Saturday, August 23, 2025

 ಕಥೆ-838

ಮಗುವಿಗೆ ಇರುವ ಏಕಾಗ್ರತೆ👌


ಗಮನಿಸಿದ್ದೀರಾ? ಮಗು ಆಟವಾಡುವಾಗ ಹೊಂದಿರುವ ತನ್ಮಯತೆ ಇದೆಯಲ್ಲ ಅದು ಜಗತ್ತಿನ ಅತ್ಯುನ್ನತ ಮಟ್ಟದ ಏಕಾಗ್ರತೆ! ಸುತ್ತಮುತ್ತಲಿನ ಜಗತ್ತಿನ ಗೊಡವೆಯೇ ಇಲ್ಲದೇ ತಾನು ಏನು ಮಾಡುತ್ತಿದ್ದೇನೋ ಅದರಲ್ಲಿ ಸಂಪೂರ್ಣವಾಗಿ ಮುಳುಗಿಹೋಗಿರುತ್ತದೆ ಮಗು. ಅಮ್ಮ ಬೈದರೂ, ಊಟಕ್ಕೆ ಕರೆದರೂ ಅದಕ್ಕೆ ಆಟವೇ ಬೇಕು. ಈಗಿನ ಕಾಲಕ್ಕೆ ಇನ್ನೂ ಒಂದನ್ನು ಸೇರಿಸಿಕೊಳ್ಳಬಹುದು! ಮೊಬೈಲ್‌ ಸ್ಕ್ರೋಲ್‌ ಮಾಡುವಾಗ ನಮಗೆ ಇರುವ ತನ್ಮಯತೆಯೂ ಅಷ್ಟೇ! ಅದರ ಮಟ್ಟವೇ ಬೇರೆ! ಕೊಂಚ ಯೋಚಿಸಿ, ಇದೇ ಏಕಾಗ್ರತೆಯನ್ನು ದಿನದ ಎರಡೇ ಎರಡು ಗಂಟೆ ನಾವು ಮಾಡಬೇಕಾದ ಅಗತ್ಯ ಕೆಲಸಕ್ಕೆ ಹಾಕಿದರೆ? ಓದಲು, ಬರೆಯಲು, ಸಂಗೀತ ಕಲಿಯಲು, ಅಡುಗೆ ಕಲಿಯಲು, ಹೊಸ ಭಾಷೆ ಅಭ್ಯಾಸ ಮಾಡಿಕೊಳ್ಳಲು, ಡ್ರೈವಿಂಗ್‌ ಕಲಿಯಲು ಹೀಗೆ ಬದುಕಿಗೆ ಬೇಕಾದ ಒಳ್ಳೆಯ ಸಂಗತಿಗಳಿಗಾಗಿ ಆ ಮಟ್ಟದ ಏಕಾಗ್ರತೆಯನ್ನು ಎರಡು ಗಂಟೆ ನಂತರ ಅದನ್ನು ಹೆಚ್ಚಿಸುತ್ತಾ ಉಪಯೋಗಿಸಿದರೆ ಒಂದಿಷ್ಟಾದರೂ ಉಪಯೋಗವಾದೀತು.  

ದೀಪಾಹಿರೇಗುತ್ತಿ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು