ತಿರುಗುಬಾಣ
ಒಬ್ಬರಿಗೆ ಕೇಡು ಬಯಸಿದರೆ ತಮಗೇ ತಿರುಗುಬಾಣವಾಗುತ್ತದೆ ಎನ್ನುವುದಕ್ಕೆ ಒಂದು ಸಣ್ಣ ಕಥೆ.
ಒಂದು ಊರಿನಲ್ಲಿ ಒಬ್ಬ ಪಂಡಿತನಿದ್ದ. ಊರಿನ ಜನಗಳಿಗೆ ಯಾವುದೇ ಖಾಯಿಲೆ ಬಂದರೂ ಗಿಡಮೂಲಿಕೆಗಳಿಂದ ಔಷಧಿ ತಯಾರಿಸಿ ಗುಳಿಗೆ ಮಾಡಿ ಮನೆಯಲ್ಲಿಯೇ ಎಲ್ಲರಿಗೂ ಕೊಟ್ಟು ನುಂಗಿಸುತ್ತಿದ್ದ. ಇವನು ನೀಡಿದ ಔಷಧಿಗಳಿಂದ ಖಾಯಿಲೆ ಬಹಳ ಬೇಗ ವಾಸಿಯಾಗುತ್ತಿತ್ತು. ಇದರಿಂದ ಊರಿನಲ್ಲಿ ಬಹಳ ಪ್ರಖ್ಯಾತನಾದ ಪಂಡಿತನಾಗಿದ್ದ. ಯಾವುದೇ ಖಾಯಿಲೆ ಬಂದರೂ ಜನಗಳು ಇವನಲ್ಲಿಗೆ ಬಂದು ಔಷದಿ ಪಡೆದು ಹೋಗುತ್ತಿದ್ದುದ್ದರಿಂದ ಪಂಡಿತನ ಆದಾಯ ದಿನೇ ದಿನೇ ಹೆಚ್ಚುತ್ತಾ ಇತ್ತು. ಇದನ್ನು ಕಂಡು ಮನೋಹರ ಮತ್ತು ಅವನ ಗೆಳೆಯರಿಗೆ ಬಹಳ ಹೊಟ್ಟೆ ಉರಿ ಬಂದಿತ್ತು. ಹೇಗಾದರೂ ಮಾಡಿ ಇವನ ಆದಾಯದಲ್ಲಿ ತಮಗೂ ಸ್ವಲ್ಪ ಹಣ ನೀಡಬೇಕೆಂದು ಪೀಡಿಸುತ್ತಿದ್ದರು. ಇದಕ್ಕೆ ಪಂಡಿತ ಸುತರಾಂ ಒಪ್ಪಿರುವುದಿಲ್ಲ. ಇದರಿಂದ ಕೋಪಗೊಂಡು ಇವನ ಆದಾಯಕ್ಕೆ ಕಡಿವಾಣ ಹಾಕಿ ಇವನನ್ನು ಊರಿಂದಲೇ ಓಡಿಸಬೇಕೆಂದು ಮನಸ್ಸು ಮಾಡಿದ್ದರು. ಏನು ಮಾಡುವುದು ಎಂದು ಯೋಚನೆ ಮಾಡುತ್ತಾ ಇದ್ದರು. ಒಂದು ದಿನ ಮನೋಹರನ ಸ್ನೇಹಿತರಲ್ಲಿ ಒಬ್ಬನಿಗೆ ಜ್ವರ ಬಂದಿತ್ತು. ಇವರೂ ಪಂಡಿತನ ಬಳಿಗೆ ಹೋಗಿ ಔಷಧಿ ತೆಗೆದುಕೊಳ್ಳಲು ಹೋದರು. ಅಲ್ಲಿಯೇ ಗುಳಿಗೆ ನುಂಗಿಸಿದಾಗ ಇದ್ದಕ್ಕಿದ್ದಂತೆ ಬಿದ್ದು ಬಿಟ್ಟ. ಇದರಿಂದ ಅಲ್ಲಿದ್ದ ಕೆಲವರಲ್ಲಿ ಆತಂಕ ಮೂಡಿತು. ಪಂಡಿತನೇ ಅಂದು ಎಲ್ಲರಿಗೂ ಸಮಾಧಾನ ಮಾಡಿ ಕಳುಹಿಸಿದ್ದ. ಮಾರನೇ ದಿನ ಇದೇ ರೀತಿ ಬೇರೊಬ್ಬನಿಗೆ ಜ್ವರ ಬಂದು ಅವನೂ ಪಂಡಿತನ ಮನೆಗೆ ಹೋಗಿ ಔಷಧಿ ಪಡೆದು ಅಲ್ಲೇ ಕುಸಿದು ಬಿದ್ದಿದ್ದ. ಇದರಿಂದ ಎಲ್ಲರಿಗೂ ತುಂಬಾ ಗಾಬರಿಯಾಗಿ ಪಂಡಿತನು ನೀಡುವ ಔಷಧಿ ಮೇಲೆ ಅನುಮಾನ ಬಂದು ಕೆಲವರು ಔಷಧಿ ತೆಗೆದುಕೊಳ್ಳಲು ನಿರಾಕರಿಸಿ ಹೊರಟು ಹೋದರು. ಹೀಗೆಯೇ ಮನೋಹರನ ಮೂವರು ಸ್ನೇಹಿತರು ಔಷದಿ ಪಡೆದು ಅಲ್ಲೇ ಕುಸಿದುಬಿದ್ದಿದ್ದರು. ಇದನ್ನು ಕಂಡು ಆ ಊರಿನಲ್ಲಿ ಜನಗಳು ಕ್ರಮೇಣ ಪಂಡಿತನ ಬಳಿ ಔಷಧಿ ಪಡೆಯುವುದನ್ನೇ ನಿಲ್ಲಿಸಿದ್ದರು. ಈ ಊರಿನಲ್ಲಿ ಇದ್ದು ಪ್ರಯೋಜನವಿಲ್ಲವೆಂದು ಬೇರೆ ಊರಿಗೆ ಹೋಗಿ ಅಲ್ಲಿ ಔಷಧಿ ನೀಡಿ ಅಲ್ಲಿಯೂ ಪ್ರಖ್ಯಾತನಾಗಿ ಜೀವನ ನಡೆಸಿಕೊಂಡು ಹೋಗುತ್ತಿದ್ದನು. ಮನೋಹರನ ಊರಿನಲ್ಲಿ ಪಂಡಿತನ ಬಳಿ ಕೆಲಸಕ್ಕಿದ್ದ ಕೆಲವರು ಕೆಲಸವಿಲ್ಲದೆ ಮನೆಯಲ್ಲಿಯೇ ಕುಳಿತು ಕೊಳ್ಳುವಂತಾಯಿತು.
ಪಂಡಿತ ಊರುಬಿಟ್ಟು ಹೋದ ನಂತರ ಪಂಡಿತನ ಕೆಲಸಗಾರರಲ್ಲಿ ಮನೋಹರನ ಗೆಳೆಯರ ತಂದೆಯವರು ಇದ್ದರು...ಇವರಿಗೂ ಕೆಲಸವಿಲ್ಲದೆ ಮನೆಯಲ್ಲಿ ಕುಳಿತು ಕೊಳ್ಳುವಂತಾಯಿತು. ಮೂರು ಹೊತ್ತು ಊಟಕ್ಕೆ ಪರದಾಡುವಂತಾಯಿತು.. ಒಂದು ದಿನ ಮನೋಹರ ತಂದೆಗೆ ಭಯಂಕರ ಜ್ವರ ಬಂದು ಆರೋಗ್ಯದಲ್ಲಿ ಏರುಪೇರು ಶುರು ಆಯಿತು...
ಸ್ಥಳೀಯವಾಗಿ ಔಷಧಿ ಲಭಿಸದ ಕಾರಣ ಪರಸ್ಥಿತಿ ಬಿಗಡಾಯಿಸಿತು...
ಯಾರೋ ಒಬ್ಬರು ಒಬ್ಬ ಪ್ರಸಿದ್ಧ ಪಂಡಿತನ ಕಡೆ ಕರೆದುಕೊಂಡು ಹೋದರೆ ಉಳಿಯಬಹುದು ಎಂದು ಹೇಳಿದರು...
ಅದರಂತೆ ಆ ಊರಿಗೆ ಹೋಗಿ ಪಂಡಿತರನ್ನು ನೋಡಿದರೆ ಅದೇ ಪಂಡಿತರು.. ತಮ್ಮೂರಿನಲ್ಲಿದ್ದವರೇ...
ಮನೋಹರನ ಕಣ್ಣಲ್ಲಿ ದಳ ದಳನೆ ನೀರರಿಯಲು ಶುರುವಾಯಿತು.. ಊರು ಬಿಟ್ಟು ಹೋಗುವಂತೆ ಮಾಡಿದ್ದು ನಾವೇ.. ಎಂದನು.. ನಾನು ನನ್ನ ಸ್ನೇಹಿತರು ನಿಮ್ಮ ಆದಾಯ ನೋಡಿ ಹೊಟ್ಟೆ ಉರಿ ಬಂದು ಏನಾದರೂ ಮಾಡಿ ನಿಮ್ಮ ಆದಾಯಕ್ಕೆ ಕತ್ತರಿ ಹಾಕಿ ಊರಿಂದ ಓಡಿಸಬೇಕೆಂದು ನೀವು ಔಷಧಿ ನೀಡಿದಾಗ ಬೇಕಂತಲೇ ಬಿದ್ದು ಆಡಿದ ನಾಟಕ ಎಂದು ಹೇಳಿ... ಅಳುತ್ತಾ ಪಂಡಿತರ ಕಾಲಿಗೆ ಬಿದ್ದು ಕ್ಷಮೆ ಕೇಳಿದ.. ಪಂಡಿತರ ಚಿಕಿತ್ಸೆ ನಂತರ ಮನೋಹರ ತಂದೆ ಆರಾಮಾಗುತ್ತಾರೆ...
ಮನೋಹರನ ಮನಸ್ಸಿನಲ್ಲಿ ಕಾಡ್ತಾ ಇಂದ ನೋವು ಎಂಥಾ ಕೆಲಸ ಮಾಡಿದೆ ಎಂದು...
ನಾನು ಬೇರೆಯವರಿಗೆ ಕೇಡು ಬಗೆದಿದ್ದು ನನ್ನ ಮನೆಗೆ ತಿರುಗುಬಾಣವಾಗಿ ಕೇಡು ಮಾಡುತ್ತದೆ...
ಸಮಾಜ ಒಂದು ಕನ್ನಡಿ ಇದ್ದಂತೆ ಅದು ನಮ್ಮ ಪ್ರತಿರೂಪವಾಗಿರುತ್ತದೆ.. ಹೀಗಾಗಿ ಒಳ್ಳೆಯದನ್ನು ವಿಚಾರಿಸೋಣ ಒಳ್ಳೆಯ ಮನಸ್ಥಿತಿ ಬೆಳಸಿಕೊಳ್ಳೋಣ, ಒಳ್ಳೆಯ ಕೆಲಸ ಮಾಡೋಣ. ಒಳ್ಳೆಯದು ತಿರುಗುಬಾಣವಾಗಿ ನಮಗೆ ಒಳ್ಳೆಯದನ್ನೇ ಮಾಡುತ್ತದೆ..👍💐💐
---ಶಂಕರಗೌಡ ಬಸಾಪೂರ
No comments:
Post a Comment