ಕಥೆ-846
ಮಗುವಿನಂತಹ ಹೃದಯ ಇರಬೇಕು.
https://basapurs.blogspot.com
ಎಲ್ಲೆಲ್ಲಿ ಅದ್ಭುತವಿದೆಯೋ ಅದನ್ನು ಮೆಚ್ಚಬೇಕು. ಐನ್ ಸ್ಟೈನ್ 20ನೇ ಶತಮಾನದ ದೊಡ್ಡ ಮನುಷ್ಯ, ಜ್ಞಾನಿ, ಗಣಿತಜ್ಞ, ಭೌತಶಾಸ್ತ್ರಜ್ಞ. ವಿಶ್ವದ ರಚನೆ ಕುರಿತು ಸಿದ್ಧಾಂತ ಮಂಡಿಸಿದ. ಅದು ಎಂಥ ಸಿದ್ಧಾಂತ! ಆತ ಹೇಳುತ್ತಾನೆ ನಾನು ಒಬ್ಬ ಧಾರ್ಮಿಕ, ನನ್ನಲ್ಲಿ ಧಾರ್ಮಿಕ ಭಾವನೆಗಳಿವೆ. ನಾನು ಅದನ್ನು ಗೌರವಿಸುತ್ತೇನೆ. ಕೊಂಡಾಡುತ್ತೇನೆ, ಅನುಭವಿಸುತ್ತೇನೆ, ಆ ಭಾವನೆಗಳನ್ನು ಪ್ರೀತಿಸುತ್ತೇನೆ. ಐನ್ ಸ್ಟೈನ್ ಹೇಳುತ್ತಾನೆ ಧರ್ಮ ಬತ್ತಿದರೆ ಜಗತ್ತು ಬರಡಾಗುತ್ತದೆ.
ವಸ್ತು ತಿಳಿಯೋದು, ಸೌಂದರ್ಯದ ರೂಪ ಕೊಡೋದು ಭಾವ. ಇದಕ್ಕೆ ಅನುಭವಿಸುವ ಎದೆ ಬೇಕು. ಅದು ಬತ್ತಿದರೆ ಪ್ರಪಂಚ ಬರಡಾಗುತ್ತದೆ. ನಮ್ಮ ಬದುಕಿನಾಗ ಮಗುವಿನಂತಹ ಹೃದಯ ಇರಬೇಕು. ಐನ್ ಸ್ಟೈನ್ ನಂತಹ ತಲೆ ಇರಬೇಕು. ಕೈಲಿ ಭಗೀರಥನಂಥಹ ಪ್ರಯತ್ನಗಳಿರಬೇಕು. ಈ ಮೂರೂ ಕೂಡಿದರೆ ಬದುಕು ಸ್ವರ್ಗವಾಗುತ್ತದೆ.
ಕೃಪೆ:ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು.
No comments:
Post a Comment