Saturday, September 30, 2023

 ಎಲ್ಲವನ್ನೂ ಸುಲಭವಾಗಿ ನೀಡಿದರೆ ಪರಿಶ್ರಮದ ಬೆಲೆ ಗೊತ್ತಾಗುವುದಿಲ್ಲ.. 



 ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳ ಪಾಲಕರು ಈ ಕಥೆಯನ್ನು ಓದಿ 

ಒಂದಾನೊಂದು ಕಾಲದಲ್ಲಿ ಇಬ್ಬರು ನೆರೆಹೊರೆಯಲ್ಲಿ ವಾಸವಾಗಿದ್ದರು.. ಒಬ್ಬರು ನಿವೃತ್ತ ಶಿಕ್ಷಕ ಇನ್ನೋರ್ವ ಜೀವವಿಮಾ ಕಂಪನಿಯ ನೌಕರ..

ಜೀವ ವಿಮಾ ಕಂಪನಿ ನೌಕರನಿಗೆ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಒಲವಿತ್ತ.. ಇವರಿಬ್ಬರೂ ತಮ್ಮ ಮನೆಯ ಹೂದೋಟದಲ್ಲಿ ಸಸಿಗಳನ್ನು ನೆಟ್ಟರು..

ನಿವೃತ್ತ ಶಿಕ್ಷಕ ತನ್ನ ಸಸಿಗಳಿಗೆ ಸ್ವಲ್ಪ ಪ್ರಮಾಣದಲ್ಲಿ ನೀರು ಗೊಬ್ಬರವನ್ನು ನೀಡುತ್ತಿದ್ದ. ಅವುಗಳ ಬಗ್ಗೆ ಹೆಚ್ಚಿನ ಗಮನ ಸಹ ನೀಡುತ್ತಿರಲಿಲ್ಲ..

ಆದರೆ ಜೀವ ವಿಮಾ ನೌಕರ ತನ್ನ ಸಸಿಗಳಿಗೆ ಯಥೇಚ್ಛವಾಗಿ ನೀರು ಗೊಬ್ಬರವನ್ನು ನೀಡಿ ಅವುಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದ..

ನಿವೃತ್ತ ಶಿಕ್ಷಕನ ಸಸ್ಯಗಳು ಸಾಧಾರಣವಾಗಿ, ಪರವಾಗಿಲ್ಲ ಅನ್ನುವ ರೀತಿಯಲ್ಲಿ ಬೆಳೆದಿದ್ದವು.. ಆದರೆ ಜೀವ ವಿಮಾ ನೌಕರನ ಸಸ್ಯಗಳು ಸಮೃದ್ಧವಾಗಿ, ಹಚ್ಚು ಹಸಿರಾಗಿ ಬೇಳೆದಿದ್ದವು.. 

ಒಂದು ರಾತ್ರಿ ಚಂಡಮಾರುತದ ಪರಿಣಾಮವಾಗಿ ಬಾರಿ ಮಳೆ ಮತ್ತು ಬಿರುಗಾಳಿಯ ಉಂಟಾಯಿತು.. ಮರುದಿನ ಬೆಳಿಗ್ಗೆ ಇಬ್ಬರೂ ತಮ್ಮ ತಮ್ಮ ಸಸಿಗಳಿಗೆ ಆದ ಹಾನಿ ನೋಡಲು ತಮ್ಮ ಹೂದೋಟಕ್ಕೆ ಹೋದರು..

ಜೀವ ವಿಮಾ ನೌಕರನ ಸಸ್ಯಗಳು ಬೇರು ಸಮೇತ ಹಾರಿ

ಬಿದ್ದು ಸಂಪೂರ್ಣವಾಗಿ ನಾಶವಾಗಿದ್ದವು.. ಆದರೆ ನಿವೃತ್ತ ಶಿಕ್ಷಕನ ಸಸ್ಯಗಳು ದೃಡವಾಗಿ ಭದ್ರವಾಗಿ ನಿಂತಿದ್ದವು...

ಆಶ್ಚರ್ಯ ಚಕಿತನಾಗಿ ಜೀವ ವಿಮಾ ನೌಕರ ನಿವೃತ್ತ ಶಿಕ್ಷಕನ

ಬಳಿ ಹೋಗಿ ಕೇಳಿದ,

"ನಾವಿಬ್ಬರು ಒಟ್ಟಾಗಿ ಸಸಿಗಳನ್ನು ನೆಟ್ಟಿದ್ದೆವು, ನಿಮಗಿಂತ ಹೆಚ್ಚಾಗಿ ನೀರು ಗೊಬ್ಬರವನ್ನೂ ನಾ ನೀಡಿ ಹೆಚ್ಚಿನ ಗಮನ ಹರಿಸಿದೆ, ಆದರೂ ನನ್ನ ಸಸ್ಯಗಳು ನಾಶವಾದವು, ನಿಮ್ಮ ಸಸ್ಯಗಳು ದೃಢವಾಗಿ ನಿಂತಿವೆ ಯಾಕೆ"...?

ಆಗ ಶಿಕ್ಷಕ ಹೇಳಿದ

"ನೀನು ಸಸಿಗಳಿಗೆ ಹೆಚ್ಚು ನೀರು ಗೊಬ್ಬರವನ್ನು ನೀಡಿದೆ, ಹೆಚ್ಚು ಕಾಳಜಿವಹಿಸಿದೆ ಆ ಕಾರಣ ಆ ಸಸಿಗಳಿಗೆ ಯಾವುದೇ ಜವಾಬ್ದಾರಿ ಸ್ವಪ್ರಯತ್ನದ ಅರಿವಾಗಲಿಲ್ಲ.. ಆದರೆ ನಾನು ಸ್ವಲ್ಪ ಪ್ರಮಾಣದಲ್ಲಿ ನೀರು ಗೊಬ್ಬರವನ್ನು ನೀಡಿದೆ, ಆ ಬೇರುಗಳು ನೀರಿನ ಹುಡುಕಾಟದಲ್ಲಿ ಹೆಚ್ಚಿನ ಆಳಕ್ಕೆ ಮತ್ತು ಅಗಲವಾಗಿ ಹುಡುಕಾಟದಲ್ಲಿ ತಮ್ಮ ಸ್ಥಾನ ಭದ್ರ ಮಾಡಿಕೊಂಡವು. ಅದಕ್ಕಾಗಿ ಅವು ಯಾವುದೆ ಬಿರುಗಾಳಿ, ಮಳೆಗೆ ಬಗ್ಗದೆ ದೃಡವಾಗಿ ನಿಂತಿವು"....!

ಈ ಕಥೆಯ ಮೌಲ್ಯ ಇಷ್ಟೆ ಮಕ್ಕಳು ಸಸಿಗಳಿದ್ದ ಹಾಗೆ.. ಎಲ್ಲವನ್ನೂ ಅವರಿಗೆ ಸುಲಭವಾಗಿ ನೀಡಿದರೆ ಅವರಿಗೆ ಪರಿಶ್ರಮದ ಬೆಲೆ ಗೊತ್ತಾಗುವುದಿಲ್ಲ.. ಅವರು ನಿರ್ವಹಿಸಬೇಕಾದ ಕಾಯಕಕ್ಕೆ ಗೌರವ, ಬೆಲೆ ನೀಡುವುದಿಲ್ಲ.. ಅವರಿಗೆ ಎಲ್ಲವನ್ನು ಸುಲಭವಾಗಿ ನೀಡುವ ಬದಲು ಮಾರ್ಗದರ್ಶನ ಮಾಡೋಣಾ.. ಸಲಹೆ ನೀಡೊಣಾ.. ಅವರಿಗೆ ನಡೆಯುವದನ್ನು ಕಲಿಸೋಣ...!

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು