Wednesday, January 21, 2026

 ಕಥೆ-1012

ತಾಳ್ಮೆಯಿಂದ ಯೋಚಿಸಿದರೆ ಎಲ್ಲವು ಸರಿಯಾಗುತ್ತದೆ.

ಒಂದು ಊರಲ್ಲಿ ರಾಘು ಎಂಬ ವ್ಯಕ್ತಿ ಇದ್ದ. ಆತನ ಮಗ ಶಾಮು.. ಒಂದು ದಿನ ಶಾಮು ತನ್ನ ತಂದೆಗೆ ತನಗೆ ಇಷ್ಟವಾದ ಕಾರನ್ನು ಕೊಡಿಸೆಂದು ಕೇಳುತ್ತಾನೆ, ಆದರೆ ಅವರ ಅಪ್ಪ ನೀನು ಕಾಲೇಜಿಗೆ 1st rank ಬಂದರೆ ಮಾತ್ರ ನಿನಗೆ ನಾನು ಆ ಕಾರನ್ನು ಕೊಡಿಸುತ್ತೇನೆ ಎಂದನು. ಆ ಮಾತನ್ನು ಕೇಳಿದ ಶಾಮು ಹಗಲು ರಾತ್ರಿ ಎನ್ನದೆ ಓದಲು ತೊಡಗಿದ ಹಾಗೆ ಪರೀಕ್ಷೆಯು ಬಂದಿತು. ಆ ಪರೀಕ್ಷೆಯಲ್ಲಿ ಅವನು ಕಾಲೇಜಗೆ 1st rank ಬಂದ.. ಅವನಿಗೆ ಆತುರ "ನಮ್ಮ ಅಪ್ಪ ನನಗೆ ಇಷ್ಟವಾದ ಕಾರನ್ನು ಕೊಡಿಸುತ್ತಾರೆಂದು" ಖುಷಿಯಿಂದ ಓಡೋಡಿ ಮನೆಗೆ ಬರುತ್ತಾನೆ ಆದರೆ ಅವರ ಅಪ್ಪ ಕಾರು ಬದಲಿ ರಾಮಾಯಣ ಪುಸ್ತಕ ಕೊಡುತ್ತಾನೆ. ಹಾಗಾಗಿ ಅವನು ತುಂಬಾ ದುಃಖ ಪಡುತ್ತಾನೆ. ಅವನು ಕೇಳಿದ್ದು ಪುಸ್ತಕವಲ್ಲ ಬದಲಾಗಿ ಕಾರು ಅದಕ್ಕೆ ಅವನು ಆ ಪುಸ್ತಕ ಓದದೇ ಅದನ್ನು ಅಲ್ಲೇ ಇಟ್ಟು ಮನೆ ಬಿಟ್ಟು ಹೊರಗೆ ಓಡಲು ಶುರುಮಾಡುತ್ತಾನೆ.. ಒಂದು ನಿಮಿಷ ಕೇಳು ಶಾಮು ಎಂದರೂ ನಿಲ್ಲುವುದಿಲ್ಲ.. ಮನೆ ಬಿಟ್ಟು ಹೋಗುತ್ತಾನೆ.. ರಾಘು ಮಗನನ್ನು ಹುಡುಕುವ ಪ್ರಯತ್ನ ಮಾಡಿದರು ಸಿಗಲಿಲ್ಲ...

