Saturday, February 7, 2026

 ಕಥೆ-1029

ಲೈಫಲ್ಲಿ ಗೆಲ್ಲಬೇಕು ಅನ್ನೋರು ಇದನ್ನ ಮಿಸ್ ಮಾಡದೇ ಓದಬೇಕು..( ಸರಣಿ-1)


ವ್ಯಕ್ತಿತ್ವ ವಿಕಸನ ಕೌಶಲ್ಯಗಳು ನಮ್ಮ ಅಸ್ತ್ರಗಳಾಗಬೇಕು..

ಸೋಲು.. ಯಾರಿಗಾಗಿಲ್ಲ..? ಎಷ್ಟು ಜನ ಎದುರಿಸಿಲ್ಲ..? ಸೋಲದೇ ಇದ್ದವನು ಗೆದ್ದ ಉದಾಹರಣೇನೇ ಇಲ್ಲ..! ಇವತ್ತು ಇಡೀ ಪ್ರಪಂಚದಲ್ಲೇ ವೇಗವಾಗಿ ಓಡೋನು ಅನುಸ್ಕೊಂಡಿರೋ ಉಸೇನ್ ಬೋಲ್ಟ್ ಸಹ, ಸೋತು, ಬಿದ್ದು ಎದ್ದು ಈಗ ಗೆಲ್ತಾ ಇರೋದು.. ಸೋತಾಗ ಸತ್ತೆ ಅನ್ಕೊಂಡ್ರೆ ನಾವು ಶಾಶ್ವತವಾಗಿ ಸೋತಹಾಗೆ..! ಸೋತಾಗ, ಇದ್ಯಾವ ಸೋಲು, ನಾನು ಗೆದ್ದೇ ಗೆಲ್ತೀನಿ ಅನ್ಕೊಂಡ್ರೆ ಮಾತ್ರ ಲೈಫ್ ಜಿಂಗಾಲಾಲ..! ತುಂಬಾ ಸೋತವನನ್ನು ಕೇಳಿನೋಡಿ, ಇನ್ನಾಗಲ್ಲ ನಾನು ಸೋತು ಸುಣ್ಣ ಆಗ್ಬಿಟ್ಟಿದೀನಿ.. ಏನ್ ಮಾಡುದ್ರೂ ಆಗುತ್ತಿಲ್ಲ.. ಏನ್ ಮಾಡ್ಬೇಕೋ ಗೊತ್ತಾಗ್ತಿಲ್ಲ ಅಂತ ಹೇಳ್ತಾರೆ.! ಅದೇ ಗೆದ್ದವರನ್ನು ಮಾತಾಡ್ಸಿ ನೋಡಿ. ಸೋತವನಿಗಿಂತ ಜಾಸ್ತಿ ಸಲ ಅವರೂ ಸೋತಿರ್ತಾರೆ..! ಆದ್ರೆ ಗೆಲ್ಲೋ ತನಕ ಸೋತಿದ್ದರ ಬಗ್ಗೆ ಚಿಂತೆ ಮಾಡಲ್ಲ ಅಂತ ಡಿಸೈಡ್ ಮಾಡಿರ್ತಾರೆ..! ಹಾಗಾಗಿ ಅವರು ಅಂತ ಸೋಲನ್ನು ಮೀರಿ ಗೆದ್ದಿರ್ತಾರೆ..! 


ಯಾವಾಗ ಸೋತು ಸೋತು ಗೆಲ್ಲಬೇಕು ಅನ್ನೋ ಹಠ ಶುರುವಾಗುತ್ತೋ ಅವಾಗ್ಲೆ ಗೆಲ್ಲೋಕೆ ಸಾಧ್ಯ..! ಯಾವಾಗ ಗೆಲ್ಲೋ ಹಠ ಜಾಸ್ತಿಯಾಗಿ ಗೆದ್ದುಬಿಡ್ತೀರೋ, ಆಮೇಲೆ ಗೆಲ್ಲೋದು ಚಟ ಆಗೋಗುತ್ತೆ..! ಅದೊಂದೇ ಚಟ, ಜೀವನದ ಅತ್ಯಂತ ಒಳ್ಳೇ ಚಟ… ಜೀವನದಲ್ಲಿ ನಮ್ಮನ್ನು ಎತ್ತರೆತ್ತರಕ್ಕೆ ಕರ್ಕೊಂಡೋಗಿ ಬಿಡೋ ಚಟ..! ಆ ಚಟ ನಮಗೆ ಅಭ್ಯಾಸ ಆಗೋ ತನಕ ತಿರುಗಿ ನೋಡದೇ ನುಗ್ತಾ ಇದ್ರೆ, ಯಾವ ಸೋಲೂ ನಮ್ಮನ್ನು ಏನೂ ಮಾಡಕ್ಕಾಗಲ್ಲ..!


ಜೀವನ ಹೆಂಗಿರುತ್ತೆ ಗೊತ್ತಾ..? ಎಂತವರನ್ನೆ ಕೇಳಿ ನೋಡಿ, ಸಾಕಾಗಿದೆ ಅನ್ನೋ ಉತ್ತರ ಕೊಡ್ತಾರೆ.. ಅವನು ರಸ್ತೇಲಿ ಭಿಕ್ಷೆ ಬೇಡೋನಾದ್ರೂ ಅಷ್ಟೆ, ಆಡಿ ಕಾರಲ್ಲಿ ಜುಮ್ ಅಂತ ಹೋಗೋನಾದ್ರೂ ಅಷ್ಟೆ..! ಅವರವರಿಗೆ ಅವರವರ ಸಮಸ್ಯೆಗಳು.. ಹಂಗಂತ ಸಮಸ್ಯೆಗಳನ್ನ ತಲೆ ಮೇಲೆ ಹೊತ್ಕೊಂಡು ಕೂತ್ರೆ ಸಮಸ್ಯೆ ಕಮ್ಮಿ ಆಗೋದೇ ಇಲ್ಲ..! ಸಮಸ್ಯೆ ಬರೋಕೆ ಮುಂಚೇನೇ ಅದನ್ನ ಹೆದರಿಸಿ ಓಡ್ಸೋ ಪ್ರಯತ್ನ ಮಾಡಬೇಕು. ಸಾಧ್ಯ ಆಗಲೇ ಇಲ್ಲ, ಸಮಸ್ಯೆ ಆಗೇ ಹೋಯ್ತು ಅಂದಾಗ ಅದನ್ನು ಎದುರಿಸೋ ತಾಕತ್ತು ಇರಬೇಕು.. ಐಸ್ ಕ್ರೀಮ್ ಎಂಜಾಯ್ ಮಾಡ್ಕೊಂಡು ತಿನ್ನೋರು ಶೀತ ಆದ್ರೆ ಹಿಂಗೆ ಅಂದ್ರೆ, ಬರೀ ಐಸ್ ಕ್ರೀಂ ಬೇಕು, ಶೀತ ಬೇಡ ಅಂದ್ರೆ ಆಗಲ್ಲ.. ಹಾಗೇನೇ, ಬರೀ ಗೆಲುವೇ ಬೇಕು, ಸೋಲು ಬರಲೇಬಾರದು ಅಂದ್ರೆ ಸಾಧ್ಯವೇ ಇಲ್ಲ..! ಇವತ್ತು ಗೆದ್ದವರೆಲ್ಲಾ ಸೋತು ಸೋತು ಸೋತು ಗೆದ್ದವರು..! ಗೆಲುವಿನ ಹಿಂದೆ ಸೋಲಿನ ಸರಮಾಲೆಗಳಿರುತ್ತೆ, ಸೋಲು ಅನ್ನೋದು ಶತೃವಿನ ಹಾಗೆ ಕಾಟ ಕೊಡುತ್ತೆ, ಸೋಲು ನಿಮ್ಮ ಸತ್ವ ಪರೀಕ್ಷೆ ಮಾಡುತ್ತೆ.. ಆದ್ರೆ ಅದನ್ನೆಲ್ಲಾ ಎದುರಿಸಿ, ಹೆದರಿಸಿ ನುಗ್ಗಿ ಗೆದ್ದು ಬಿಟ್ರೆ ಸೋಲು ನಿಮಗೇ ಶರಣಾಗಿ ಬಿಡುತ್ತೆ..! 


ಮುಂದುವರೆಯುವುದು....

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು