Friday, August 11, 2023

 ಹಠಮಾರಿಗಳಾಗುವ ಧೈರ್ಯ

ಸಣ್ಣ ಕತೆಗಳ ಸರದಾರ, ಕನ್ನಡದ ಆಸ್ತಿ ಎಂದೇ ಕರೆಯಲ್ಪಡುತ್ತಿದ್ದ ‘ಶ್ರೀನಿವಾಸ’ ಕಾವ್ಯನಾಮದ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ತಮ್ಮ ‘ಅರ್ಚನ’ ಎಂಬ ಸಣ್ಣ ಕತೆಗಳ ಪುಸ್ತಕದಲ್ಲಿ ಬರೆದಿರುವ ಪುಟ ಇಲ್ಲಿದೆ.

ಕಳೆದ ಶತಮಾನದಲ್ಲಿ ಹಳೆಯ ಮೈಸೂರು ರಾಜ್ಯದ ಸಣ್ಣ ಹಳ್ಳಿಯೊಂದರಲ್ಲಿ ಶ್ರೀಕಂಠಯ್ಯ ಎನ್ನುವವರು ಶಾನುಭೋಗರಾಗಿದ್ದರು. ಬದುಕಿನಲ್ಲೂ, ನೌಕರಿ ಯಲ್ಲೂ ಶ್ರದ್ಧೆಯುಳ್ಳವರು. ಒಮ್ಮೆ ಅವರು ಸಂಪ್ರದಾಯದಂತೆ, ದೇವರ ಪೂಜೆ ಮಾಡು ತ್ತಿದ್ದಾಗ, ಸರಕಾರಿ ಸೇವಕರೊಬ್ಬರು ಬಂದು ಡೆಪ್ಯೂಟಿ ಕಮೀಷನರ್ ಸಾಹೇಬರು ಬಂದಿದ್ದಾರೆ. ಅಮಲ್ದಾರರು, ಶಾನು ಭೋಗರನ್ನು ಕರೆದುಕೊಂಡು ಬನ್ನಿ ಎಂದು ಆಜ್ಞಾಪಿಸಿದ್ದಾರೆ. ತಾವು ತಕ್ಷಣ ಬರಬೇಕಂತೆ ಎಂದರು.

ಶ್ರೀಕಂಠಯ್ಯನವರು ನಾನು ದೇವರ ಪೂಜೆಯಲ್ಲಿ ಕುಳಿತಿದ್ದೇನೆ. ಪೂಜೆಯನ್ನು ಮುಗಿಸಿಕೊಂಡು ಬರುತ್ತೇನೆಂದು ನಾನು ವಿಜ್ಞಾ ಪಿಸಿದೆನೆಂದು ಸಾಹೇಬರಿಗೆ ಹೇಳಿ ಸೇವಕರು ಅಮಲ್ದಾರರಿಗೆ ಇದನ್ನು ಹೇಳಿದಾಗ ಅವರು ಕೋಪಿಸಿಕೊಂಡು ಇದನ್ನು ಡಿಸಿ ಯವರಿಗೆ ತಿಳಿಸಿದರು. ಡಿಸಿಯವರಿಗೂ ಕೋಪ ಬಂತು. ಅವರಿಗಾಗಿ ನಾವು ಕಾಯುವುದು ಸಾಧ್ಯವಿಲ್ಲ. ನಮ್ಮ ಕೆಲಸ ಮುಗಿಸಿ ಕೊಂಡು ಹೋದ ಮೇಲೆ ಪೂಜೆ ಮಾಡಿಕೊಳ್ಳಲಿ. ತಕ್ಷಣ ಬರಹೇಳಿ ಎಂದು ಆಗ್ರಹಿಸಿದರು. ಸೇವಕರು ಹೋಗಿ ಶಾನುಭೋಗರಿಗೆ ತಿಳಿಸಿದರು. ಶಾನುಭೋಗರು ಕಾಗದವೊಂದರಲ್ಲಿ ಅಮಲ್ದಾರ ಮಹಾಸ್ವಾಮಿಯವರಲ್ಲಿ ವಿನಯಪೂರ್ವಕ ವಿಜ್ಞಾಪನೆ.


ನಾನು ನನ್ನ ಶಾನುಭೋಗ ಕೆಲಸಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಇದನ್ನು ಸ್ವೀಕರಿಸಿ ಉಪಕಾರ ಮಾಡಬೇಕೆಂದು ವಿನಯ ಪೂರ್ವಕವಾಗಿ ಬೇಡಿಕೊಳ್ಳುತ್ತೇನೆ ಬರೆದು ಅಮಲ್ದಾರರಿಗೆ ಕಳುಹಿಸಿಕೊಟ್ಟರು. ಅದನ್ನು ನೋಡಿ ಅಮಲ್ದಾರರಿಗೂ, ಡಿಸಿ ಯವರಿಗೂ ಮತ್ತಷ್ಟು ಆಶ್ಚರ್ಯವಾಯಿತು. ಯಾರೀ ಅಪರೂಪದ ಶಾನುಭೋಗ ಎಂದುಕೊಳ್ಳುತ್ತ ಶಾನುಭೋಗರ ಪೂಜೆ ಮುಗಿದ ಮೇಲೆ ಬರಬೇಕೆಂದು ಹೇಳಿಕಳುಹಿಸಿದರು. ತಾವು ನಡೆಸಲು ಬಂದಿದ್ದ ಕಾರ್ಯವನ್ನು ಆರಂಭಿಸಿಬಿಟ್ಟರು.


ಶಾನುಭೋಗರು ಪೂಜೆಯನ್ನು ಸಾಂಗೋಪಾಂಗವಾಗಿ ಮುಗಿಸಿ, ಸಾಹೇಬರ ಬಳಿ ಬಂದು ನಿಂತು ಕೈಮುಗಿದರು. ಡಿಸಿಯವರು ಏರುದನಿಯಲ್ಲಿ ಏನ್ರೀ ಇದು? ನಮ್ಮನ್ನು ಕಾಯಿಸಬೇಡಿ ಎಂದರೆ, ಕೆಲಸಕ್ಕೆ ರಾಜಿನಾಮೆ ಕೊಡುತ್ತೇನೆನ್ನುತ್ತೀರಿ? ವಿನಯ ಪೂರ್ವ ಕವೆಂದು ಬೇರೆ ಹೇಳುತ್ತೀರಿ! ಇದೆಂತಹ ವಿನಯ? ಎಂದು ಶಾನುಭೋಗರು ಮಹಾಸ್ವಾಮಿ, ವಿನಯದಲ್ಲಿ ಯಾವ ಲೋಪವೂ ಇಲ್ಲ. ತಾವು ಜಿಲ್ಲಾಧಿಕಾರಿಗಳು, ನಾನೊಬ್ಬ ಬಡ ಶಾನುಭೋಗ. ತಮ್ಮ ಸನ್ನಿಧಿಯಲ್ಲಿ ನನ್ನಂಥವರು ಸಾವಿರ ಜನರಿ ರಬಹುದು. ನಾನು ಬಹಳ ಬಲ್ಲವನಲ್ಲ. ಆದರೆ ನಮ್ಮ ಹಿರಿಯರು ಹೇಳಿದ್ದನ್ನು ಕೇಳಿದ್ದೇನೆ.


ಅವರು ನಡೆದುಕೊಂಡದ್ದನ್ನೂ ನೋಡಿದ್ದೇನೆ. ದೇವರ ಪೂಜೆ ಮಾಡುವಾಗ ಗುರುಗಳ ಹೊರತು ಯಾರೇ ಬಂದರೂ, ಮಧ್ಯೆ ಎದ್ದು ಬರಬಾರದೆಂಬ ಶಾಸ್ತ್ರವಿದೆಯಂತೆ. ತಾವು ಬರುವುದು ನನಗೆ ಮೊದಲೇ ಗೊತ್ತಿರಲಿಲ್ಲ. ನಾನು ದೇವರ ಪೂಜೆಗೆ ಕುಳಿತಿ ದ್ದಾಗ ತಾವು ಹೇಳಿ, ನಾನು ದೇವರ ಪೂಜೆಯನ್ನು ಬಿಟ್ಟು ತಮ್ಮ ಬಳಿಗೆ ಬಂದಿದ್ದರೆ ದೇವರು ತಮಗಿಂತ ಕಡಿಮೆಯವನು ಎಂದ ಹಾಗೆ ಆಗುತ್ತಿರಲಿಲ್ಲವೇ? ಈ ಅಪಚಾರವನ್ನು ಮಾಡಲಾರದೆ ನಾನು ಪೂಜೆ ಮುಗಿಸಿ ಬರುತ್ತೇನೆಂದು ವಿಜ್ಞಾಪಿಸಿದೆ. ಆದರೆ ತಕ್ಷಣ ಬರಬೇಕೆಂದೂ ತಮ್ಮ ಅಪ್ಪಣೆ ಆಯಿತು. ಬೇರೆ ದಾರಿಯಿಲ್ಲದೆ ಶಾನುಭೋಗತನದಿಂದ ಬಿಡುಗಡೆ ದಯಪಾಲಿಸಿ ಎಂದು ರಾಜಿನಾಮೆ ಬರೆದುಕೊಟ್ಟೆ ಎಂದರು.


ಶಾನುಭೋಗರ ಮಾತು ಕೇಳಿ ಸಾಹೇಬರುಗಳು ಗಟ್ಟಿಯಾಗಿ ನಕ್ಕು ಒಳ್ಳೆ ಮೊಂಡು ಶಾನುಭೋಗರಯ್ಯಾ ನೀವು! ಪೂಜೆಯನ್ನು ಮಧ್ಯೆ ನಿಲ್ಲಿಸಿ ನಾವು ಹೇಳಿದ್ದುದ್ದು ಸರಿಯಾಗಲಿಲ್ಲ. ಅದನ್ನು ಮರೆತುಬಿಡಿ. ರಾಜಿನಾಮೆ ಕೊಡೋದು ಬೇಡ ಎಂದರು. ಶಾನು ಭೋಗರು ಅಪ್ಪಣೆ ಮಹಾಸ್ವಾಮಿ ಎನ್ನುತ್ತಾ ರಾಜಿನಾಮೆಯನ್ನು ಹಿಂದಕ್ಕೆ ಪಡೆದುಕೊಂಡರಂತೆ. ಮೇಲ್ಕಂಡ ಕತೆಯಲ್ಲಿ ಕಾಣುವ ಶಾನುಭೋಗ ಶ್ರೀಕಂಠಯ್ಯನವರಿಗೆ ಇರುವಷ್ಟೇ ಭಕ್ತಿ ಶ್ರದ್ಧೆಗಳು ನಮಗೂ ಇದ್ದರೆ ನಾವೂ ಹಠಮಾರಿಗಳಾಗುವ ಧೈರ್ಯ ಮಾಡಬಹುದಲ್ಲವೇ?

ಕೃಪೆ:ವಿಶ್ವವಾಣಿ.  

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು