Wednesday, July 19, 2023

 ಗುರುಗಳ ಹತ್ತಿರ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂದು ಕೇಳಿದರೆ?''

ಗುರುಗಳು ಹೇಳಿದರು -

" ಮೊದಲು ನೀನು ನಿನ್ನ ಕೋಣೆಯನ್ನು ತಪಾಸಣೆ ಮಾಡಿ ಅರ್ಥಮಾಡಿಕೊ..."


ಗುರುಗಳ ಮಾತಿನಂತೆ ಕೋಣೆಯಲ್ಲೆಲ್ಲಾ ಕಣ್ಣೋಡಿಸಿದಾಗ ನನ್ನ ಪ್ರಶ್ನೆಗೆ ಉತ್ತರ ನನಗೆ ಸಿಕ್ಕಿತು...


ಮನೆಯ ಮೇಲ್ಛಾವಣಿ ಹೇಳಿತು -

" ನಿನ್ನ ಗುರಿ ಎತ್ತರವಾಗಿರಬೇಕು..."


ಫ್ಯಾನ್ ಹೇಳಿತು -

" ಯಾವಾಗಲೂ ಕೂಲ್ ಆಗಿರು..."


ಗಡಿಯಾರ ಹೇಳಿತು -

" ಸಮಯವು ಬೆಲೆಯುಳ್ಳದ್ದಾಗಿದೆ..."


ಕ್ಯಾಲೆಂಡರ್ ಹೇಳಿತು -

" ದಿನಗಳು ಅತ್ಯಮೂಲ್ಯವಾದದ್ದು ದಿನವನ್ನು ಸದುಪಯೋಗಪಡಿಸಿಕೊ....."


ಪರ್ಸ್ ಹೇಳಿತು -

" ಮುಂದಿನ ಭವಿಷ್ಯಕ್ಕಾಗಿ ಈಗಿನಿಂದಲೇ ಶೇಖರಿಸಿ ಇಡು....


ಕನ್ನಡಿ ಹೇಳಿತು -

" ನೀನು ಮೊದಲು ನಿನ್ನನ್ನು ಅರ್ಥ ಮಾಡಿಕೊ..."


ದೀಪ ಹೇಳಿತು -

" ಇತರರಿಗೂ ಬೆಳಕನ್ನು ಹರಡು..."


ಗೋಡೆ ಹೇಳಿತು -

" ಕೈಲಾದಷ್ಟು ಇತರರ ಭಾರವನ್ನು ಹೋರು..."


ಕಿಟಕಿ ಹೇಳಿತು -

" ನಿನ್ನ ನೋಟ ದೀರ್ಘ ದೂರದವರೆಗೂ ವ್ಯಾಪಿಸುವಂತಿರಲಿ...."


ನೆಲ ಹೇಳಿತು -

" ಭೂಮಿಯನ್ನು ಪ್ರೀತಿಸು.‌.."


ಮೆಟ್ಟಿಲು ಹೇಳಿತು - 

" ಮುಂದೆ ಇಡುವ ಪ್ರತಿಯೊಂದು ಹೆಜ್ಜೆಯನ್ನೂ ಶ್ರದ್ಧೆಯಿಂದ ಇಡು....".

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು