Wednesday, October 29, 2025

 ಕಥೆ-927

ನಿಷ್ಕಾಮ ಕರ್ಮದ ಸಂದೇಶ

https://basapurs.blogspot.com/


ಕಾನ್‌ಫೂಸಿಯಸ್ ಮಹಾನ್ ಸಂತ. ಹತ್ತಾರು ವರ್ಷ ದೇಶವನ್ನೆಲ್ಲ ಸುತ್ತಾಡಿ ಸತ್ಯ-ಸಂದೇಶ ಸಾರಿದ. ಆತನ ಕಠಿಣ ಪರಿಶ್ರಮದಿಂದ ದೇಶದ ಜನರೆಲ್ಲ ನೀತಿವಂತರು, ಪ್ರಾಮಾಣಿಕರು, ಶಾಂತಿಪ್ರಿಯರು ಆದರು.ಕಾನ್‌ಫೂಸಿಯಸ್‌ನಿಗೆ ಹಿಡಿಸಲಾರದಷ್ಟು ಸಂತೋಷ! ಮುಂದೆ ಕೆಲವೇ ದಿನಗಳು ಹೋಗಲಿಲ್ಲ. ಮತ್ತೆ ದೇಶ ಮೊದಲಗಿಂತಲೂ ಹೆಚ್ಚು ಅಧಃಪತನವಾಯಿತು ! ಕಾನ್‌ಫೂಸಿಯಸ್‌ ಚಿಂತಾಕ್ರಾಂತನಾದ ಒಂದು ದಿನ ಕಾನ್‌ಫೂಸಿಯಸ್‌ಗೆ ಲಾವೋತ್ಸೆಯವರ ಭೇಟಿಯಾಯಿತು.

ಲಾವೋತ್ಸೆ ಕೇಳಿದರು- “ಅದೇಕೆ ನೀವು ಚಿಂತಾಕ್ರಾಂತರಾಗಿ ಇರುವಿರಲ್ಲ?

ಕಾನ್‌ಫೂಸಿಯಸ್ ಹೇಳಿದ. "ಏನು ಮಾಡಲಿ, ಎಷ್ಟೋ ವರ್ಷ ಕಷ್ಟಪಟ್ಟು ರಾಜಾಶ್ರಯ ಪಡೆದು, ದೇಶವನ್ನೆಲ್ಲ ಸುಶೀಲವನ್ನಾಗಿಸಿದ್ದೆ. ಆದರೆ ಈಗ ದೇಶ ಮೊದಲಿಗಿಂತ ಕೆಟ್ಟು ಹೋಗಿದೆ. ನನ್ನ ಶ್ರಮವೆಲ್ಲ ವ್ಯರ್ಥವಾಗಿದೆ!”

ಲಾವೋತ್ಸೆ ಹೇಳಿದರು- “ಈ ಜಗತ್ತು ಹೀಗೆಯೇ ಇರೋದು. ನಮ್ಮ ಕೈಲಾದಷ್ಟು ಸೇವೆ ಮಾಡಿ ಸುಮ್ಮನಿರಬೇಕು. ಪ್ರತಿಫಲದ ಚಿಂತೆ ನಮಗೇಕೆ?” ಈ ಮಾತನ್ನು ಕೇಳುತ್ತಲೇ ಕಾನ್‌ಫೂಶಿಯಸ್‌ನ ಹೃದಯದಲ್ಲಿ ಶಾಂತಿ ಚಂದ್ರನುದಯಸಿದ್ದ. ಮುಖದಲ್ಲಿ ನಿಷ್ಕಾಮತ್ವದ ನಗೆ ಹೂವು

ಅರಳಿತ್ತು!!


ಕಸಬರಿಗೆಯು ಮನೆ-ಮಾರು, ಊರು-ಕೇರಿ, ದೇಶ-ಕೋಶ ಎಲ್ಲವನ್ನೂ ಗುಡಿಸಿ ಸ್ವಚ್ಛ ಮಾಡುತ್ತದೆ. ಮರುದಿನ ಮತ್ತೆ ಕಸ ಬೀಳುತ್ತದೆ.ಕಸಬರಿಗೆ ಒಂದಿಷ್ಟೂ ಬೇಸರಿಸದೆ ಮತ್ತೆ ಗುಡಿಸುತ್ತದೆ, ಮತ್ತೆ ಕಸಬೀಳುತ್ತದೆ.

ಕಸಬರಿಗೆಯು ಹಾಗೆಯೇ ಕಸಗುಡಿಸುತ್ತಲೇ ಇರುತ್ತದೆ. ಅದಕ್ಕೆ ಆಸರಿಕೆ ಬೇಸರಿಕೆ ಎಂಬುದೇ ಇಲ್ಲ ! ಅಂತೆಯೇ ನಮ್ಮ ಮನೆ-ಮಾರು ನಿತ್ಯ ನೂತನವಾಗಿರುತ್ತವೆ. ಕಸಬರಿಗೆಯು ಈ ಜಗತ್ತಿಗೆ ನಿಷ್ಕಾಮ ಕರ್ಮದ ಸಂದೇಶ ಸಾರುತ್ತದೆ !


 ಶ್ರೀ *ಸಿದ್ಧೇಶ್ವರ ಸ್ವಾಮೀಜಿ*

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು