Monday, December 29, 2025

 ಕಥೆ-990

ಜೀವನ ಜೀವನದಿಯಂತೆ... 

https://basapurs.blogspot.com


ಆಂಗ್ಲ ಕವಿಯು ನಮ್ಮ ಬದುಕನ್ನು ಕುರಿತು ಒಂದು ಸೊಗಸಾದ ಮಾತನ್ನು ಹೇಳುತ್ತಾನೆ- “ನಮ್ಮ ಜೀವನವು ಒಂದು ನದಿ ಇದ್ದಂತೆ ನಾವು ಬದುಕಿರುವವರೆಗೆ ಈ ಜೀವನದಿಯು ಹರಿಯುತ್ತಿರಬೇಕು. ಮತ್ತು ನಮ್ಮ ಬದುಕು ಒಂದು ಶಾಲೆ ಇದ್ದಂತೆ, ನಾವು ಬದುಕಿರುವವರೆಗೂ ಕಲಿಯುತ್ತಿರಬೇಕು, ಕಲಿಸುತ್ತಿರಬೇಕು” ಒಂದು ನದಿಯು ಹರಿಯುತ್ತಿದ್ದರೆ ಸಾವಿರಾರು ಮೈಲುಗಳವರೆಗೆ ತನ್ನ ಎಡಬಲದ ಪ್ರದೇಶವನ್ನೆಲ್ಲ ಹಚ್ಚ ಹಸಿರಾಗಿಸುತ್ತದೆ, ಹೂವುಗಳನ್ನು ಅರಳಿಸುತ್ತದೆ, ಹಣ್ಣು ಹಂಪಲಗಳನ್ನು

ಕೊಡುತ್ತದೆ. ನಮ್ಮ ಜೀವನವೂ ಒಂದು ಪ್ರೇಮಗಂಗೆಯಾಗಿ ಹರಿಯಬೇಕು.ಶಾಂತಿಯ ಸುಮಗಳನ್ನು ಅರಳಿಸಬೇಕು. ಸಂತಸದ ಹಣ್ಣು ಹಂಪಲಗಳನ್ನು ನೀಡಬೇಕು. ಕೊನೆಗೆ ಈ ಜೀವನದಿಯು ಹರಿದು ಹರಿದು ಒಂದು ದಿನ ದೇವಸಾಗರವನ್ನು ಸೇರಿ ಪರಮಶಾಂತಿಯನ್ನು ಪಡೆಯಬೇಕು. ಅದು ನಿಜವಾಗಿ ಸಾರ್ಥಕ ಬದುಕು.


ನಾವು ಬದುಕಿರುವ ಈ ಪ್ರಪಂಚವೇ ಒಂದು ಪಾಠಶಾಲೆ.ಇಲ್ಲಿ ನಿತ್ಯ ನೂರಾರು ಘಟನೆಗಳು ನಡೆಯುತ್ತವೆ. ಈ ಘಟನೆಗಳು ಏಕೆ, ಹೇಗೆ,

ಎಲ್ಲಿ, ಯಾವಾಗ ನಡೆದವು ಎಂದು ಸ್ವಲ್ಪ ಆಲೋಚನೆ ಮಾಡಿದರೆ ಸಾಕು, ಆ ಪ್ರತಿಯೊಂದು ಘಟನೆಯು ನಮಗೆ ಒಂದು ಹೊಸ ಪಾಠವನ್ನು ರೀತಿ-ನೀತಿಯನ್ನು ಕಲಿಸುತ್ತದೆ. ನಾವು ಸೂಕ್ಷ್ಮವಾಗಿ ಅವಲೋಕಿಸುತ್ತ ಹೋದರೆ ನಮ್ಮ ಬದುಕಿನ ಹೆಜ್ಜೆ ಹೆಜ್ಜೆಗೂ ನಾವು ಹೊಸ ಅನುಭವವನ್ನು ಅರಿವನ್ನು ಪಡೆಯುತ್ತೇವೆ ! ಹೀಗೆ ನಾವು ಕಲಿತದ್ದನ್ನು ಇನ್ನೊಬ್ಬರೊಂದಿಗೆ

ಹಂಚಿಕೊಂಡಾಗ ಅವರಿಗೆ ಕಲಿಸಿದಾಗ ನಮ್ಮ ಅರಿವಿನ ಹರವು ಇನ್ನಷ್ಟು ವಿಶಾಲವಾಗುತ್ತದೆ. ಈ ಅರ್ಥದಲ್ಲಿ ಈ ವಿಶ್ವವೇ ಒಂದು ವಿಶಾಲವಾದ ವಿದ್ಯಾಲಯ. ಇಲ್ಲಿ ನಾವು ನಿತ್ಯ ನಿರಂತರ ವಿದ್ಯಾರ್ಥಿಗಳಾಗಿ ಕಲಿಯಬೇಕು

ನಿರಂತರ ಶಿಕ್ಷಕರಾಗಿ ಕಲಿಸಬೇಕು.


 ಶ್ರೀ *ಸಿದ್ಧೇಶ್ವರ ಸ್ವಾಮೀಜಿ*

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು