ಅಂದು ಮಬ್ಬಾಗಿದ್ದ ಸೂರ್ಯ ಇಂದು ಪ್ರಜ್ವಲಿಸುತ್ತಿದ್ದ
ಕಾಲಚಕ್ರ ಎಲ್ಲರಿಗೂ ಒಂದೇ ಯಾರನ್ನು ಅವಮಾನಿಸಬಾರದು
-------------------------------------
🟨🟪🟨🟪🟨🟪🟨
*ಆಕೆಗೆ ಈಗಷ್ಟೇ ಜ್ಞಾನ ಬಂದಿತ್ತು 40 ರ ವರ್ಷ ದಲ್ಲೇ ಗರ್ಭಕೋಶದ ಗಡ್ಡೆ ಯ ಮೇಜರ್ ಆಪರೇಷನ್ ಮುಗಿದಾಗ ಎಲ್ಲರೂ ಕಂಗಾಲಾಗಿದ್ದರು ಆಕೆಯ ಓ ನೆಗೆಟಿವ್ ರಕ್ತ ಸಿಗದಾಗ..ಆಕೆಯ ಪ್ರಾಣದ ಅಸೆ ಬಿಟ್ಟಿದ್ದರು ಎಲ್ಲ..*😔😔
*ಅಷ್ಟರಲ್ಲಿ ಓಡಿ ..ಕಾರ್ ಅಲ್ಲಿ ಬಂದ ಗುಂಗುರು ಕೂದಲ ಯುವಕ ರಕ್ತ ಕೊಟ್ಟು ಜೀವ ಉಳಿಸಿ ಹೋಗಿದ್ದ..ಆಕೆಗೂ ಕುತೂಹಲ ಯಾರಿರಬಹುದು ನನ್ನ ಜೀವ ಉಳಿದಿದೆ ಭಗವಂತ ಎಂದು🥱*
*ಅವರಿವರ ಬಳಿ ಕೇಳಿದರೆ ಅದು ವ್ಯರ್ತವಾಗಿತ್ತು ಬೇಸರ ವಿತ್ತು ಆಕೆಯ ಮುಖದಲ್ಲಿ ಅಷ್ಟರಲ್ಲಿ ನರ್ಸ್ ಒಬ್ಬಳು ಓಡೋಡಿ ಬಂದಳು ಇವಳ ರೂಮ್ಗೆ..ಮೇಡಂ ನಿಮಗೆ ರಕ್ತಕೊಟ್ಟ ವ್ಯಕ್ತಿ ನಿಮಗೆ ಕೊಡಲು ಈ ಕಾಗದ ವೊಂದನ್ನು ಕೊಟ್ಟಿದ್ದಾನೆ..ಎಂದಾಗ ತಲೆ ಎತ್ತಿ ನೋಡಿದಳು.*
*ಕೈಗಳು ಪತ್ರ ಒಡೆದರೆ ಅಲ್ಲಿ ಓರೇ ಕೋರೆ ಅಕ್ಷರಗಳಿದ್ದವು..*
*ಕಣ್ಣು ಬಿಟ್ಟು* *ಓದಿದಳು..ಹಾಯ್ ನಾನು ಸೂರ್ಯ,ನೆನಪಿದೆಯಾ* *ಸರಿಯಾಗಿ 20 ವರ್ಷದ ಹಿಂದೆ ನೀನಾಗ ಕಾಲೇಜು ಹುಡುಗಿ* *ನಾನು ನಿನ್ನ ಪ್ರೀತಿಸುತ್ತಿದ್ದ ಹುಚ್ಚು ಪ್ರೇಮಿ,ಆಕೆಗೆ ಈಗ ನೆನಪಾಗಿದ್ದ ಆತ🥱🥱* .
*ಆಕೆ ಬೆವರುತಿದ್ದಳು...ಪತ್ರ ಮುಂದುವಸರಿಸಿದಳು..*
*ನಾನು ಬಡವನಾಗಿದ್ದೆ ಶಾಲೆಗೆ ಹೋಗಲು ಹಣ ಇಲ್ಲದೆ ಯಾರದೋ ಮನೆಯಲ್ಲಿ ಕುರಿ ಕಾಯುತಿದ್ದೆ..ಆದರೇನು ನೀ ಕಾಲೇಜಿಗೆ ಹೋಗುವಾಗ ಬರುವಾಗ ನಿನ್ನನ್ನೇ ನೋಡುತಿದ್ದೆ..ನೆನಪಿದೆಯಾ ನಿನಗೆ ಅಂದು ನನ್ನ ಹುಚ್ಚು ಪ್ರೇಮ ದಿಂದ ನನಗೆ ಗೊತ್ತಿದ್ದ ಅರೆಬರೆ ಕನ್ನಡ ದಿಂದ ನನ್ನ ರಕ್ತ ದಿಂದ ನಿನಗೊಂದು ಪ್ರೇಮ ಪತ್ರ ಬರೆದಿದ್ದೆ.❤️❤️*
*ನೀನು ಬರುವುದನ್ನೇ ಕಾದಿದ್ದೆ ನೀನು ನಿನ್ನ ಗೆಳತಿಯರೊಂದಿಗೆ ಬಂದಾಗ ಓಡೋಡಿ ಬಂದು ನನ್ನ ಪ್ರೇಮ ಪತ್ರ* *ಕೊಟ್ಟು,ಪ್ರೇಮದ ವಿಷಯ ನಿನ್ನಲ್ಲಿ ಹೇಳಿದ್ದೆ..ಸಿಟ್ಟಲ್ಲಿ ನಿನ್ನ ಮುಖ ಕೆಂಪೇರಿತ್ತು..ನನಗೆ ಇಷ್ಟಇಲ್ಲ ಎಂದಷ್ಟೇ ಹೇಳಬಹುದಿತ್ತು😔 ಆದರೆ ನೀನು ರಕ್ತದಲ್ಲಿ ಬರೆದ ಆ ಪ್ರೇಮಪತ್ರವನ್ನು ನಿನ್ನ ಎಡ ಕಾಲಲ್ಲಿ ಒದ್ದು ಹೇಳಿದ್ದೆ .ಮುಟ್ಟಾಳ ..ನಾನು ಆಕಾಶ ನೀನು ಭೂಮಿ ...ನನಗೆ ಅಮೇರಿಕಾದ* *ಹುಡುಗನೊಂದಿಗೆ ಮದುವೆ ಆಗುತ್ತದೆ,ಅಲ್ಲಿ ಆರಾಮದಲ್ಲಿ ಸುಖದ ಸುಪ್ಪತ್ತಿಕೆಯಲ್ಲಿ ಜೀವಿಸುವವಳು ನಾನು ನಿನ್ನಂತಹ ಕುರಿ ಕಾಯುವವನೊಂದಿಗೆ*
*ಮದುವೆ ಆಗಿ ಕುರಿ ಕಾಯುವ* *ಅವಶ್ಯಕತೆ ನನಗಿಲ್ಲ ಇನ್ನೊಮ್ಮೆ*
*ಪ್ರೀತಿ ಗೀತಿ ಎಂದು ನನಗೆ* *ಮುಖ ತೋರಿಸಿದರೆ ನಾನಲ್ಲ ನನ್ನ ಚಪ್ಪಲಿ ಮಾತಾಡುತ್ತದೆ ಎಂದಿದ್ದೆ...ನನ್ನ ರಕ್ತದ ಪ್ರೇಮ ಪತ್ರ ನಿನ್ನ ಚಪ್ಪಲಿನ ಕೆಳಗೆ ಬಿದ್ದು ಹರಿದಿತ್ತು,ನನ್ನ ಮನಸ್ಸು ಕೂಡ....😔😔.*
*ಇಂದು 20 ವರ್ಷ ದ ನಂತರ ಅದೇ ಕುರಿ ಕಾಯುತಿದ್ದ ಸೂರ್ಯ ಜೀವನದಲ್ಲಿ* *ವ್ಯಾಪಾರದಲ್ಲಿ ಯಶಸ್ಸಾಗಿ ನಿನ್ನ ಮುಂದೆ* *ಬಂದಿದ್ದೇನೆ.ನಿನಗೆ ರಕ್ತ ಬೇಕು ಎಂದು ಯಾರೋ ಹೇಳಿದಾಗ ನನ್ನ ಹೃದಯ ಓಡೋಡಿ ಬಂದು ರಕ್ತ ಕೊಟ್ಟಿತು ಯಾಕೆಂದರೆ ಅದೇ ಹೃದಯ ನಿನ್ನನ್ನು* *ಒಂದಾನೊಂದು ಕಾಲದಲ್ಲಿ ಪ್ರೀತಿಸಿದ್ದು..ಅದೇ ಅಂದು ನೀನು ಕಾಲಲ್ಲಿ ತುಳಿದ*
*ಅದೇ ರಕ್ತ ಇಂದು ನಿನ್ನ ದೇಹದಲ್ಲಿ ಹರಿಯುತ್ತಿದೆ,ನಿನ್ನ* *ಪ್ರಾಣಉಳಿಸಿದೆ,ನೆನಪಿಟ್ಟುಕೋ ಜೀವನದಲ್ಲಿ ಇನ್ನೊಬ್ಬರನ್ನು ಅವಮಾನಿಸುವ ಮೊದಲು ಯೋಚಿಸು ಯಾಕೆಂದರೆ ಕಾಲ ಒಂದೇ ರೀತಿ* *ಇರುವುದಿಲ್ಲ..ಓದುವಾಗ ಕಣ್ಣೀರ ಹನಿಗಳು ಆಕೆಯ* *ಕಣ್ಣಲ್ಲಿದ್ದವು..ಆಕೆ ಆಸ್ಪತ್ರೆಯ 4 ನೆಯ ಫ್ಲೋರ್ ಇಂದ ಕೆಳಗೆ* *ನೋಡಿದರೆ ಆಕೆಯ ಗಂಡ ಸ್ಕೂಟರ್ ಅಲ್ಲಿ ಬಂದಿದ್ದ.. ಸೂರ್ಯನ ಕೋಟಿ ಬೆಲೆಯ*
*ಓಡಿ ಕಾರು* *ಹೊರಹೋಗಿತ್ತು.ಆತ ಅಂದು ನಾನೆ ಹೇಳಿದ್ದಂತೆ ನನಗೆ ಮುಖ ತೋರಿಸದೆ ನನಗೆ ಪ್ರಾಣಭಿಕ್ಷೆ ನೀಡಿ ಅಲ್ಲಿಂದ ಹೋಗಿದ್ದ*😔😔.
*ನಿಜ*
*ಅಂದು ಮಬ್ಬಾಗಿದ್ದ ಸೂರ್ಯ ಇಂದು ಪ್ರಜ್ವಲಿಸುತಿದ್ದ*🌅🌅🌅
*ನಾವು ಹಣ,ವಿದ್ಯೆ ಹಾಗು ಅದಿಕಾರದ ಮದ ತಲೆಗೇರ ದಂತೆ ನೋಡ ಬೇಕಾದ್ದು ಅತೀ ಅವಶ್ಯಕ..ಆ ಮದ ದೊಂದಿಗೆ ಬರುವ ಅಹಂಕಾರ ನಮ್ಮನ್ನೇ ನಾಶಗೊಳಿಸುತ್ತದೆ..ಇನ್ನೊಬ್ಬ ನನ್ನ ನಿರ್ಲಕ್ಷಿಸುವ, ಚುಚ್ಚಿ ಮಾತನಾಡುವ ಸ್ವಭಾವ ವನ್ನು ಬದಲಾಯಿಸಿ ಕೊಳ್ಳದಿದ್ದರೆ ಕಾಲವೇ ನಮಗೆ ಉತ್ತರಿಸುತ್ತದೆ,ಅದೆಷ್ಟೋ ಬಾರಿ ನಾವು ಅವಮಾನಿಸಿದ ಮಂದಿಯೇ ನಮಗೆ ಉಪಯೋಗಕ್ಕೆ* *ಬರುವುದುಂಟು...ಹಾಗಾಗಿ ಇನ್ನೊಬ್ಬರನ್ನು ಅವಮಾನಿ ಸುವ ಮೊದಲು ಹತ್ತು ಬಾರಿ*
*ಯೋಚಿಸಿ ...🙏🙏🙏🙏*
🟨🟪🟨🟪🟨
No comments:
Post a Comment