ಕಥೆ-901
ಗುರಿ ತಲುಪುವ ರಹಸ್ಯ
https://basapurs.blogspot.com/
ಅಂದುಕೊಂಡ ಗುರಿಯನ್ನು ತಲುಪಲು ಕಾಲವೆಂಬ ಕುದುರೆಯಲ್ಲಿ ಧಾವಿಸುತ್ತಾ ವಿವೇಕವೆಂಬ ಖಡ್ಗ ಹಿಡಿದು ಏಕಾಗ್ರಮನಸ್ಸಿನಿಂದ ಗುರಿ ತಲುಪಲು ಧಾವಿಸಬೇಕಂತೆ. ಗುರಿ ತಲುಪಲು ಹೊರಟಿರುವ ನಮಗೆ ಪ್ರಾರಂಭದಲ್ಲಿ ಎದುರಾಗುವ ಸಣ್ಣಪುಟ್ಟ ಸಮಸ್ಯೆಗಳೇ ಮುಂದೆ ಪರ್ವತದಂತೆ ಬೆಳೆದುಕೊಳ್ಳುತ್ತವೆ. ಸಮಸ್ಯೆಗಳನ್ನು ಪ್ರಾರಂಭದಲ್ಲಿಯೇ ಹೊಸಕಿ ಹಾಕಬೇಕಿದೆ.
ನಾವು ಸಾಧಿಸಬೇಕಾದ ಕಾರ್ಯದ ಬಗ್ಗೆ ಪೂರ್ಣ ಮನಸ್ಸು, ದೇಹ ನಿರಂತರ ಚಿಂತನೆ ಮಾಡುತ್ತಲೇ ಇರಬೇಕು.
ಯಾವ ಕ್ಷಣದಲ್ಲಿಯೂ ಉತ್ಸಾಹ ಮತ್ತು ಸಂತೋಷಗಳನ್ನು ಕಳೆದುಕೊಳ್ಳದೆ. ಧೈರ್ಯದಿಂದ ಮುನ್ನಡೆಯುತ್ತಾ ಸಾಗುತ್ತಲೇ ಇರಬೇಕು. ಗುರಿಮುಟ್ಟಲು ಸಾಗುತ್ತಿರುವ ನಮ್ಮಲ್ಲಿ ಪ್ರತಿಯೊಂದು ಕ್ಷಣವೂ ಆತ್ಮವಿಶ್ವಾಸ ಅಪಾರಮಟ್ಟದಲ್ಲಿ ವೃದ್ಧಿಯಾಗುತ್ತದೆ. ಸ್ವಂತಿಕೆ ಬೆಳೆಯುತ್ತದೆ. ಅಷ್ಟೇ ಅಲ್ಲದೇ ಇತರರಿಗೂ ಉತ್ತಮ ಮಾರ್ಗದರ್ಶನ ಉಪಕಾರ ಮಾಡುವ ಅಪೂರ್ವ ಅವಕಾಶಗಳು ನಮ್ಮ ಪಾಲಿಗೆ ಬಂದೊದಗುತ್ತವೆ.
ನಮ್ಮ ಗುರಿ ಕೇವಲ ಒಣಪ್ರತಿಷ್ಠೆ, ಸ್ವಾರ್ಥ, ಕೀರ್ತಿ, ಹಣ, ಹೆಂಡತಿ, ಮಕ್ಕಳು, ಮನೆ ಇವುಗಳ ಸಂಪಾದನೆಯಲ್ಲಿ ಮಾತ್ರ ಸೀಮಿತವಲ್ಲ ನಮ್ಮ ಬಂಧು-ಬಳಗದವರು ನಮ್ಮ ಹೆಸರನ್ನು ಹೇಳಿಕೊಳ್ಳಲು ಸಂತೋಷ ಪಡಬೇಕು. ನೂರಾರು ಜನರು ನಮ್ಮ ಉಪಕಾರವನ್ನು ಸ್ಮರಿಸಿಕೊಂಡು ಆನಂದಬಾಷ್ಪವನ್ನು ಸುರಿಸಬೇಕು. ಇಂತಹ ಶ್ರೇಷ್ಠ ಗುರಿ ಉದ್ದೇಶಗಳು ನಮ್ಮದಾಗಬೇಕಲ್ಲವೇ....
ಕೃಪೆ- ನೆಟ್
No comments:
Post a Comment