Monday, September 15, 2025

 ಕಥೆ-870

ಆತ್ಮವಿಶ್ವಾಸ ಬಹಳ ಮುಖ್ಯ


ನಾವು ಜೀವನದಲ್ಲಿ ಹಲವು ವಿಷಯಗಳ ಬಗ್ಗೆ ತಲೆ

ಕೆಡಿಸಿಕೊಳ್ಳುತ್ತೇವೆ. ಹೇಗಿರಬೇಕು. ಏನು ಮಾಡಬೇಕು, ಏನು ಮಾಡಬಾರದು ಎಂದು ತಲೆ ಕೆಡಿಸಿಕೊಳ್ಳುತ್ತೇವೆ. ಆದರೆ, ಬಹಳಷ್ಟು ಬಾರಿ ನಾವು ಒಂದು ವಿಷಯದಲ್ಲಿ ಎಡವುತ್ತೇವೆ. ಜೀವನದಲ್ಲಿ ಏನೇ ಮಾಡಲಿ, ಆತ್ಮವಿಶ್ವಾಸ ಎನ್ನುವುದು ಬಹಳ ಮುಖ್ಯ. ಆತ್ಮವಿಶ್ವಾಸ ಇಲ್ಲದೆ ನಾವು ಏನೂ ಮಾಡುವುದಕ್ಕೆ ಅಥವಾ ಸಾಧಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಏಕೆಂದರೆ, ಏನೋ ಮಾಡುವುದಕ್ಕೆ ನಮಗೆ ಧೈರ್ಯ ಕೊಡುವುದೇ ಅದು. ಒಂದು ಪಕ್ಷ ನಮ್ಮಲ್ಲಿ ಆತ್ಮ ವಿಶ್ವಾಸದ ಕೊರತೆ ಇದ್ದರೂ ಅದನ್ನು ನಾಲ್ಕು ಜನರ ಎದುರಿಗೆ ತೋರಿಸಿಕೊಳ್ಳಬಾರದು. ನಮ್ಮ ಎದುರಾಳಿಗಳಿಗೆ ನಾವು ಎಡವುತ್ತಿದ್ದೇವೆ. ಎಂಬ ಸಂದೇಶವನ್ನು ರವಾನಿಸಬಾರದು. ಒಂದು ಪಕ್ಷ ನಾವು ಸೋಲುತ್ತಿದ್ದೇವೆ ಎಂದು ಎದುರಾಳಿಗಳಿಗೆ ಗೊತ್ತಾದರೆ, ಅವರು ಮೇಲುಗೈ ಸಾಧಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ, ನಾವು ಯಾವತ್ತೂ ನಮ್ಮತನವನ್ನು ಬಿಟ್ಟುಕೊಡಬಾರದು. ಬೇರೆಯವರ ದೃಷ್ಟಿಯಲ್ಲಿ ನಾವು ಅತ್ಮ ವಿಶ್ವಾಸದಿಂದ ಇದ್ದರೆ, ಆಗ ನಮಗೆ ಹಿನ್ನಡೆ ಉಂಟಾಗುವುದಿಲ್ಲ.

| ವಿಶ್ವನಾಥನ್ ಆನಂದ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು