Monday, July 28, 2025

 ಕಥೆ-805     

https://basapurs.blogspot.com

          

ನನ್ನ ಶಾಲಾ ದಿನಗಳಲ್ಲಿ 1500 ಮೀಟರ್ ಓಟದ ಸ್ಪರ್ಧೆ ನಡೆಯುತ್ತಿತ್ತು. ಅದರಲ್ಲಿ ಯಾವಾಗಲೂ ನನ್ನ ಗೆಳೆಯನೇ ಮೊದಲಿಗನಾಗುತ್ತಿದ್ದ. ಆದರೆ ರೇಸ್ ಆರಂಭವಾದ ಪ್ರಾರಂಭದಲ್ಲಿ ಅವನ ಓಟದ ಗತಿಯನ್ನು ನೋಡಿದವರಿಗೆ ಅವನು ಗೆಲ್ಲುತ್ತಾನೆಂಬ ಭರವಸೆಯೇ ಮೂಡುತ್ತಿರಲಿಲ್ಲ. ಯಾಕೆ ಗೊತ್ತೇ?


ಅವನು ಮೊದಲೆರಡು, ಮೂರು ಸುತ್ತುಗಳನ್ನು ಬಹಳ ನಿಧಾನವಾಗಿ, ಎಲ್ಲರಿಗಿಂತ ಕೊನೆಯಲ್ಲಿ ಓಡುತ್ತಿದ್ದ. ಇನ್ನೇನು ಸೋತೇ ಬಿಡುತ್ತಾನೆ ಎಂದು ಎಲ್ಲರೂ ಯೋಚಿಸುತ್ತಿರುವಾಗ, ಮಧ್ಯೆದಲ್ಲಿ ತನ್ನ ಓಟದ ಗತಿ ಹೆಚ್ಚಿಸಿಕೊಂಡು, ಎಲ್ಲರನ್ನೂ ಹಿಂದಿಕ್ಕಿ ಮೆಡಲ್ ಗೆದ್ದು ಬಿಡುತ್ತಿದ್ದ. ನಾನು ಅವನನ್ನು ಕೇಳಿದ್ದೆ, ‘ಅಲ್ಲ ಮಾರಾಯ, ಯಾವಾಗಲೂ ನೀನೇ ಗೆಲ್ಲುತ್ತೀಯ. ಆದರೂ ಮೊದಲೆರಡು ಸುತ್ತು ಕುಂಟುತ್ತಾ ಓಡುವವನಂತೆ ನಿಧಾನವಾಗಿ ಓಡುವುದೇಕೆ? ಒಮ್ಮೆಲೆ ಮಿಂಚಿನಂತೆ ನುಗ್ಗಿ ಗೆಲ್ಲಬಹುದಲ್ಲ?’ ಅದಕ್ಕೆ ಅವನಂದ, ‘ದೂರದ ಓಟದ ರೇಸ್‌ಗಳನ್ನು ನಿಧಾನವಾಗಿ ಓಡಿದರೆ ಮಾತ್ರ ಗೆಲ್ಲಲು ಸಾಧ್ಯ. ಇಲ್ಲದಿದ್ದರೆ ಮೊದಲೆರಡು ಸುತ್ತಿನಲ್ಲೇ ಸುಸ್ತಾಗಿ, ಓಟದ ವೇಗ ಕಡಿಮೆಯಾಗುತ್ತದೆ. ನೂರು ಮೀಟರ್‌ನಂಥ ರೇಸ್‌ಗಳನ್ನು ಮಾತ್ರ ಜೋರಾಗಿ ಓಡಲು ಸಾಧ್ಯ. ಉಳಿದವರಿಗೆ ಈ ತಂತ್ರ ಅರ್ಥವಾಗಿಲ್ಲ. ಅದಕ್ಕೇ ಅವರು ಮೊದಲೇ ಜೋರಾಗಿ ಓಡುತ್ತಾರೆ, ಸೋಲುತ್ತಾರೆ’. ಬದಲಾವಣೆ ಕೂಡ ಸಾವಿರದೈನೂರು ಮೀಟರ್ ರೇಸಿನಂತೆಯೇ ತಾನೆ?


ಕೃಪೆ :ವಿಶ್ವವಾಣಿ.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು