Saturday, September 23, 2023

 ಧೈರ್ಯದಿಂದ ಮುನ್ನಡೆದರೆ ಗೆಲುವು



ಈ ಜಗತ್ತಿನಲ್ಲಿ ಸಣ್ಣ ಮನುಷ್ಯರೂ ಕೂಡ ಇತರರ ಸಹಕಾರ, ಸಲಹೆ ಪಡೆದು ಶ್ರದ್ಧೆಯಿಂದ ಮುಂದುವರಿದು ಸಾಧನೆ ಮಾಡಿದರೆ ಸಾಫಲ್ಯ ಗಳಿಸಲು ಸಾಧ್ಯ. ಆರಂಭದಲ್ಲಿ ತುಸು ಹಿನ್ನಡೆಯುಂಟಾದರೂ ಗಾಬರಿಯಾಗಬೇಕಾಗಿಲ್ಲ. ಧೈರ್ಯದಿಂದ ಮುನ್ನುಗ್ಗಿ ನಡೆದರೆ ಗೆಲುವು ಸಾಧ್ಯವಾಗುತ್ತದೆ ಎಂಬುದನ್ನು ನಿರೂಪಿಸುವಂತಹ ಒಂದು ಹೃದಯಸ್ಪರ್ಶಿ ನಿದರ್ಶನ ಹೀಗಿದೆ.

ಅಮೆರಿಕದಲ್ಲಿ ಜಾನ್ಸನ್‌ ಎಂಬ ಒಬ್ಬ ಉತ್ಸಾಹಿ ತರುಣನಿದ್ದ. ತೀರಾ ಬಡವ. ಕಾರ್ಖಾನೆಯ ಕೂಲಿಕಾರನ ಪುತ್ರ. ತಾಯಿಯಾದರೋ ಬಟ್ಟೆ ಹೊಲಿಗೆ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಳು. ಜಾನ್ಸನ್‌ಗೆ ತಾನೊಬ್ಬ ಪತ್ರಕರ್ತನಾಗಬೇಕು, ಬಡ ಜನರಿಗಾಗಿ ಒಂದು ಪತ್ರಿಕೆ ಹೊರಡಿಸಬೇಕು ಎಂಬ ಬಯಕೆ. ತನ್ನ ಪರಿಚಿತ ಗೆಳೆಯರೊಡನೆ ನೆರವು ಯಾಚಿಸಿದರೆ ಯಾರೂ ನೆರವಾಗಲು ಸಿದ್ಧರಾಗಲಿಲ್ಲ. ನಿರಾಶನಾಗಬೇಕಾಯಿತು.

ಆಗ ಆತನ ತಾಯಿ ನೆರವಿಗೆ ಬಂದಳು. ಒಂದು ಸಲಹೆ ಮುಂದಿಟ್ಟಳು- 'ಮಗನೇ, ನಾನು ಬಟ್ಟೆ ಹೊಲಿಗೆಯಿಂದ ಸಂಪಾದಿಸಿದ ಹಣದಿಂದ ಖರೀದಿಸಿದ ಫರ್ನಿಚರನ್ನು ಅಡವಿಟ್ಟರೆ ಬಂದ ಹಣದಿಂದ ನಿನ್ನ ಪತ್ರಿಕೆ ಆರಂಭಿಸಬಹುದು'. ತಾಯಿಯ ಸಲಹೆಯಂತೆ ಫರ್ನಿಚರ್‌ ಅಡವಿಟ್ಟಾಗ 500 ಡಾಲರ್‌ ಮೊತ್ತ ಸಂಗ್ರಹವಾಯಿತು.

ಹೊಸಪತ್ರಿಕೆ 'ನ್ಯೂ ಡೈಜೆಸ್ಟ್‌' ಬರಲಿದೆ. ನೀವು ಚಂದಾದಾರರಾಗಿರಿ ಎಂದು ಇಪ್ಪತ್ತು ಸಾವಿರ ಜನರಿಗೆ ಮುದ್ರಿತ ಪತ್ರಗಳನ್ನು ಅಂಚೆಯ ಮೂಲಕ ಕಳಿಸಲಾಯಿತು. ಮೂರು ಸಾವಿರ ಜನರು ಚಂದಾದಾರರಾದರು. ಅಮೆರಿಕದ ಜನರ ಅಭಿರುಚಿಗೆ ಹಿಡಿಸುವಂತಹ ಲೇಖನಗಳುಳ್ಳ ಪತ್ರಿಕೆ ಸಿದ್ಧವಾಯಿತು. ತನ್ನ ಗೆಳೆಯರೊಡನೆ 'ಇದರ ಮಾರಾಟ ಹೇಗೆ ಮಾಡೋಣ?' ಎಂದು ಪ್ರಶ್ನಿಸಿದಾಗ ಅವರೊಂದು ಉಪಾಯ ಹೇಳಿಕೊಟ್ಟರು. 'ನಗರಗಳಲ್ಲಿರುವ ಪತ್ರಿಕಾ ಮಾರಾಟಗಾರರ ಅಂಗಡಿಗೆ ಹೋಗಿ 'ನ್ಯೂ ಡೈಜೆಸ್ಟ್‌ ಇದೆಯೇ?' ಎಂದು ಖರೀದಿಸುವ ಪ್ರಯತ್ನ ನಡೆಸುತ್ತಾ ಹೋಗು. ಆಗ ಅವರು ಪತ್ರಿಕಾ ವಿತರಕರಾಗಲೇ ಬೇಕಾಗುತ್ತದೆ'.

ಮಿತ್ರರ ಸಲಹೆಯಂತೆ ನಡೆದಾಗ ಅನೇಕ ಮಂದಿ ಪತ್ರಿಕಾ ವಿತರಕರು ಮುಂದೆ ಬಂದರು. ಬಹು ಬೇಗನೆ 'ನ್ಯೂ ಡೈಜೆಸ್ಟ್‌' ಬಹು ಜನರ ಬೇಡಿಕೆಯ ಪತ್ರಿಕೆಯಾಗಿ ರೂಪುಗೊಂಡಿತು. ಜಾನ್ಸನ್‌ ಒಬ್ಬ ಖ್ಯಾತ ಸಫಲ ಪತ್ರಕರ್ತನಾಗಿ ಗೆಲುವು ಸಾಧಿಸಿದ್ದ.

ಇಲ್ಲಿ ಗೆಲುವಿನ ಮೂಲ ರಹಸ್ಯ ಅಡಗಿದೆ. ಬದುಕಿನಲ್ಲಿ ಏನಾದರೂ ಸಾಧನೆ ಮಾಡಬಯಸುವವರು ತೊಂದರೆ, ಅಡ್ಡಿಗಳ ಬಗ್ಗೆ ಚಿಂತಿಸುತ್ತಾ ಗಾಬರಿಯಾಗಬೇಕಾಗಿಲ್ಲ. ಧೈರ್ಯದಿಂದ ಮುನ್ನುಗ್ಗಬೇಕೆಂದರೆ ಬಂಧು-ಬಾಂಧವರು, ಗೆಳೆಯರ ನೆರವು, ಸಲಹೆ ಪಡೆದು ಕಾರ್ಯಾರಂಭ ಮಾಡಿದರೆ ಯಶಸ್ಸು ಲಭಿಸುವುದರಲ್ಲಿ ಸಂದೇಹವಿಲ್ಲ.

ಕೃಪೆ:ಡಾ. ಡಿ. ವೀರೇಂದ್ರ ಹೆಗಡೆ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು