Wednesday, November 16, 2022

ಮಕ್ಕಳನ್ನು ಮುದ್ದಿಸುವುದು ಮಾತ್ರವಲ್ಲ; ದ೦ಡಿಸುವುದೂ ಪ್ರೀತಿಯೇ


೦೧ . ಮಕ್ಕಳು ಕೇಳಿದ್ದೆಲ್ಲವನ್ನೂ ಕೊಡಿಸುವುದಷ್ಟೇ ಪ್ರೀತಿಯಲ್ಲ, ಕೊಡಿಸದೇ ಇದ್ದು ನಿರಾಕರಣೆಯ ನೋವ ಸಹಿಸೋದನ್ನು ಕಲಿಸೋದು ಕೂಡ ಪ್ರೀತಿಯೇ...


೦೨ . ಕೇಳಿದಲ್ಲಿಗೆ ಕರೆದೊಯ್ಯುವುದು/ಕಳಿಸುವುದಷ್ಟೇ ಅಲ್ಲ, ಕರೆದೊಯ್ಯದೇ/ಕಳಿಸದೇ ಮನೆಯಲ್ಲಿ ಇರುವಂತೆ ಮಾಡಿ ನಿರಾಸೆಯನ್ನು ಅರಗಿಸಿಕೊಳ್ಳೋದನ್ನು ತಿಳಿಸೋದೂ ಪ್ರೀತಿಯೇ...


೦೩ . ಕೇಳಿದ್ದೆಲ್ಲವನ್ನೂ ಅವರ ಬಾಯಿಂದುದುರಿದ ತಕ್ಷಣ ಹಾಜರುಪಡಿಸೋದಷ್ಟೇ ಅಲ್ಲ, ತಮ್ಮ ಅಗತ್ಯಗಳಿಗಾಗಿ ಕಾಯುವ ತಾಳ್ಮೆ ಕಲಿಸೋದೂ ಪ್ರೀತಿಯೇ...


೦೪ . ಅವರು ಹೋದ ದಾರಿಯಲ್ಲಿಯೇ ಅವರನ್ನು ಅವರ ಪಾಡಿಗೆ ಬಿಡುವುದಷ್ಟೇ ಅಲ್ಲ, ಸರಿಯಾದ ದಾರಿಯನ್ನು ತೋರಿಸುವುದೂ ಕೂಡ ಪ್ರೀತಿಯೇ...


೦೫ . ಅವರಿಗೆ ಅನಿಸಿದ್ದೆಲ್ಲವನ್ನೂ ಹೇಳುವಷ್ಟು ಸ್ವಾತಂತ್ರ್ಯ ಕೊಡುವುದಷ್ಟೇ ಅಲ್ಲ, ಯಾವ ಸಮಯದಲ್ಲಿ ಏನು ಮತ್ತು ಎಷ್ಟು ಮಾತನಾಡಬೇಕೆಂಬುದರ ಅರಿವು ಮೂಡಿಸೋದೂ ಪ್ರೀತಿಯೇ...


೦೬ . ಆಸೆ ಪಟ್ಟದ್ದೆಲ್ಲವನ್ನೂ ಕೊಂಡು ಯಾ ತಯಾರಿಸಿ ತಿನ್ನಿಸುವುದಷ್ಟೇ ಅಲ್ಲ, ತಮ್ಮ ದೇಹ ಮತ್ತು ಆರೋಗ್ಯದ ಬಗ್ಗೆ ನಿಗಾ ವಹಿಸೋದನ್ನು ರೂಢಿಸೋದೂ ಪ್ರೀತಿಯೇ...


೦೭ . ಅವರಿಗೆ ಬೇಕಾದ್ದನ್ನೆಲ್ಲಾ ಮಾಡೋದಕ್ಕೆ ಅನುವು ಮಾಡಿಕೊಡೋದಷ್ಟೇ ಅಲ್ಲ, ಮಾಡಲೇಬಾರದಂಥವುಗಳ ಬಗ್ಗೆ ತಿಳಿಹೇಳಿ ತಿದ್ದೋದೂ ಕೂಡ ಪ್ರೀತಿಯೇ...


೦೮ . ಅವರಿಗೆ ಬೇಕಾದಷ್ಟು ಖರ್ಚಿಗೆ ಹಣ ನೀಡೋದಷ್ಟೇ ಅಲ್ಲ, ಅದರ ದುಡಿಮೆಗೆ ಪಟ್ಟ ಶ್ರಮ ಮತ್ತದರ ಬೆಲೆ ತಿಳಿಸೋದೂ ಪ್ರೀತಿಯೇ...


೦೯ . ಸಾಯುವವರೆಗೆ ದುಡಿಯುವುದನ್ನಷ್ಟೇ ಕಲಿಸೋದಲ್ಲ, ದುಡಿತವನ್ನು ಉಳಿಸಿ ಭವಿಷ್ಯಕ್ಕೆ ಕೂಡಿಡೋದನ್ನು ಕಲಿಸೋದೂ ಪ್ರೀತಿಯೇ...


೨೦ . ತನ್ನಿಂದಾಗದ ಕೆಲಸವೇ ಇಲ್ಲ ಎಂಬಷ್ಟು ಹುರುಪು ತುಂಬೋದಷ್ಟೇ ಅಲ್ಲ, ನನ್ನಂತೆಯೇ ಇತರರೂ ಎಲ್ಲರೂ ಕೂಡಿ ನೆಮ್ಮದಿಯಿಂದಿರಬೇಕೆಂಬುದನ್ನು ತಿಳಿಸೋದೂ ಪ್ರೀತಿಯೇ...


೨೧ . ಬರಿಯ ಸುಖ, ಗೆಲುವು, ಸಂತೋಷಗಳನ್ನಷ್ಟೇ ಒಪ್ಪೋದಲ್ಲ, ಕಷ್ಟ, ನೋವು, ಸೋಲುಗಳನ್ನೂ ಅಷ್ಟೇ ಸಮನಾಗಿ ಸ್ವೀಕರಿಸೋದನ್ನ ಕಲಿಸೋದೂ ಪ್ರೀತಿಯೇ..‌.


೨೨ . ದುಡಿಮೆಯ ಜಾಲದಲ್ಲಿ ಸಿಕ್ಕು ಯಾಂತ್ರಿಕವಾಗೋದಷ್ಟೇ ಅಲ್ಲ, ಮಾನವೀಯ ಮೌಲ್ಯಗಳ ರೂಢಿಸಿಕೊಳ್ಳೋದನ್ನ ಕಲಿಸೋದೂ ಪ್ರೀತಿಯೇ...

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು