ಕಥೆ-858
ಮನದೊಳಗಿನ ಅದ್ಭುತ ಶಕ್ತಿ
https://basapurs.blogspot.com
ಒಮ್ಮೆ ಸ್ವರ್ಗದಲ್ಲಿ ದೇವಾನುದೇವತೆಗಳ ನಡುವೆ ಗಂಭೀರ ಚರ್ಚೆ ನಡೆಯುತ್ತಿತ್ತು. ಚರ್ಚೆಯ ವಿಷಯ “ಮನುಷ್ಯನಿಗೆ ಗೊತ್ತಾಗದ ಹಾಗೆ ಅದ್ಭುತವಾದ ಶಕ್ತಿಯನ್ನು ಎಲ್ಲಿ ಅಡಗಿಸಿಡುವುದು” ಎಂಬುದಾಗಿತ್ತು.
ಆಗ ದೇವನೊಬ್ಬ, “ಅದನ್ನು ಸಾಗರದ ಆಳದಲ್ಲಿ ಬಚ್ಚಿಡಬೇಕು” ಎಂದು ಸಲಹೆ ನೀಡಿದ. ಮತ್ತೊಬ್ಬ ನುಡಿದ, “ಪರ್ವತದ ಶಿಖರಗಳಲ್ಲಿ ಅಡಗಿಸಿಡಬಹುದು”. ಇನ್ನೊಬ್ಬ ದೇವ, “ದಟ್ಟ ಕಾಡುಗಳ ನಡುವೆ ಹುದುಗಿಸಿಟ್ಟರೆ ಹೇಗೆ?” ಎಂದು ಪ್ರಶ್ನಿಸಿದ.
ಅಷ್ಟರಲ್ಲಿ ಬುದ್ಧಿವಂತ ದೇವನೊಬ್ಬ “ಅದ್ಭುತ ಶಕ್ತಿಯನ್ನು ಮನುಷ್ಯನ ಮನಸ್ಸಿನ ಅಂತರಾಳದಲ್ಲಿ ಹುದುಗಿಸಿಡೋಣ. ಸದಾ ಲೌಕಿಕ ವಿಚಾರದಲ್ಲೇ ಮುಳುಗಿದ ಆತನೆಂದೂ ತನ್ನೊಳಗಿನ ಶಕ್ತಿಯನ್ನು ಪರಿಗಣಿಸುವುದೇ ಇಲ್ಲ. ಯಾರೋ ಒಬ್ಬ ಚಾಣಾಕ್ಷ ಅದನ್ನು ಅರಿತು ಮಹಾತ್ಮನೆನಿಸಿಕೊಳ್ಳುತ್ತಾನೆ” ಎಂದ.
ಅವನ ಮಾತಿಗೆ ಎಲ್ಲರೂ ತಲೆಯಾಡಿಸಿದರು. ಇದೊಂದು ಕಥೆ ಇರಬಹುದು ಅದ್ಭುತ ಶಕ್ತಿ ಅಡಗಿರೋದು ಮನುಷ್ಯನ ಮನದೊಳಗೆ, ನಮ್ಮ ಇತಿಹಾಸದ ಪುಟವನ್ನೊಮ್ಮೆ ತಿರುವಿ ನೋಡಿದಾಗ ಯಾರು ತಮ್ಮೊಳಗಿನ ಶಕ್ತಿಯನ್ನು ಅರಿತಿರುವರೋ ಅವರೇ ಪರಿಪೂರ್ಣ ಜ್ಞಾನಿ.
ಕೃಪೆ,ಆಧಾರ : ನಾಗೇಶ್ ಜಿ ನಾಯಕ್
No comments:
Post a Comment