Tuesday, February 10, 2026

 ಕಥೆ-1032

ಲೈಫಲ್ಲಿ ಗೆಲ್ಲಬೇಕು ಅನ್ನೋರು ಇದನ್ನ ಮಿಸ್ ಮಾಡದೇ ಓದಬೇಕು..( ಸರಣಿ-4)

ಫಸ್ಟ್ ಡೇ ಆಗಿಲ್ಲ ಅಂದಮಾತ್ರಕ್ಕೆ ಅದು ಸೋಲಲ್ಲ..! ಹಂಗೇನಾದ್ರೂ ರೆಡ್ ಬಸ್ ಡಾಟ್ ಇನ್ ಶುರು ಮಾಡಿದವರು ಆರಂಭದಲ್ಲಿ ಸೋತಾಗ ಹೆದರಿದ್ರೆ ಇವತ್ತು ಆ ಕಂಪನಿ ಎಲ್ಲಿರ್ತಿತ್ತು..? ಇವತ್ತು ನಾವು ಎಲ್ಲಿಗೇ ಹೋಗ್ಬೇಕು ಅಂದ್ರೆ ಬಸ್ ಟಿಕೆಟ್ ಬುಕ್ ಮಾಡೋಕೆ ರೆಡ್ ಬಸ್ ಡಾಟ್ ಕಾಮ್ ನೋಡ್ತೀವಿ. ಆದ್ರೆ ಅವತ್ತು ಇದೇ ರೆಡ್ ಬಸ್ ಕಂಪನಿ ಕಟ್ಟೋಕೆ ಅವರು ಅದೆಷ್ಟು ಒದ್ದಾಡಿದ್ರು ಗೊತ್ತಾ..? ಊಟ ತಿಂಡಿ ಬಿಟ್ಟು, ಇರೋ ದುಡ್ಡಲ್ಲಿ ಒದ್ದಾಡ್ಕೊಂಡು ಕಟ್ಟಿದ ಕಂಪನಿ ಇವತ್ತು ಮಿಲಿಯನ್ ಡಾಲರ್ ಕಂಪನಿ..! ಹಬ್ಬಕ್ಕೆ ಊರಿಗೆ ಹೋಗೋಕೆ ಬಸ್ ಟಿಕೆಟ್ ಸಿಗಲಿಲ್ಲ ಅನ್ನೋ ಕಾರಣಕ್ಕೆ ರಜದಲ್ಲಿ ಕೂತು ಅವರು ಡೆವಲಪ್ ಮಾಡಿದ ರೆಡ್ ಬಸ್ ಡಾಟ್ ಇನ್ ಆರಂಭದಲ್ಲಿ ಸೋತು ಸೋತು ಸತ್ತೇ ಹೋಗಬೇಕಿತ್ತು. ಆದ್ರೆ ಅದನ್ನು ಹುಟ್ಟುಹಾಕಿದ ಫಣೀಂದ್ರ ರೆಡ್ಡಿ ಸಮಾ, ಸುದಾಕರ್ ಪಸುಪುನುರಿ, ಚರಣ್ ಪದ್ಮರಾಜು ಆ ಸೋಲಿನ ಹೊಡೆತಕ್ಕೆ ಹೆದರಿಹೋಗ್ಲಿಲ್ಲ.. ಹೆಂಗಾದ್ರೂ ಗೆದ್ದೇ ಗೆಲ್ತೀನಿ ಅಂತ ಹಠಕ್ಕೆ ಬಿದ್ದರು ಅಷ್ಟೆ..! ಆರಂಭದಲ್ಲಿ ಇವರ ವೆಬ್ ಸೈಟ್ ಮೂಲಕ ನಿಮ್ಮ ಬಸ್ ಟಿಕೆಟ್ ಬುಕ್ ಮಾಡ್ಬೋದು ಅಂತ ಹೇಳಿದ್ರೆ ಬಸ್ ಏಜೆಂಟರು, ಬುಕಿಂಗ್ ಆಫೀಸಿನವರು ಬೈದು ಕಳಿಸೋರಂತೆ. `ತಲೆ ತಿನಬೇಡ್ರಿ, ಹೋಗ್ರಪ್ಪ’ ಅಂತ..! ಆದ್ರೂ ಅವರು ನಾವು ಸೋಲ್ತೀವಿ ಅನ್ನೋ ಭಯಕ್ಕೆ ಬೀಳದೇ, ನಾವು ಗೆಲ್ಲಬೆಕು ಅನ್ನೋ ಚಟಕ್ಕೆ ಬಿದ್ರು..! ಆರಂಭದಲ್ಲಿ ಸೀಟು ಕೊಡದೇ ಇದ್ದವರು, ಇವರ ಕಾಟಕ್ಕೆ ಆಮೇಲಾಮೇಲೆ ಬಸ್ಸಿನ ಹಿಂದಿನ ಸೀಟುಗಳನ್ನು ಬುಕಿಂಗ್ ಗೆ ಕೊಟ್ರು.. ಆಮೇಲೆ ಅದರಲ್ಲಿನ ಬುಕಿಂಗ್ ನೋಡಿ ಮತ್ತಷ್ಟು ಸೀಟ್ ಕೊಟ್ರು.. ಇವತ್ತು ರೆಡ್ ಬಸ್ ಬೇಕು ಅಂದ್ರೆ ಸಪರೇಟ್ ಬಸ್ ಬಿಡೋಕೂ ಬಸ್ ಮಾಲೀಕರು ರೆಡಿ ಇರ್ತಾರೆ..! ಅವತ್ತು ಸೋತುಸೋತು ಸತ್ತುಹೋಗಬೇಕಾದವರು ಇವತ್ತು ಗೆದ್ದು ಬೀಗ್ತಾ ಇದ್ದಾರೆ.. ಅವತ್ತು ಒಂದು ಟಿಕೆಟ್ ಬುಕ್ ಆದ್ರೆ ಸಂಭ್ರಮಿಸ್ತಾ ಇದ್ದವರು, ಇವತ್ತು ದೇಶದ ಮೂಲೆಮೂಲೆಯಲ್ಲಿ ಲಕ್ಷಗಟ್ಟಲೇ ಟಿಕೆಟ್ ಬುಕ್ ಮಾಡಿ ಸಂಭ್ರಮಿಸ್ತಿದ್ದಾರೆ..! ಅವತ್ತು ಕೇವಲ ಬೆರಳೆಣಿಕೆಯ ಟಿಕೆಟ್ ಬುಕ್ ಆದಾಗ `ಇದ್ಯಾಕೋ ಗೆಲ್ಲೋದು ಡೌಟು ‘ ಅನ್ನೋ ಸಣ್ಣ ಹುಳ ಏನಾದ್ರೂ ಅವರ ತಲೆ ಹೊಕ್ಕಿದ್ರೆ, ಇವತ್ತು ಅವರ ಕಂಪನಿಯನ್ನು 800 ಕೋಟಿ ರೂಪಾಯಿ ಕೊಟ್ಟು ಗೋ ಇಬಿಬೋ ತಗೋತಾ ಇರ್ಲಿಲ್ಲ..! ದಟ್ ಈಸ್ ಕಾಲ್ಡ್ ಎಫರ್ಟ್, ಅಂಡ್ ದಟ್ ಈಸ್ ಕಾಲ್ಡ್ ವಿನಿಂಗ್…!

ಕೃಪೆ: ವಾಟ್ಸ್ ಆ್ಯಪ್ ಗ್ರೂಪ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು