ಕಥೆ-797
ಪರೀಕ್ಷೆ ಸ್ಪರ್ಧಾಕಾಂಕ್ಷಿಗಳು
ಪ್ರತಿಯೊಂದು ಪರೀಕ್ಷೆಗೂ ಅದರದೇ ಆದ ಬೇಡಿಕೆ ಇರುತ್ತದೆ. ಅದು ಎಸ್‍ಎಸ್‍ಎಲ್‍ಸಿ ಆದರೂ ಅಷ್ಟೇ ಯುಪಿಎಸ್‌ಸಿ ಆದರೂ ಸರಿಯೇ... ಯುಪಿಎಸ್‌ಸಿ(IAS) ಅಂದರೆ ಅಲ್ಲೊಂದು ನಿರೀಕ್ಷೆ ಇರುತ್ತದೆ. ಯಾವುದೇ ಪದವಿಯನ್ನು ಪಡೆದವರು ಈ ಪರೀಕ್ಷೆಯನ್ನು ಎದುರಿಸಬಹುದು. ಈ ಪರೀಕ್ಷೆ ಎಂದರೆ ಒಂದು ನಿರೀಕ್ಷೆ... ಏನು ಎನ್ನುವುದು ನಮಗೆ ಸಿಲಬಸ್ ದಿಂದ ಗೊತ್ತಾಗುತ್ತದೆ. ಅದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು.
ಪ್ರಶ್ನೆ ಪತ್ರಿಕೆಗಳನ್ನು ಕಡ್ಡಾಯವಾಗಿ ನೋಡಿಕೊಳ್ಳಬೇಕು. ಇದನ್ನು ನೋಡಿದಾಗ ಎಷ್ಟು ಆಳವಾಗಿ ಪ್ರಶ್ನೆಗಳನ್ನು ಕೇಳುತ್ತಾರೆ ಎನ್ನುವುದು ತಿಳಿದುಕೊಳ್ಳಬಹುದು. ಸುಮ್ಮನೆ ಸಿಲಬಸ್ ಮುಗಿಸಿದರಾಯಿತು ಎಂದುಕೊಂಡು ಓದಬಾರದು. ಎಷ್ಟು ಓದಿದರೆ ಉತ್ತಮ, ಎಷ್ಟು ಅಧ್ಯಾಯವನ್ನು ಎಷ್ಟು ಅವಧಿಯಲ್ಲಿ ಮುಗಿಸಬೇಕು ಎಂದು ಟೈಮ್ ಟೇಬಲ್ ಹಾಕಿಕೊಳ್ಳಬೇಕು.
ದಿನಕ್ಕೆ ಕನಿಷ್ಠ 7ರಿಂದ 8 ಗಂಟೆ ಓದಬೇಕು. ಪರೀಕ್ಷೆ ಸಮಯದಲ್ಲಿ ಅವಧಿ ಇನ್ನೂ ಹೆಚ್ಚಾಗಬೇಕು. ಇಲ್ಲದಿದ್ದರೆ ಆಯಾ ವಿಷಯಗಳ ಸಿಲಬಸ್ ಮುಗಿಸುವುದು ಕಷ್ಟ.
ಎಲ್ಲ ಅಧ್ಯಾಯಗಳನ್ನು ಓದಿ ಮುಗಿಸಿ ಸುಮ್ಮನೆ ಕುಳಿತುಕೊಳ್ಳುವುದಲ್ಲ. ಸೀನಿಯರ್ಸ್‌ಗೆ ಕೇಳಿ ಇನ್ನಷ್ಟು ವಿಷಯ ತಿಳಿದುಕೊಳ್ಳಬೇಕು. ಓದಿದ್ದನ್ನು ಆಗಾಗ ಪುನರ್ಮನನ ಮಾಡಬೇಕು.
ಯುಪಿಎಸ್‌ಸಿ ಅನ್ನುವ ಪರೀಕ್ಷೆ
ಸಕ್ಸಸ್ ಆಗಬೇಕೆಂದರೆ ಪ್ರಾಕ್ಟಿಸ್ ತುಂಬಾ ಮುಖ್ಯ. ಕಠಿಣ ಪರಿಶ್ರಮ, ನಿರಂತರ ಅಧ್ಯಯನ ಇದ್ದರೆ ಮಾತ್ರ ಪರೀಕ್ಷೆಯಲ್ಲಿ ವಿಜಯಶಾಲಿಯಾಗಲು ಸಾಧ್ಯ.
ಐಚ್ಛಿಕ ವಿಷಯಗಳ ಆಯ್ಕೆಯಲ್ಲಿ
ಜಾಗರೂಕರಾಗಿರಬೇಕು. ನಮಗೆ ಯಾವ ಭಾಷೆಯಲ್ಲಿ ಹಿಡಿತವಿರುತ್ತದೋ ಆ ಭಾಷೆಯನ್ನೇ ಆಯ್ಕೆ ಮಾಡಬೇಕು.
ಕೃಪೆ: ನೆಟ್
No comments:
Post a Comment