ಕಥೆ-1014
ಹಿರೇಮ್ಯಾಗೇರಿಯಲ್ಲಿ ಸಂಭ್ರಮದ ಜಾತ್ರೋತ್ಸವ
(ಆಟೋಟ, ರಕ್ತದಾನ, ಭಜನೆ, ಸಾಮೂಹಿಕ ವಿವಾಹ)
ಹಿರೇಮ್ಯಾಗೇರಿಯಲ್ಲಿ ಒಂದು ವಾರ ಜಾತ್ರಾ ಸಂಭ್ರಮ.. ದಿನಕ್ಕೊಂದು ಕಾರ್ಯಕ್ರಮದ ಮೂಲಕ ಸಂತಸ & ಸಂಭ್ರಮ ಮನೆ ಮಾಡಿತ್ತು..
1. ಕಬಡ್ಡಿ ಕ್ರೀಡಾಕೂಟ....
ಭಾರತದ ಮಣ್ಣಿನ ವಾಸನೆಯಲ್ಲೇ ಹುಟ್ಟಿದ ಈ ಆಟಕ್ಕೆ ಹಿರೇಮ್ಯಾಗೇರಿ ತವರೂರಾಗಿದೆ.. ಕ್ರೀಡೆ ಇಲ್ಲದ ಜೀವನ ಕೀಡೆ ತಿಂದ ಸಸ್ಯದ ಹಾಗೆ.. ಕಬಡ್ಡಿ ಆಟ ಕಲಿಸುವುದು ಅನೇಕ ಪಾಠ. ಉಸಿರಿನ ಲಯದಲ್ಲೇ ಗೆಲುವಿನ ಗುಟ್ಟು ಅಡಗಿದೆ, ಬಿದ್ದಾಗಲೂ ಮತ್ತೆ ಎದ್ದು ಹೋರಾಡಬೇಕು..
2. ರಕ್ತದಾನ ಶಿಬಿರ
ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ.. ಹೀಗಾಗಿ ರಕ್ತಕ್ಕೆ ಅಪಾರ ಬೇಡಿಕೆ ಇದೆ.. ಅಲ್ಲದೆ ಸತ್ತವರನ್ನು ಬದುಕಿಸಲು ನಮ್ಮಿಂದ ಸಾಧ್ಯವಿಲ್ಲ.. ಆದರೆ ಸಾಯುತ್ತಿರುವವರನ್ನು ಬದುಕಿಸಲು ಅವಕಾಶವಿದೆ.. ಅದು ರಕ್ತದಾನದ ಮೂಲಕ..
ಜೀವ ಉಳಿಸುವ ಒಂದು ಶ್ರೇಷ್ಠ ಸೇವೆ, ಅದೊಂದು ಆತ್ಮತೃಪ್ತಿ..
ಮಾನವೀಯ ಮೌಲ್ಯವೂ ಹೌದು..
ರಕ್ತದಾನದಿಂದ ಹೊಸ ರಕ್ತಕಣಗಳ ಉತ್ಪಾದನೆ ಹೆಚ್ಚಾಗುತ್ತದೆ, ಹೃದಯ ಸಂಬಂಧಿ ಸಮಸ್ಯೆಗಳ ಅಪಾಯ ಕಡಿಮೆಯಾಗುತ್ತದೆ...
3. ಭಜನಾ ಪದಗಳ ಸ್ಪರ್ಧೆ....
ಮನಸ್ಸು ಅಶಾಂತವಾಗಿದ್ದಾಗ ಭಜನೆ ಔಷಧಿ ಆಗುತ್ತದೆ, ಆತ್ಮಕ್ಕೆ ಅದು ಅಮೃತ ಇದ್ದಂತೆ. ಇಂತಹ ನಮ್ಮ ನೆಲದ ಜಾನಪದ ಸಾಹಿತ್ಯವನ್ನು ಪ್ರೋತ್ಸಾಹಿಸಿರುವುದು ಒಳ್ಳೆಯ ಬೆಳವಣಿಗೆ..
4. ಸಾಮೂಹಿಕ ವಿವಾಹಗಳು...
ಜೀವನದ ಆರಂಭಕ್ಕೆ ಐಶ್ವರ್ಯಕ್ಕಿಂತ ಆತ್ಮೀಯತೆ ಮುಖ್ಯ... ಅಂತಹ ಒಬ್ಬ ಆತ್ಮೀಯರನ್ನು ಜೀವನ ಸಂಗಾತಿಯಾಗಿ ಸಹಸ್ರಾರು ಭಕ್ತರ, ಹಿರಿಯರ ಮತ್ತು ಮಠಾಧೀಶ ಗುರುಗಳ ಆಶಿರ್ವಾದದೊಂದಿಗೆ ಬಂಧನಕ್ಕೊಳಗಾಗುವ ಭಾಗ್ಯ ಮತ್ತು ಜೀವನದ ಸಾರ್ಥಕತೆಯ ಕ್ಷಣ ಎನ್ನಬಹುದು..
ಸಾಮೂಹಿಕ ವಿವಾಹಗಳು
ಸಮಾಜದ ಒಗ್ಗಟ್ಟನ್ನು, ಊರಿನ ಒಗ್ಗಟ್ಟನ್ನು ಹೆಚ್ಚಿಸುತ್ತದೆ..
ಪ್ರತಿ ವರ್ಷ ಇಂತಹ ಸಾಮಾಜಿಕ ಕಳಕಳಿಯೊಂದಿಗೆ ನಮ್ಮ ಹಿರೇಮ್ಯಾಗೇರಿಯ ಜನತೆ ಜಾತಿ, ಮತ, ಭೇದ-ಭಾವವಿಲ್ಲದೆ, ಹಿರಿಯರು ಕಿರಿಯರು ಎಲ್ಲರೂ ಒಗ್ಗಟ್ಟಾಗಿ ನಡೆಸುವ ಕ್ರೀಡಾಕೂಟಗಳು, ರಕ್ತದಾನ ಶಿಬಿರ, ಭಜನಾ ಸ್ಪರ್ಧೆ, ಸಾಮೂಹಿಕ ವಿವಾಹ ಇತ್ಯಾದಿ... ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಊಟದ ವ್ಯವಸ್ಥೆ ನಿಜಕ್ಕೂ ಶ್ಲಾಘನೀಯ ಮತ್ತು ಅನುಕರಣೀಯ....
ನೂತನ ದಂಪತಿಗಳು ಪರಸ್ಪರ ಪ್ರೀತಿ ವಿಶ್ವಾಸದಿಂದ ಸಹಚರರಾಗಿ, ಯಾವುದೇ ದುರಭ್ಯಾಸಕ್ಕೆ ಬಲಿಯಾಗದೆ ಸಾರ್ಥಕಜೀವನ ನಡೆಸಲಿ. ಆದರ್ಶ ದಂಪತಿಗಳಾಗಲಿ ಎಂದು ಶುಭ ಹಾರೈಸೋಣ..
💐💐💐
- ಶಂಕರಗೌಡ ಬಸಾಪೂರ
No comments:
Post a Comment