Friday, March 4, 2022

ಮಾದರಿ ವಿಜ್ಞಾನ ಶಿಕ್ಷಕ

 ಮಾದರಿ ಶಿಕ್ಷಕರಿಗೇ ಮಾದರಿ ಬಿ.ಎಂ.ಎಸ್.ಮೃತ್ಯುಂಜಯ


 ಅನೇಕ ಶಿಕ್ಷಕ ಮಿತ್ರರು ಅವರ ಶಿಸ್ತು, ಸನ್ನಡತೆ, ಪ್ರಾಮಾಣಿಕತೆ, ಮಾನವೀಯ ಸಂಬಂಧಗಳ ಬಗ್ಗೆ ನನ್ನ ಬಳಿ ಅನೇಕ ಸಾರಿ ಪ್ರಸ್ತಾಪಿಸಿದ್ದರು. ಕಸದಿಂದ ರಸ ಎಂಬ ವಾಕ್ಯದಂತೆ ಗಣಿತ ಮತ್ತು ವಿಜ್ಞಾನದ ಬೋಧನೋಪಕರಣಗಳನ್ನು ತಯಾರಿಸುವುದರಲ್ಲಿ ಅವರು ಎತ್ತಿದ ಕೈ ಎಂದು ಮಾತನಾಡುತ್ತಿದ್ದರು. ಅವರ ದಿನಚರಿಯ ಪ್ರತಿಕ್ಷಣವೂ ಅರ್ಥಪೂರ್ಣವಾಗಿ ವಿನಿಯೋಗವಾಗುತ್ತಿದೆ ಎಂಬುದನ್ನು ಅನೇಕರ ಬಾಯಿಂದ ಕೇಳಿದ್ದೆ. ಅಂಥವರನ್ನು ಒಮ್ಮೆ ನೋಡಲೇಬೇಕೆಂಬ ಉತ್ಸಾಹದಿಂದ ಭಾನುವಾರ ಮರಿಯಮ್ಮನಹಳ್ಳಿಯಲ್ಲಿ ಅವರ ಮನೆಗೆ ಭೇಟಿ ನೀಡಿದೆ. ಅಲ್ಲಿ 50ವರ್ಷದ ಗಡಿ ದಾಟಿದ ವ್ಯಕ್ತಿ ಕುಳಿತಿದ್ದರು. ಸುತ್ತಲೂ ಕೆಲಸಕ್ಕೆ ಬಾರದಂತಹ (ನಾವು ತಿಳಿದಂತೆ) ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಏನೋ ತಯಾರಿಕೆಯಲ್ಲಿ ಮಗ್ನರಾಗಿದ್ದಾರೆ. ನಾವು ಅವರ ಮುಂದೆ ಹೋಗಿ ಕುಳಿತದ್ದೂ ಅವರ ಗಮನಕ್ಕೆ ಬರಲಿಲ್ಲ. ಕೆಲ ಸಮಯದ ನಂತರ ಅವರು ಹಿಡಿದ ಕೆಲಸ ಮುಗಿಸಿದರು. ಆಗ ಸಂತಸದಿಂದ ಕಣ್ಣೆತ್ತಿ ನಮ್ಮನ್ನು ನೋಡಿ, ಯಾವಾಗ ಬಂದಿರೆಂದು ಪರಿಚಯ ಮಾಡಿಕೊಂಡರು. ಅದಾಗ ತಾನೆ ಅವರು ತಯಾರಿಸಿದ ವಿಜ್ಞಾನ ಉಪಕರಣವನ್ನು (ಶ್ವಾಸಕೋಶದ ಹಿಗ್ಗುವಿಕೆ ಕುಗ್ಗುವಿಕೆ) ಮಕ್ಕಳಿಗೆ ವಿವರಿಸುವಂಥಾ ಹುಮ್ಮಸ್ಸಿನಲ್ಲೆ ಪ್ರದಶರ್ಿಸಿದರು. ಅವರನ್ನು ನೋಡಿ ಇಂತಹ ಶಿಕ್ಷಕರು ನಮ್ಮ ನಡುವೆ ಇರುವರಲ್ಲಾ ಎಂಬ ಹೆಮ್ಮೆ ನನಗಾಯಿತು. ಅವರಾರು ಅಲ್ಲ, ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಪುರ ಸ.ಹಿ.ಪ್ರಾ.ಶಾಲೆಯ ಮುಖ್ಯಗುರುಗಳಾದ ಬಿ.ಎಂ. ಎಸ್.ಮೃತ್ಯುಂಜಯ.


ಅವರ ಮೇರುವ್ಯಕ್ತಿತ್ವ ಬಹುಮುಖಿಯಾಗಿ ಹರಡಿಕೊಂಡಿದೆ. ಮಾದರಿ ಶಿಕ್ಷಕನಾಗಿ, ಮಕ್ಕಳ ಸ್ನೇಹಿತನಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ತರಬೇತುದಾರರಾಗಿ, ಬರಹಗಾರರಾಗಿ, ಕಲಾವಿದರಾಗಿ, ಪರಿಸರ ಪ್ರೇಮಿಯಾಗಿ, ಉತ್ತಮ ಸಂಘಟಕರಾಗಿ, ಪಾರದರ್ಶಕ ಆಡಳಿತಗಾರರಾಗಿ ಹೀಗೆ ಅವರ ವ್ಯಕ್ತಿತ್ವದ ಗುಣಗಳನ್ನು ಸೇರಿಸುತ್ತಲೇ ಹೋಗಬಹುದು.


 ವಿದ್ಯಾರ್ಥಿಗಳು ತಾವೇ ಪ್ರಯೋಗಮಾಡಿ, ಅದನ್ನು ಕಂಡು ಕೊಳ್ಳಬೇಕೆಂಬ ಉತ್ಕಟ ಆಕಾಂಕ್ಷೆಯುಳ್ಳವರು. ಅವರ ಬರವಣಿಗೆಯು ಮುತ್ತುಗಳನ್ನು ಪೋಣಿಸಿದಂತಿರುತ್ತದೆ. ಅದನ್ನೇ ಅನೇಕ ಮಕ್ಕಳು ಮಾದರಿಯಾಗಿ ಅನುಸರಿಸಿರುವ ಉದಾಹರಣೆಗಳೂ ಇವೆ. ಮಕ್ಕಳ ಪ್ರತಿಭೆಗಳನ್ನು ಹೊರತೆಗೆಯಲು ನಾನಾರೀತಿಯ ಚಟುವಟಿಕೆಗಳನ್ನು ಆಯೋಜಿಸುತ್ತಾರೆ. ಒಟ್ಟಾರೆ ಅವರ ಪಾಠಮಾಡುವ ವಿಧಾನವು ಯಾಂತ್ರಿಕವಾಗಿರದೆ ವಿದ್ಯಾರ್ಥಿ ಬದುಕಿಗೆ ನೇರ ಸಂಬಂಧಿಸಿದ್ದಾಗಿರುತ್ತದೆ. ಅದರ ಫಲವಾಗಿ ಉನ್ನತ ಹುದ್ದೆ ಅಲಂಕರಿಸಿದ ಶಿಷ್ಯರೆಲ್ಲರೂ ಗುರುಗಳ ಮಾತಿಗೆ ಬೆಲೆಕೊಟ್ಟು ಕೊಟ್ಟಿರುವ ದೇಣಿಗೆಗಳನ್ನು ಲಕ್ಷಗಳಲ್ಲೇ ಲೆಕ್ಕಮಾಡಬೇಕು.


ಮೃತ್ಯುಂಜಯ ಶಿಕ್ಷಕರು ತಮ್ಮ ಶಾಲೆಯಲ್ಲಿರುವ ಕೊಠಡಿಗಳಿಗೆ ನೀಡಿರುವ ಶೀರ್ಷಿಕೆಗಳೂ ಅರ್ಥಬದ್ಧವಾಗಿವೆ. ಶಾಲಾ ತೋಟದಲ್ಲಿ ವಿವಿಧ ಬಗೆಯ ಗಿಡ ಮರಗಳನ್ನು ಮಕ್ಕಳಿಂದಲೇ ಬೆಳೆಸಿದ್ದಾರೆ. ಮಧ್ಯಾಹ್ನದ ಬಿಸಿಊಟಕ್ಕೆ ಬೇಕಾದ ಸೊಪ್ಪುಗಳನ್ನು ಸಾವಯವ ಕೃಷಿ ಪದ್ಧತಿಯಿಂದ ಬೆಳೆಸುತ್ತಿರುವುದು ವಿಶೇಷ. ಅವರೊಳಗೆ ಮನೆ ಮಾಡಿರುವ ಕಲಾವಿದನನ್ನು ಗುರುತಿಸದಿದ್ದರೆ ತಪ್ಪಾಗುತ್ತದೆ. ಉದಾಹರಣೆಗೆ ಗಿಡದಿಂದ ಉದುರಿ ಬೀಳುವ ಹೆಣ್ಣೆಲೆಗಳು ಎಷ್ಟರಮಟ್ಟಿಗೆ ಉಪಯೋಗಕ್ಕೆ ಬರುತ್ತವೆ?. ಎಲೆಗಳಿಗೆ ಯಾವ ರೂಪ ಕೊಟ್ಟರೆ ಅದು ಯಾವ ಚಿತ್ರವಾಗುತ್ತದೆ ?. ಅದು ಮಕ್ಕಳ ಕಲಿಕೆಯನ್ನು ಹೇಗೆ ಗಟ್ಟಿಗೊಳಿಸುತ್ತದೆ ?. ಈ ರೀತಿ ನಾನಾ ಪ್ರಶ್ನೆಗಳನ್ನು ಹಾಕಿಕೊಂಡು ರೂಪಿಸಿದ ಎಲೆ ಚಿತ್ರಗಳು ಸಾವಿರಾರು. ಚಿಕ್ಕ ಮಕ್ಕಳ ತಿಳುವಳಿಕೆಗಾಗಿಯೇ ವಿಜ್ಞಾನಕ್ಕೆ ಸಂಬಂಧಿಸಿದ ಚಿತ್ರಗಳು, ನಿಸರ್ಗದಲ್ಲಿ ಕಂಡುಬರುವ ಪ್ರಾಣಿ, ಪಕ್ಷಿ, ಕೀಟ, ಜಲಚರಗಳು ಹೀಗೇ ಅನೇಕ ವಸ್ತುಗಳೆಲ್ಲಾ ಎಲೆ, ಕಸ- ಕಡ್ಡಿಗಳಿಂದ ಹೊಸ ರೂಪ ಪಡೆಯುತ್ತವೆ. ಅಂತಹ ಚಿತ್ರಗಳನ್ನು ಮಕ್ಕಳ ಮುಂದಿಟ್ಟು ಪಾಠ ಮಾಡುವ ಕ್ರಮ, ಹೊಸ ಆಯಾಮದ ಕಲಾಸೃಷ್ಠಿ ಬೆರಗುಗೊಳಿಸುತ್ತದೆ. ಹಾಗಾಗಿ ಇವರು ಕಾರ್ಯನಿರ್ವಹಿಸುವ ಶಾಲೆಗಳು ಪಾಠಶಾಲೆಗಳಾಗದೇ ಪ್ರಯೋಗಶಾಲೆಗಳಾಗಿವೆ ಎಂದು ನಿಸ್ಸಂಶಯವಾಗಿ ಹೇಳಬಹುದು.


ಅರಳು ಮಲ್ಲಿಗೆ:- ಮಕ್ಕಳಲ್ಲಿ ಹುದುಗಿರುವ ಪಠ್ಯೇತರ ಪ್ರತಿಭೆಯನ್ನು ಹೊರತೆಗೆದು, ಅದಕ್ಕೆ ಹೊಸರೂಪ ಕೊಡುವ ಫಲವಾಗಿ ಇವರು ಹಮ್ಮಿಕೊಂಡ ಉತ್ತಮ ಕಾರ್ಯವೆ ಪ್ರತಿ ಶುಕ್ರವಾರದ ಅರಳುಮಲ್ಲಿಗೆ. ಅದರಲ್ಲಿ ಹೊರಗಿನ ಅತಿಥಿಗಳನ್ನು ಕರೆತಂದು ಮಕ್ಕಳ ಜ್ಞಾನದ ಹರವಿಗೆ ನೆರವಾಗಿದ್ದಾರೆ. ಮಕ್ಕಳ ಪ್ರತಿಭೆಗಳು ಹಾಡು, ಜನಪದ ಗೀತೆ-ನೃತ್ಯ, ಒಗಟು, ಕಥೆ, ಅಣುಕು ಭಾಷಣ, ರೂಪಕ, ರಸಪ್ರಶ್ನೆ, ಪ್ರಬಂಧ, ಭಾಷಣ, ಚಚರ್ಾಸ್ಪಧರ್ೆ, ಚಿತ್ರಕಲೆ, ರಂಗೋಲಿ ಮುಂತಾದ ಬಗೆಬಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಗಣಿತಮೇಳ, ಅಣುಕ ಮತದಾನ, ಅಣುಕು ಸಂಸತ್, ಕಾಂಪೊಸ್ಟ್ ಗೊಬ್ಬರ ತಯಾರಿಕೆ, ವಿಜ್ಞಾನ ವಸ್ತು ಪ್ರದರ್ಶನಗಳನ್ನು ಅರ್ಥಪೂರ್ಣವಾಗಿ ನಡೆಸಿದ್ದಾರೆ. ಇವೆಲ್ಲವುಗಳ ಫಲಿತಾಂಶವನ್ನು , ರೇಡಿಯೋ ಕಾರ್ಯಕ್ರಮಗಳಲ್ಲಿ ಮಕ್ಕಳು ಭಾಗವಹಿಸಿ ಯಶಸ್ವಿಯಾಗಿರುವುದರಲ್ಲಿ ಕಾಣಬಹುದು.


ಶಾಲೆಗಳ ಸಮುದಾಯದ ಸಹಭಾಗಿತ್ವ ಅಗತ್ಯ, ಹಾಗೆಂದು ಇವರು ಅಕ್ರಮಗಳಿಗೆ ರಾಜಿ ಮಾಡಿಕೊಂಡವರಲ್ಲ. ಸಕರ್ಾರದ ಹಣ ಒಂದಿಷ್ಟು ಪೋಲಾಗದಂತೆ ಶಾಲೆ-ಮಕ್ಕಳ ಸದ್ವಿನಿಯೋಗಕ್ಕೆ ಎಂಬ ಇವರ ಕಠಿಣ ನಿಲುವು ಅನೇಕರ ಕೆಂಗಣ್ಣಿಗೆ ಕಾರಣವಾಗಿದೆ. ಆ ನಿಟ್ಟಿನಲ್ಲಿ ಶಾಲೆಯ ಅಭಿವೃದ್ಧಿಗೆ ಯತ್ನಿಸಿದಾಗ ಅನೇಕ ಸಮಸ್ಯೆಗಳು ಮತ್ತು ಜನರನ್ನು ಎದುರು ಹಾಕಿಕೊಂಡರು. ಅದನ್ನು ಎಂದಿಗೂ ಅವರು ಪಾರದರ್ಶಕವಾಗಿಯೆ ವ್ಯಯಮಾಡಿದ್ದಾರೆ. ಹಾಗಾಗಿ ಇವರ ಹಣಕಾಸಿನ ನಿರ್ವಹಣೆ ಬಗ್ಗೆ ಒಬ್ಬರೂ ಬೆರಳು ಮಾಡುವುದಿಲ್ಲ. ಸರಕಾರವೇ ಎಲ್ಲ ಮಾಡಬೇಕೆಂದರೆ ಹೇಗೆ?. ಶಿಕ್ಷಕರು ಅದಕ್ಕೆ ಸಾಧ್ಯವಾದಷ್ಟು ಕೈ ಜೋಡಿಸಬೇಕು ಎಂಬ ಭಾವನೆಯಿಂದ ಮೃತ್ಯುಂಜಯ ಶಿಕ್ಷಕರು ಶಾಲೆಗೆ ದೇಣಿಗೆ ಪಡೆಯುವುದರಲ್ಲೂ ಹಿಂದೆ ಬಿದ್ದಿಲ್ಲ. ದಾನಿಗಳಿಂದ ವಿಜ್ಞಾನ ಕೊಠಡಿ, ವಿಜ್ಞಾನ ಉಪಕರಣಗಳು, ಕಂಪ್ಯೂಟರ್ಗಳೂ, ಪಾಠೋಪಕರಣಗಳು, ಬಿಸಿಊಟಕ್ಕೆ ಅಗತ್ಯ ವಸ್ತುಗಳು, ಪ್ರೌಢಶಾಲೆ ನಿರ್ಮಾಣಕ್ಕೆ ಎರಡು ಎಕರೆ ಭೂಮಿ, ಎರಡು ತರಗತಿ ಕೊಠಡಿಗಳು, ಶೌಚಾಲಯ, ಆಟೋಪಕರಣಗಳು, ಬೆಂಚ್, ಡೆಸ್ಕ್, ಪುಸ್ತಕ. . . . . ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸುಲಭವಾಗಿ ಲೆಕ್ಕಕ್ಕಿಡಲಾಗುವುದಿಲ್ಲ.


 ಮೃತ್ಯುಂಜಯ ಶಿಕ್ಷಕರು ಸಂಪನ್ಮೂಲ ವ್ಯಕ್ತಿಯಾಗಿ, ಬರಹಗಾರರಾಗಿ ಅನೇಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಆದರೆ ಅವರನ್ನೇ ಹಲವು ರಾಜ್ಯಮಟ್ಟದ  ಗೌರವಗಳು ಹುಡುಕಿಕೊಂಡು ಬಂದಿವೆ. ಕಲೆಯ ಆರಾಧಕರಾದ ಇವರು ಸಮಾಜದ ವಿವಿಧ ಸಂಘಟನೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ  ತೊಡಗಿಸಿಕೊಂಡಿದ್ದಾರೆ. ಕ.ಸಾ.ಪ, ಪುಟಾಣಿ ವಿಜ್ಞಾನ, ಕೈಹಿಡಿದು ನಡೆಸು, ಲಲಿತ ಕಲಾರಂಗ, ಮೈರಾಡ ಸಂಸ್ಥೆ. . . .ಮುಂತಾದವುಗಳಲ್ಲಿ ಅನೇಕ ಜವಾಬ್ದಾರಿಗಳನ್ನು ಹೊತ್ತು ನಿಭಾಯಿಸಿದ್ದಾರೆ. ಇಂತಹ ಶಿಕ್ಷಕರ ಸಂಖ್ಯೆ ವೃದ್ಧಿಸಬೇಕು ಎಂಬುದೇ ಎಲ್ಲರ ಹಾರೈಕೆ.


  - ಹೆಚ್.ಎಂ.ವನಿತ ಸ.ಶಿ ಸ.ಕಿ.ಪ್ರಾ.ಶಾಲೆ, ಹೊಸಆನಂದದೇವನಹಳ್ಳಿ. ಹ.ಬೊ.ಹಳ್ಳಿ. ಬಳ್ಳಾರಿ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು