100 ಪ್ರಶ್ನೆಗಳ ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಅದರಲ್ಲಿ ಒಂದು ಪತ್ರಿಕೆಯ ಪಠ್ಯಕ್ರಮವು ಸಂವಿಧಾನದ 73ನೇ ತಿದ್ದುಪಡಿಯಾದ ಪಂಚಾಯತ್ ರಾಜ್ ಅಧಿನಿಯಮ ಮತ್ತು ವಿವಿಧ ಯೋಜನೆಗಳನ್ನು ಒಳಗೊಂಡಿರುತ್ತದೆ.

ಇದಕ್ಕೆ ಓದಬೇಕಾದ ಪುಸ್ತಕಗಳೆಂದರೆ ಮೈಸೂರಿನಲ್ಲಿರುವ ಡಾ.ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಪಿ.ಡಿ.ಒಗಳಿಗೆ ಅಥವಾ ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರಿಗೆ ತರಬೇತಿ ಸಮಯದಲ್ಲಿ ನೀಡುವ ಕೈಪಿಡಿಗಳನ್ನು ಓದಬೇಕಾಗುತ್ತದೆ. ಈ ಪುಸ್ತಕಳು ನಿಮಗೆ ಸಿಗದಿದ್ದರೆ ಕೈಪಿಡಿಗಳ ಪಿ.ಡಿ.ಎಫ್ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಲಭ್ಯವಿದೆ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇದನ್ನು ಹೊರತು ಪಡಿಸಿದರೆ ಕೆ.ಎಲ್.ಜೆ ಪ್ರಾಕಾಶನದ ಪುಲಾನಿ ಅಂಡ್ ಪುಲಾನಿ ಅಥವಾ ಅಶೋಕ ಮಿರ್ಜಿ ಅಥವಾ ಶ್ರೀನಿವಾಸ್ ಅವರು ಬರೆದಿರುವ ಪುಸ್ತಕವನ್ನು ಓದಿದರೆ ಸಾಕಾಗುತ್ತದೆ. 

ಎರಡನೆಯ ಪತ್ರಿಕೆಯ ಪಠ್ಯಕ್ರಮವು ಸಾಮಾನ್ಯ ಅಧ್ಯಯನ, ಕಂಪ್ಯೂಟರ್ ಜ್ಞಾನ, ಕನ್ನಡ ವ್ಯಾಕರಣ ಮತ್ತು ಇಂಗ್ಲಿಷ್ ವ್ಯಾಕರಣವನ್ನು ಒಳಗೊಂಡಿರುತ್ತದೆ. ಇದಕ್ಕಾಗಿ ಓದಬೇಕಾದ ಪುಸ್ತಕಗಳೆಂದರೆ ಕಂಪ್ಯೂಟರ್ ಜ್ಞಾನಕ್ಕಾಗಿ ಕನ್ನಡದಲ್ಲಿ ಲಭ್ಯವಿರುವ ಪುಸ್ತಕಗಳೆಂದರೆ ಗೌತಮ ಎಜುಕೇರ್, ಮಂಜುನಾಥ ಕೆ.ಯು, ಉಜ್ವಲ ಅಕಾಡೆಮಿ, ವಿಜಯನಗರ , ಬೆಂಗಳೂರು ಡಿ.ಇ ಅಥವಾ ಶಿವಗಾಮಿ ಅಥವಾ ಗುರುರಾಜ ಬುಲ್ಬುಲೆಯವರ ಪುಸ್ತಕಗಳು ಉತ್ತಮವಾಗಿವೆ.

ಕನ್ನಡ ವ್ಯಾಕರಣಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ವ್ಯಾಕರಣ ದರ್ಪಣ ಅಥವಾ ತೀನಂಶ್ರೀ ಅವರ ಕನ್ನಡ ಮಾಧ್ಯಮಿಕ ವ್ಯಾಕರಣ, ಇಂಗ್ಲಿಷ್ ವ್ಯಾಕರಣಕ್ಕೆ ಶಿವಕುಮಾರ್ ಮಾವಳ್ಳಿ ಅಥವಾ ಮಂಜುನಾಥ ಬೆಂದ್ರೆ ಅವರ ಪುಸ್ತಕಗಳು ಉತ್ತಮವಾಗಿವೆ. ಇನ್ನು ಸಾಮಾನ್ಯ ಅಧ್ಯಯನಕ್ಕಾಗಿ ಉಜ್ವಲ ಅಕಾಡೆಮಿ ಪ್ರಕಟಿಸಿರುವ 6-10ನೇ ತರಗತಿವರೆಗಿನ ಎನ್‌ಸಿಇಆರ್‌ಟಿ ಪುಸ್ತಕಗಳ ಮುಖ್ಯಾಂಶಗಳು ಹಾಗೂ 8-10ನೇ ತರಗತಿ ವರೆಗಿನ ಶಾಲಾ ಪುಸ್ತಕಗಳ ಮುಖ್ಯಾಂಶಗಳ ಪುಸ್ತಕಗಳ ಜತೆಗೆ ಕ್ರಿಕ್ ರಿವಿಜನ್ ಸರಣಿ ಪುಸ್ತಕಗಳು ಸಾಕಾಗುತ್ತವೆ.

ಶರಣಬಸು ಸಾಗರ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು