ಕಥೆ-838
ಮಗುವಿಗೆ ಇರುವ ಏಕಾಗ್ರತೆ👌
ಗಮನಿಸಿದ್ದೀರಾ? ಮಗು ಆಟವಾಡುವಾಗ ಹೊಂದಿರುವ ತನ್ಮಯತೆ ಇದೆಯಲ್ಲ ಅದು ಜಗತ್ತಿನ ಅತ್ಯುನ್ನತ ಮಟ್ಟದ ಏಕಾಗ್ರತೆ! ಸುತ್ತಮುತ್ತಲಿನ ಜಗತ್ತಿನ ಗೊಡವೆಯೇ ಇಲ್ಲದೇ ತಾನು ಏನು ಮಾಡುತ್ತಿದ್ದೇನೋ ಅದರಲ್ಲಿ ಸಂಪೂರ್ಣವಾಗಿ ಮುಳುಗಿಹೋಗಿರುತ್ತದೆ ಮಗು. ಅಮ್ಮ ಬೈದರೂ, ಊಟಕ್ಕೆ ಕರೆದರೂ ಅದಕ್ಕೆ ಆಟವೇ ಬೇಕು. ಈಗಿನ ಕಾಲಕ್ಕೆ ಇನ್ನೂ ಒಂದನ್ನು ಸೇರಿಸಿಕೊಳ್ಳಬಹುದು! ಮೊಬೈಲ್ ಸ್ಕ್ರೋಲ್ ಮಾಡುವಾಗ ನಮಗೆ ಇರುವ ತನ್ಮಯತೆಯೂ ಅಷ್ಟೇ! ಅದರ ಮಟ್ಟವೇ ಬೇರೆ! ಕೊಂಚ ಯೋಚಿಸಿ, ಇದೇ ಏಕಾಗ್ರತೆಯನ್ನು ದಿನದ ಎರಡೇ ಎರಡು ಗಂಟೆ ನಾವು ಮಾಡಬೇಕಾದ ಅಗತ್ಯ ಕೆಲಸಕ್ಕೆ ಹಾಕಿದರೆ? ಓದಲು, ಬರೆಯಲು, ಸಂಗೀತ ಕಲಿಯಲು, ಅಡುಗೆ ಕಲಿಯಲು, ಹೊಸ ಭಾಷೆ ಅಭ್ಯಾಸ ಮಾಡಿಕೊಳ್ಳಲು, ಡ್ರೈವಿಂಗ್ ಕಲಿಯಲು ಹೀಗೆ ಬದುಕಿಗೆ ಬೇಕಾದ ಒಳ್ಳೆಯ ಸಂಗತಿಗಳಿಗಾಗಿ ಆ ಮಟ್ಟದ ಏಕಾಗ್ರತೆಯನ್ನು ಎರಡು ಗಂಟೆ ನಂತರ ಅದನ್ನು ಹೆಚ್ಚಿಸುತ್ತಾ ಉಪಯೋಗಿಸಿದರೆ ಒಂದಿಷ್ಟಾದರೂ ಉಪಯೋಗವಾದೀತು.
ದೀಪಾಹಿರೇಗುತ್ತಿ