ಮನೆ ಬಿಟ್ಟು ಹೋದ ಮೇಲೆ ಅವನು ಅಲ್ಲಿ ಇಲ್ಲಿ ಕೆಲಸ ಮಾಡಿ ಚೆನ್ನಾಗಿ ಓದಿ ಒಂದು ಒಳ್ಳೆ ಕೆಲಸಕ್ಕೆ ಸೇರಿ ತನ್ನದೇ ಆದ ಕಂಪನಿ ಶುರುಮಾಡುತ್ತಾನೆ ಆ ಕಂಪನಿಯಿಂದ ಶ್ರೀಮಂತನಾಗುತ್ತಾನೆ.. ಅವನ ಸ್ವಂತ ದುಡಿಮೆಯಿಂದ ತನಗೆ ಇಷ್ಟವಾದ ಕಾರನ್ನು ಅವನು ಖರೀದಿಸುತ್ತಾನೆ. ಅವನಿಗೆ ಅವನ ಅಪ್ಪನ ನೆನಪಾಗಿ ಅವರ ಅಪ್ಪನಿಗೆ ಹೆಗೋ ಮಾಡಿ ಫೋನ್ ಮಾಡಿದಾಗ ಯಾರೋ ಒಬ್ಬ ವ್ಯಕ್ತಿ ಮಾತನಾಡುತ್ತಾನೆ "ನಿಮ್ಮ ಅಪ್ಪ ತೀರಿಕೊಂಡು ಒಂದು ವಾರ ಆಯಿತು ನಿಮಗೆ ಫೋನ್ ಮಾಡಲು ಎಷ್ಟೇ ಪ್ರಯತ್ನ ಪಟ್ಟರು ಸಾಧ್ಯವಾಗಲಿಲ್ಲ ಬೇಗನೆ ಮನೆಗೆ ಬನ್ನಿ" ಎಂದು ಆ ಅಪರಿಚಿತ ಹೇಳಿದ ಕ್ಷಣವೇ ಓಡೋಡಿ ಮನೆಗೆ ಹೋಗುತ್ತಾನೆ ಅಲ್ಲಿ ಅವನ ಅಪ್ಪ ಕೊಟ್ಟ ರಾಮಾಯಣ ಪುಸ್ತಕ ಇರುತ್ತದೆ ಅದನ್ನು ತೆಗೆದುಕೊಂಡು ಓದುತ್ತಾನೆ. ಒಂದನೇ ಪುಟದಲ್ಲಿ ಅವರ ಅಪ್ಪ "ನೀನು ನಾನು ಹೇಳಿದಂತೆ ಕಾಲೇಜಿಗೆ 1st rank ಬಂದು ನನ್ನ ಕನಸನ್ನು ನನಸು ಮಾಡಿದೆ ಅದಕ್ಕಾಗಿ ನಾನು ನಿನಗೆ ಜೀವನದ ಮೌಲ್ಯವನ್ನು ತಿಳಿಸಲು ಈ ಪುಸ್ತಕವನ್ನು ನೀಡಿರುವೆ ಈ ಪುಸ್ತಕದ ಕೊನೆಯ ಪುಟದಲ್ಲಿ ನೀನು ಹೇಳಿದ ಹಾಗೆ ನಿನಗೆ ಇಷ್ಟವಾದ ಕಾರಿನ key ಇಟ್ಟಿದ್ದೇನೆ ತೆಗೆದುಕೋ" ಎಂದು ಬರೆದಿರುತ್ತಾನೆ.. ಅದನ್ನು ಓದಿದ ಅವನ ಶಾಮನ ಕಣ್ಣಲ್ಲಿ ನೀರಿನ ಧಾರೆ ಶುರುವಾಯಿತು.. "ನಾನು ಅವತ್ತು ಶಾಂತವಾಗಿ ಈ ಪುಸ್ತಕ ಓದಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ" ಎಂದು ತುಂಬಾ ದುಃಖ ಪಡುತ್ತಾನೆ.

ಇವತ್ತಿನ ಜನರೇಶನ್ ಗೆ ತಾಳ್ಮೆ ಬಹಳ ಕಡಿಮೆ.. ಆತುರದ ನಿರ್ಧಾರ ತೆಗೆದುಕೊಂಡು ಜೀವನ ಪರಂತ ಕೊರಗುತ್ತಾರೆ.. ಏನೇ ಮಾಡಿದರೂ, ತಾಳ್ಮೆಯಿಂದ ಯೋಚಿಸಬೇಕು. ಆದ್ದರಿಂದ ದುಡುಕು ಕೆಡುಕು..

ಸಂಗ್ರಹ:-ಪ್ರಜ್ವಲ್ ರಾಮಶೆಟ್ಟಿ ಹಿರೇಮ್ಯಾಗೇರಿ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು