ಕಥೆ-953
“ಬೆಳಕಿನ ರಹಸ್ಯ” ಕಂಡ ಭಾರತೀಯ ವಿಜ್ಞಾನಿ
ಐದು ವರ್ಷದ ಬಾಲಕ ಒಂದು ದಿನ ತಾಯಿಗೆ ಕೇಳಿದ
ಬೆಳಕು ಬೇರೆ ಬೇರೆ ಕಡೆ, ಬೇರೆ ಬೇರೆ ಬಣ್ಣ ಬದಲಾಯಿಸೋದು ಯಾಕೆ?
ತಾಯಿ ನಗುತ ಅಂದುಕೊಂಡಳು, ಇವನಿಗಂತೂ ಉತ್ತರ ಬೇಕು....
ಮಗು ಇದರ ಬಗ್ಗೆ ಅಷ್ಟು ವಿಚಾರ ಮಾಡಿಲ್ಲ, ನೀನಂತೂ ನದಿಯ ನೀಲಿ ಬಣ್ಣ, ಆಕಾಶ ನೀಲಿ, ಈ ಎಲ್ಲದರ ಮೂಲವನ್ನು ಹುಡುಕಲು ಪ್ರೇರಣೆ ನೀಡಿದರು.
ಅವನು ಕಾಲೇಜು ಸೇರಿದ ನಂತರ, ಕಾಲೇಜಿನಲ್ಲಿ ಪ್ರೊಫೆಸರ್‌ಗಳಿಗೆ ಪ್ರಶ್ನೆ ಕೇಳುತ್ತಿದ್ದ... “ಹೊಸ ಪ್ರಶ್ನೆ ಕೇಳುವುದನ್ನೇ ವಿಜ್ಞಾನಿಗಳು ಮುಚ್ಚಿಟ್ಟಿದ್ದಾರೆ?” ಎಂದು ಎನ್ನಿಸುತ್ತಿತ್ತು ಅವನಿಗೆ....
ಅವನಲ್ಲಿರುವ ಕುತೂಹಲ ಪ್ರಯೋಗಗಳಿಗೆ ಹಾದಿ ಮಾಡಿತು, ಒಂದು ದಿನ, ಅ ಬೆಳಕು ಜಲದೊಳಗೆ ಹೋದಾಗ ಬಣ್ಣ ಬದಲಾಗುವುದನ್ನು ಗಮನಿಸಿದ. ಸ್ವಂತ ಉಪಕರಣ ತಯಾರಿಸಿ, ಸಾವಿರಾರು ಪ್ರಯೋಗ ಮಾಡಿ ಅಂತಿಮವಾಗಿ “ಬೆಳಕಿನ ಚದುರುವಿಕೆ” ಸಿದ್ಧಾಂತವನ್ನು ಕಂಡುಹಿಡಿದ. ಅವರೇ ಸರ್ ಸಿ ವಿ ರಾಮನ್..
ಈ ಆವಿಷ್ಕಾರವೇ “ರಾಮನ್ ಪರಿಣಾಮ” ವಿಶ್ವ ನಂಬಲಾರದ್ದು
ಭಾರತದ ಒಬ್ಬ ವಿಜ್ಞಾನಿ, ಅದು ಕೂಡ ತನ್ನದೇ ಲ್ಯಾಬ್‌ನಲ್ಲಿ,
ವಿಶ್ವವಿಜ್ಞಾನದ ಪುಸ್ತಕವನ್ನು ಬದಲಿಸಿದ್ದ!
1930ರಲ್ಲಿ ನೋಬೆಲ್ ಪ್ರಶಸ್ತಿಯನ್ನು ಪಡೆಯುವಾಗ
ರಾಮನ್ ಹೇಳಿದರು:
“ವಿಜ್ಞಾನ ಯಾವುದೋ ದೊಡ್ಡ ಪ್ರಯೋಗಾಲಯದಲ್ಲೇ ಹುಟ್ಟುವುದಿಲ್ಲ.
ಕುತೂಹಲ ಇರುವ ಮನಸ್ಸಿನಲ್ಲಿ ಹುಟ್ಟುತ್ತದೆ.”
ಕುತೂಹಲ ಮತ್ತು ಕಲ್ಪನೆಗಳು ವಿಜ್ಞಾನ ಸಂಶೋಧನೆಗೆ ತಳಹದಿ ಇದ್ದಂತೆ... ಏನು? ಏಕೆ? ಹೇಗೆ? ಎಂಬ ಪ್ರಶ್ನೆಗಳು ಮೂಡಿದಾಗ ಮತ್ತು ಕುತೂಹಲ ಮತ್ತು ನವೀನ ಕಲ್ಪನೆಗಳನ್ನು ಹೊಂದಿದ ವಿದ್ಯಾರ್ಥಿಗಳು, ವಿಜ್ಞಾನದಲ್ಲಿ ಸಾಧನೆ ಮಾಡಬಹುದು ಎಂಬುದಕ್ಕೆ ಸಿ ವಿ ರಾಮನ್ ಅವರು ಮಾದರಿಯಾಗುತ್ತಾರೆ...
-ಶ್ರೀ ಶಂಕರಗೌಡ ಬಸಾಪೂರ
No comments:
Post a Comment