Tuesday, November 25, 2025

ಕಥೆ-955

ವಿಶ್ವದಲ್ಲಿ ಅತಿ ದೊಡ್ಡ ಸಂವಿಧಾನ ಹೊಂದಿದ ದೇಶ ನಮ್ಮ ಭಾರತ... 


ಈ ಸಂವಿಧಾನವನ್ನು ರಚಿಸಲು 2 ವರ್ಷ 11 ತಿಂಗಳು ಮತ್ತು 18 ದಿನಗಳನ್ನು ತೆಗೆದುಕೊಂಡಿದೆ... ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ ಆರ್ ಅಂಬೇಡ್ಕರ್ ಮತ್ತು ಅನೇಕ ಮಹನೀಯರು ಶ್ರಮಿಸಿದ್ದಾರೆ...


ನಮ್ಮ ಸಂವಿಧಾನ ವಿವಿಧ ದೇಶಗಳಿಂದ ಅನೇಕ ಉತ್ತಮ ಅಂಶಗಳನ್ನು ನಮ್ಮ ದೇಶಕ್ಕೆ ಹೊಂದಿಕೊಳ್ಳುವಂತೆ ಅಳವಡಿಸಿಕೊಂಡಿದೆ.. 


ನವೆಂಬರ್ 26, ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ದಿನವಾಗಿದೆ. 1949ರ ನವೆಂಬರ್ 26 ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು.


ಆದರೆ ಜಾರಿಗೆ ಬಂದಿದ್ದು ಜನವರಿ 26 1950 ರಂದು..


ಜನವರಿ 26 ಈ ದಿನವನ್ನು ಗಣರಾಜ್ಯದ ದಿನವಾಗಿ ನಿರ್ಧರಿಸಲು ಕಾರಣವೇನೆಂದರೆ 1930 ಜನವರಿ 26ರಂದು ಲಾಹೋರ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ (ಪೂರ್ಣ ಸ್ವಾತಂತ್ರ್ಯ) ಎಂಬ ತೀರ್ಮಾನ ಕೈಗೊಂಡು ತ್ರಿವರ್ಣ ಧ್ವಜವನ್ನು ಹಾರಿಸಲಾಗಿದ್ದರ ನೆನಪಿಗಾಗಿ ಜನವರಿ 26 ಅನ್ನು ಸಂವಿಧಾನವನ್ನು ಜಾರಿಗೆ ತಂದು ಮತ್ತು ಗಣರಾಜ್ಯ ದಿನವಾಗಿ ನಿರ್ಧರಿಸಲಾಯಿತು...


ಭಾರತಕ್ಕೆ ಸಂವಿಧಾನವೇ ದೊಡ್ಡ ಬಲ. ನಮ್ಮ ಸಂವಿಧಾನವು ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನು.


 2015 ರಲ್ಲಿ ಈ ದಿನವನ್ನು ಭಾರತ ಸರ್ಕಾರವು ಕಾನೂನು ದಿನವನ್ನು ಸಂವಿಧಾನ ದಿನ ಎಂದು ಮರುನಾಮಕರಣ ಮಾಡಿತು.


ವಿಶೇಷವೆಂದರೆ


ನಮ್ಮ ಸಂವಿಧಾನವನ್ನು ಬೆರಳಚ್ಚು ಮಾಡಿಸಿಟ್ಟಿಲ್ಲ. ಮೂಲಪ್ರತಿ ಕೈಬರಹದಲ್ಲೇ ಇದೆ. ಅದು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿದೆ. ಸದ್ಯ ಮೂಲ ಪ್ರತಿಯನ್ನು ಹೀಲಿಯಂ ಕವಚದಲ್ಲಿ ಸಂರಕ್ಷಿಸಲಾಗಿದ್ದು, ಅದು ಭಾರತದ ಸಂಸತ್ ಭವನದ ಗ್ರಂಥಾಲಯದಲ್ಲಿ ಇರಿಸಲಾಗಿದೆ. ನಮ್ಮ ಸಂವಿಧಾನ ಬಹಳ ವಿಶೇಷವಾದುದು. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ನಮ್ಮ ಸಂವಿಧಾನ ಒತ್ತಿ ಹೇಳುತ್ತದೆ. ಕಾಲಕಾಲಕ್ಕೆ ಬದುಕಿನ ಗುಣಮಟ್ಟ ಸುಧಾರಣೆಯಾಗುವಂತೆ, ಹೊಸ ಹೊಸ ವಿಷಯಗಳಿಗೆ ಅನುಗುಣವಾಗಿ ನಮ್ಮ ಸಂವಿಧಾನವೂ ನವೀಕರಿಸಲ್ಪಡುತ್ತ ಸಾಗುತ್ತಿದೆ. ಹಾಗಾಗಿಯೆ, ಅದು ಸದಾ ಜೀವಂತ. ಭಾರತೀಯರಾದ ನಮ್ಮೆಲ್ಲರ ಬದುಕಿನ ಚೌಕಟ್ಟು ಕೂಡ ಹೌದು.


ನಮ್ಮ ಸಂವಿಧಾನ ಜನರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆಯೊದಗಿಸಿದೆ. ಮೂಲಭೂತ ಹಕ್ಕುಗಳು, ಕರ್ತವ್ಯವನ್ನೂ ನೀಡಿದೆ. ನಾವು ಕೇವಲ ಹಕ್ಕಿಗಾಗಿ ಹೋರಾಡುವುದಲ್ಲ. ಕರ್ತವ್ಯಗಳನ್ನು ಪಾಲಿಸುವುದು ಜವಾಬ್ದಾರಿಯುತ ಪ್ರಜೆಯ ಕರ್ತವ್ಯವಾಗಿದೆ.. 

ದೇಶ ನನಗೇನು ಕೊಟ್ಟಿತು, ಸಮಾಜ ನನಗೇನು ಕೊಟ್ಟಿತು ಎನ್ನುವುದರ ಬದಲಾಗಿ, ದೇಶಕ್ಕಾಗಿ ನಾನೇನು ಕೊಟ್ಟೆ ಸಮಾಜಕ್ಕೆ ನಾನೇನು ಕೊಟ್ಟೆ ಎನ್ನುವ ಮನಸ್ಥಿತಿಯನ್ನು ನಾವು ಬೆಳೆಸಿಕೊಳ್ಳಬೇಕಿದೆ...

-ಶಂಕರಗೌಡ ಬಸಾಪೂರ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು