Sunday, October 15, 2023

 ಯಾಕೆ ತಂದೆ ಹೀಗೆ ?


ಮಗ ಶಾಲೆಗೆ ಹೋಗುತಿದ್ದ , ಅದ್ಯಾಪಕರು ಕೊಟ್ಟ ಹೋಂ ವರ್ಕ್ ಮಾಡಿದ್ದೀಯಾ ಎಂದು ತಂದೆ ಕೇಳಿದರು

ಆಯ್ತು ಎಂದು ಮಗನು ಉತ್ತರಿಸಿದ...

 ಎಲ್ಲಾ ಕಾರ್ಯದಲ್ಲೂ ತಂದೆ ಮಗನನ್ನು ಪ್ರಶ್ನಿಸುತ್ತಿದ್ದರು.

ಗೇಟ್ ತೆರೆದು ಬಿಟ್ಟು ಹೋದರೆ ಗೇಟ್ ಹಾಕಿ ಹೋಗೆಂದೂ ಪೈಪಲ್ಲಿ ನೀರಿನ ಹನಿಗಳು ಬೀಳುತ್ತಿದ್ಧರೆ ನಳ ಸರಿಯಾಗಿ ಬಂದ್ ಮಾಡೆಂದೂ, ಫ್ಯಾನ್ ಸ್ವಿಚ್ ಆನ್ ಮಾಡಿ ಆಫ್ ಮಾಡದೆ ಹೋದರೆ ಸುಮ್ಮನೆ ಯಾಕೆ ಫ್ಯಾನ್ ತಿರಗಿಸ್ತೀಯ, ನೆನೆದ ಬಟ್ಟೆಯನ್ನು ಬೆಡ್ ಶೀಟ್ ಮೇಲೆ ಇಟ್ಟರೆ ನಿನ್ನ ಬಟ್ಟೆಯಿಂದ ಬೆಡ್ ನ್ನೂ ನೆನೆಸ್ತೀಯ ಎಂದೆಲ್ಲ ಹೇಳಿ ಗದರಿಸುತ್ತಿದ್ದರು

ತಂದೆಯ ಮಾತನ್ನು ಕೇಳಿ ಕೇಳಿ ಬೆಳೆದ ನಿಂತ ಮಗನಿಗೆ ತಂದೆಯ ಮಾತು ಕಿರಿಕಿರಿಯಾಗತೊಡಗಿತು..

ಎಲ್ಲ ವಿಷಯದಲ್ಲೂ ನನಗೆ ಕಿರಿಕಿರಿ ಮಾಡುವ ತಂದೆಯಿಂದ ದೂರವಾಗಬೇಕೆಂದು ಚಿಂತಿಸಿದ ಆದರೆ ಯಾವ ಕೆಲಸವಿಲ್ಲದೆ ತಂದೆಯಿಂದ ದೂರವಾದರೆ ಗತಿಯೇನೆಂದು ಚಿಂತಿಸಿದ

ಎಷ್ಟು ಗದರಿಸಿದರೂ ಬೇಕಾದದ್ದನ್ನು ಕೊಡುತ್ತಿದ್ದರು ...  

ಅದೊಂದು ದಿನ ಇಂಟರ್ವ್ಯೂಗೆ ಕರೆ ಬಂತು ಒಳ್ಳೆಯ ಸ್ಯಾಲರಿ ಇರುವ ಜಾಬ್. ಜಾಬ್ ಸಿಕ್ಕಿದರೆ ಜೀವಿಸಲು ಚಿಂತೆಯಿಲ್ಲ

ಆಗಲೇ ತೀರ್ಮಾನಿಸಿದ ನಾನು ಈ ಕೆಲಸಕ್ಕೆ ಸೇರಿ ಒಳ್ಳೆಯ ಸಂಪತ್ತು ಗಳಿಸಿ ಶತ್ರುವಾದ ತಂದೆಯಿಂದ ದೂರವಾಗಬೇಕು.. 

ಇನ್ನು ಮುಂದೆ ನನ್ನ ತಂಟೆಗೆ ಬರಬಾರದು

ಇಂಟರ್ವ್ಯೂಗೆ ಹೋಗುವಾಗಲೂ ನಿನ್ನ ಮಕ್ಕಳಾಟ ಬಿಟ್ಟು ಸರಿಯಾಗಿ ಉತ್ತರಿಸು ಎಂದು ತಂದೆ ಹೇಳಿದರು...  

ಅವರ ಮಾತಿಗೆ ಬೆಲೆ ಕೊಡದೆ ಅವರಿಂದ ದೂರವಾಗಿ ಯಾವ ಕಿರಿಕಿರಿ ಇಲ್ಲದೆ ಜೀವಿಸಬಹುದೆಂದು ನೆನೆದು ಮುಂದೆ ನಡೆದನು ಇಂಟರ್ವ್ಯೂ ಹಾಲಿಗೆ ಹೋಗುವಾಗ ಗೇಟ್ ತೆರೆದಿತ್ತು ಗೇಟ್ ಹಾಕಿ ಹೋಗೆಂದು ಹೇಳುವ ತಂದೆಯ ಮಾತು ನೆನಪಾಗಿ ಗೇಟ್ ಹಾಕಿ ಒಳ ನಡೆದನು ಹಾಲ್ನಲ್ಲಿ ಎಲ್ಲಾ ಕಡೆಯೂ ಫ್ಯಾನ್ ತಿರುಗುತಿತ್ತು ಅಲ್ಲೂ ತಂದೆಯ ಮಾತು ನೆನಪಾಗಿ ಅಗತ್ಯವಿಲ್ಲದೆ ತಿರುಗುವ ಫ್ಯಾನ್ ಆಫ್ ಮಾಡಿದನು

ಸುಮ್ಮನೆ ನೀರಿನ ಹನಿಗಳು ಬೀಳುತ್ತಿದ್ದವು ಅದನ್ನು ನಿಲ್ಲಿಸಿದನು

ಅರ್ದ ಗಂಟೆಯ ಬಳಿಕ ಮೆನೇಜರ್ ಬಂದು ಹೇಳಿದರು "ನಾಳೆಯಿಂದ ನೀವು ಕೆಲಸಕ್ಕೆ ಬನ್ನಿ ನಿಮ್ಮನ್ನು ನಾವು ಆಯ್ಕೆ ಮಾಡಿದ್ದೇವೆ.

ಇಂಟರ್ವ್ಯೂ ನಡೆಯದೇ ಹೇಗೆ ಆಯ್ಕೆ ಮಾಡಿದ್ದೀರಿ

ನೀವು ಗೇಟ್ ಹಾಕಿದ್ದನ್ನೂ ಫ್ಯಾನ್ ಆಫ್ ಮಾಡಿದ್ದನ್ನೂ ನೀರು ನಿಲ್ಲಿಸಿದ್ದನ್ನೂ ನಾವು ಸಿಸಿ ಕ್ಯಾಮೆರಾದಲ್ಲಿ ನೋಡಿದ್ದೇವೆ ನೀವಲ್ಲದೆ ಬೇರೆಯಾರೂ ಅದನ್ನು ಚಿಂತಿಸಲಿಲ್ಲ ನಿಮ್ಮಂತವರು ನಮಗೆ ಬೇಕು

ಮನೆಗೆ ಬಂದಾಗ ತಂದೆಯನ್ನು ಅಪ್ಪಿ ಹಿಡಿದು ಬಿಕ್ಕಿ ಬಿಕ್ಕಿ ಅಳುತ್ತಾ ಹೇಳಿದ ಕ್ಷಮಿಸಿ ಅಪ್ಪಾ ನೀವು ಗದರಿಸಿ ಕಲಿಸಿದ್ದು ನನಗೆ ಈ ಕೆಲಸ ಸಿಗಲು ಕಾರಣವಾಯಿತು.. ನೀವು ನನಗೆ ಸ್ಫೂರ್ತಿ ನಿಮ್ಮಿಂದ ದೂರವಾಗಲಾರೆ.

ಪಾಠ : ಮಾತಾ ಪಿತರ ಮಾತು ಅಮೂಲ್ಯ.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು