ನಮ್ಮ ಪ್ರಯತ್ನ ನಿಯಮಿತವಾಗಿರಲಿ
ಶಾಲಾ ದಿನಗಳಲ್ಲಿ 1500 ಮೀಟರ್ ಓಟದ ಸ್ಪರ್ಧೆ ನಡೆಯುತ್ತಿತ್ತು. ಅದರಲ್ಲಿ ಯಾವಾಗಲೂ ಒಬ್ಬ ವಿದ್ಯಾರ್ಥಿ ಮೊದಲಿಗನಾಗುತ್ತಿದ್ದ. ಆದರೆ ರೇಸ್ ಆರಂಭವಾದ ಪ್ರಾರಂಭದಲ್ಲಿ ಅವನ ಓಟದ ಗತಿಯನ್ನು ನೋಡಿದವರಿಗೆ ಅವನು ಗೆಲ್ಲುತ್ತಾನೆಂಬ ಭರವಸೆಯೇ ಮೂಡುತ್ತಿರಲಿಲ್ಲ. ಯಾಕೆ ಗೊತ್ತೇ?
ಅವನು ಮೊದಲೆರಡು, ಮೂರು ಸುತ್ತುಗಳನ್ನು ಬಹಳ ನಿಧಾನವಾಗಿ, ಎಲ್ಲರಿಗಿಂತ ಕೊನೆಯಲ್ಲಿ ಓಡುತ್ತಿದ್ದ. ಇನ್ನೇನು ಸೋತೇ ಬಿಡುತ್ತಾನೆ ಎಂದು ಎಲ್ಲರೂ ಯೋಚಿಸುತ್ತಿರುವಾಗ, ಮಧ್ಯದಲ್ಲಿ ತನ್ನ ಓಟದ ಗತಿ ಹೆಚ್ಚಿಸಿಕೊಂಡು, ಎಲ್ಲರನ್ನೂ ಹಿಂದಿಕ್ಕಿ ಮೆಡಲ್ ಗೆದ್ದು ಬಿಡುತ್ತಿದ್ದ. ಅವನನ್ನು ಕೇಳಿದರೆ, ಯಾವಾಗಲೂ ನೀನೇ ಗೆಲ್ಲುತ್ತೀಯ. ಆದರೂ ಮೊದಲೆರಡು ಸುತ್ತು ಕುಂಟುತ್ತಾ ಓಡುವವನಂತೆ ನಿಧಾನವಾಗಿ ಓಡುವುದೇಕೆ? ಒಮ್ಮೆಲೆ ಮಿಂಚಿನಂತೆ ನುಗ್ಗಿ ಗೆಲ್ಲಬಹುದಲ್ಲ?’ ಅದಕ್ಕೆ ಅವನಂದ, ‘ದೂರದ ಓಟದ ರೇಸ್‌ಗಳನ್ನು ನಿಧಾನವಾಗಿ ಓಡಿದರೆ ಮಾತ್ರ ಗೆಲ್ಲಲು ಸಾಧ್ಯ. ಇಲ್ಲದಿದ್ದರೆ ಮೊದಲೆರಡು ಸುತ್ತಿನಲ್ಲೇ ಸುಸ್ತಾಗಿ, ಓಟದ ವೇಗ ಕಡಿಮೆಯಾಗುತ್ತದೆ. ನೂರು ಮೀಟರ್‌ನಂಥ ರೇಸ್‌ಗಳನ್ನು ಮಾತ್ರ ಜೋರಾಗಿ ಓಡಲು ಸಾಧ್ಯ. ಉಳಿದವರಿಗೆ ಈ ತಂತ್ರ ಅರ್ಥವಾಗಿಲ್ಲ. ಅದಕ್ಕೇ ಅವರು ಮೊದಲೇ ಜೋರಾಗಿ ಓಡುತ್ತಾರೆ, ಸೋಲುತ್ತಾರೆ’. ಬದಲಾವಣೆ ಕೂಡ 1500 ಮೀಟರ್ ರೇಸಿನಂತೆಯೇ ತಾನೆ?
ದೊಡ್ಡ ಗುರಿಗಳನ್ನು ಹಾಕಿಕೊಂಡಾಗ ಅತಿ ಬೇಗನೆ ಮುಗಿಸಿಬಿಡುತ್ತೇನೆಂದು ಅತಿ ಅವಸರ ಮಾಡಿದರೆ ಆ ಗುರಿ ತಲುಪದೇ ಇರಬಹುದು ಆ ಗುರಿ ತಲುಪುವುದಕ್ಕಾಗಿ ನಿಯಮಿತ ಪ್ರಯತ್ನ ಉತ್ತಮ ಯೋಜನೆಯೊಂದಿಗೆ ಶ್ರಮಿಸಿದಾಗ ಗುರಿ ಸುಲಭವಾಗಿ ತಲುಪುತ್ತೇವೆ. ಸಣ್ಣಪುಟ್ಟ ಗುರಿ ಕಡಿಮೆ ಶ್ರಮಬಯಸುತ್ತದೆ ಆದರೆ ದೊಡ್ಡ ಗುರಿ ಹಾಕಿಕೊಂಡಾಗ ಅದು ಹೆಚ್ಚು ಪರಿಶ್ರಮವನ್ನು ಬಯಸುತ್ತದೆ ಆಗ ದೊಡ್ಡ ಸಾಧನೆ ಸಾಧ್ಯವಾಗುತ್ತದೆ. . ಹಾಗಾಗಿ ನಮ್ಮ ಗುರಿ ದೊಡ್ಡದಾಗಿರಲಿ ಉತ್ತಮ ಯೋಜನೆಯೊಂದಿಗೆ ನಮ್ಮ ಪ್ರಯತ್ನ ನಿಯಮಿತವಾಗಿರಲಿ ಮತ್ತು ಹೆಚ್ಚು ಪರಿಶ್ರಮದಿಂದ ಕೂಡಿರಲಿ..👍💐💐💐
ಕೃಪೆ :ವಿಶ್ವವಾಣಿ.

No comments:
Post a Comment