ಯಾವ ಕೆಲಸವೂ ಅಸಾಧ್ಯವಲ್ಲ.
ಮೌಂಟ್ ಎವರೆಸ್ಟ್ ಶಿಖರವನ್ನು ಮೊದಲು ಹತ್ತಿದ್ದು ಸರ್ ಎಡ್ಮಂಡ್ ಹಿಲರಿ. ಜಗತ್ತಿನಲ್ಲಿಯೇ ಯಾರೂ ಮಾಡದ ಸಾಧನೆಯನ್ನು ಮಾಡುವ ಮುನ್ನ ಆತನೂ ಸೋಲಿನ ರುಚಿಯುಂಡವನೇ. ಆದರೆ ಎದೆಗುಂದುವ ಆಸಾಮಿಯಲ್ಲ. 1952ರಲ್ಲಿ ಶಿಖರವೇರುವ ಆತನ ಕನಸು ಭಗ್ನಗೊಂಡಿತ್ತು. ಆದರೆ ಅವನನ್ನು ಜನ ಗುರುತಿಸಿದ್ದರು. ಅಸಾಧಾರಣ ಸಾಧನೆಗೆ ಕೈ ಹಾಕಿದವನೆಂದು ಹಿಲರಿಯನ್ನು ಸಮಾರಂಭವೊಂದರಲ್ಲಿ ಮಾತನಾಡಲು ಕರೆದಿದ್ದರು. ಆತ ವೇದಿಕೆಯೇರುತ್ತಿದ್ದಂತೆ ಸಭಿಕರು ಚಪ್ಪಾಳೆ ತಟ್ಟಿದರು. ಜಗತ್ತು ತನ್ನನ್ನು ಹೀರೋ ಎಂದು ಭಾವಿಸುತ್ತಿದ್ದರೂ ಆತನ ಮನಸ್ಸಿನಾಳದಲ್ಲೆಲ್ಲೋ ಸೋಲಿನ ಹತಾಶೆ ಮಡುಗಟ್ಟಿತ್ತು. ವೇದಿಕೆಯೇರಿದ ಆತ ಅಲ್ಲಿ ತೂಗು ಹಾಕಿದ್ದ ಹಿಮಾಲಯದ ಚಿತ್ರವನ್ನು ನೋಡಿ ‘ಮೌಂಟ್ ಎವರೆಸ್ಟ್, ನೀನು ನನ್ನನ್ನು ಸೋಲಿಸಿರಬಹುದು. ಆದರೆ ಒಂದು ಮಾತು ನೆನಪಿಡು, ನೀನು ಬೆಳೆಯುವಷ್ಟು ಬೆಳೆದಾಗಿದೆ. ನಾನಿನ್ನೂ ಬೆಳೆಯುತ್ತಿದ್ದೇನೆ, ಮುಂದಿನ ಸಲ ನಿನ್ನನ್ನು ನನ್ನ ಕಾಲ ಕೆಳಗೆ ಮೆಟ್ಟಿ ನಿಲ್ಲುತ್ತೇನೆ!’ ಎಂದು ಶಪಥ ಮಾಡಿದ.
ಹಾಗೆಯೇ 1953ರ ಮೇ 29ರಂದು ಜಗತ್ತಿನ ಅತಿ ಎತ್ತರದ ಶಿಖರ ಆತನ ಕಾಲಿನಡಿಯಲ್ಲಿತ್ತು!
ಸಾಧನೆಯ ಸಂತೋಷ ಮತ್ತು ಸೃಜನಶೀಲ ಪ್ರಯತ್ನದ ರೋಮಾಂಚನದಲ್ಲಿ ಸಂತೋಷ ಅಡಗಿದೆ. ವೈಫಲ್ಯಗಳು, ಪುನರಾವರ್ತಿತ ವೈಫಲ್ಯಗಳು, ಸಾಧನೆಯ ಹಾದಿಯಲ್ಲಿ ಬೆರಳಿನ ಕಂಬಗಳಾಗಿವೆ..
ಆದ್ದರಿಂದ ಅಸಾಧ್ಯವಾದದ್ದು ಯಾವುದು ಇಲ್ಲ ಮಾಡಬೇಕೆನ್ನುವ ದೃಢಸಂಕಲ್ಪ ಮತ್ತು ಪ್ರಯತ್ನ ನಮ್ಮಲ್ಲಿದ್ದರೆ ಯಾವ ಕೆಲಸವೂ ಅಸಾಧ್ಯವಲ್ಲ...
👍💐💐💐💐

No comments:
Post a Comment