ಕಥೆ 306
ದುಃಖ, ನಲಿವು ಕ್ಷಣಿಕ. ಇದು ನಿಸರ್ಗ
ಒಂದು ಗಿಡ, ಅದರೊಳಗೆ ಒಂದು ಪಕ್ಷಿ ಗೂಡು ಕಟ್ಟಿತು, ಮರಿ ಮಾಡಿತು, ಸಂತೋಷವಾಗಿ ಜೀವನ ನಡೆಸಿತು. ಆ ಮರಿಗಳಿಗೆ ತಾಯಿ ಹಕ್ಕಿ ಉಣಿಸುತ್ತಿತ್ತು, ತುತ್ತು ತಿನ್ನಿಸುತ್ತಿತ್ತು. ದೂರ ಹಾರೋದು, ಆಹಾರ ತರೋದು, ಮರಿಗಳಿಗೆ ಹಾಕೋದು, ಮರಿಗಳನ್ನು ನೋಡಿ ಸಂತೋಷ ಪಡೋದು. ಏನು ಸಂತೋಷ.
ಆದರೆ ಈ ಸಂತೋಷ ಹಾಗೇ ಇರಲಿಲ್ಲ. ಅಲ್ಲಿಗೆ ಒಂದು ಮಂಗ ಬಂತು. ಮಂಗ, ಮಂಗವಷ್ಟೇ!
Monkey is monkey.
ಅದು ಮಂಗನೇ. ಮಂಗಚೇಷ್ಟೆ, ಮರದ ರಂಬೆ ಹಿಡ್ಕೊಂಡು ಜೋಕಾಲಿ ಆಡೋಕೆ ಶುರು ಮಾಡ್ತು. ತಾಯಿ ಹಕ್ಕಿ ನೋಡ್ತು, ಮಂಗನ ಮೇಲೆ ಎರಗಿತು. ಆದರೆ ಮಂಗನಿಗೆ ಚೇಷ್ಟೆ. ಮಂಗನ ಚೇಷ್ಟೆಯಿಂದ ಗೂಡಿನೊಳಗೆ ಇರಲಿ ಮರಿಗಳು ಕೆಳಗೆ ಕಲ್ಲಿನ ಬಂಡೆ ಮೇಲೆ ತಪ್ ಅಂಥ ಬಿದ್ದವು, ಸತ್ತವು. ಮಂಗ ಹೋಯ್ತು. ಆದರೆ ತಾಯಿ ಹಕ್ಕಿಗೆ ದುಃಖ ಆಯಿತು. ಮರಿಗಳನ್ನು ನೋಡಿ ಏನು ಸಂತೋಷ ಪಡಿತ್ತಿತ್ತು.ಈಗ ಅವೇ ಮರಿಗಳನ್ನು ನೋಡಿ ದುಃಖ ಪಟ್ಟಿತು. ಆಗ ಅಲ್ಲಿಗೆ ಒಬ್ಬ ಸಾಧು ಬಂದ, ಹಕ್ಕಿ ನೋಡಿದ, ಹಕ್ಕಿ ಮರದ ಮೇಲೆ ಕೂತಿತ್ತು. ಮನದಾಗ ದುಃಖ ತುಂಬಿತ್ತು. ದೂರದಲ್ಲಿ ಇನ್ನೊಂದು ಹಕ್ಕಿ ಹಾಡೋಕೆ ಶುರು ಮಾಡ್ತು. ಅದನ್ನು ಕೇಳಿಸಿಕೊಂಡ ತಾಯಿ ಹಕ್ಕಿ ತಾನೂ ಹಾಡೋದಿಕ್ಕೆ ಶುರು ಮಾಡ್ತು.
ಸಾಧುಗೆ ಆಶ್ಚರ್ಯ ಅಯ್ತು. ಈಗ ತಾನೇ ದುಃಖ ಪಡುತ್ತಿದ್ದ ಹಕ್ಕಿ ಹಾಡೋಕೆ ಶುರು ಮಾಡ್ತು. ಸಾಧು ಪಕ್ಷಿಯನ್ನು ಕೇಳಿದ: "ಈಗ ತಾನೇ ನಿನ್ನ ಮರಿಗಳು ಸತ್ತಿವೆ, ದುಃಖ ಪಡುತ್ತಿದ್ದೆ. ಆಗಲೇ ಹಾಡೋದಿಕ್ಕೆ ಶುರು ಮಾಡಿದೆಯಲ್ಲ!"
"ಹೌದು ಸಾಧುಗಳೇ,ನಮ್ಮ ಜೀವನವೇ ಹೀಗೆ, ಬದುಕಬೇಕಲ್ಲ. ದುಃಖ ಆಯಿತು ನಿಜ, ಅದು ಕ್ಷಣಿಕ. ಸುಖಾನೂ ಕ್ಷಣಿಕ. ಬದುಕು ಅಂದರೆ ಹಿಂಗಾs. ಮನುಷ್ಯರು ನೀವು ನಮ್ಮಂಗಲ್ಲ. ದುಃಖಾನ ಮರೆಯುವುದಿಲ್ಲ, ಹಾಗೇ ಇಟ್ಟುಕೊಂಡು ಸುಖವನ್ನು ಹಾಳು ಮಾಡಿಕೊಳ್ಳುತ್ತೀರಿ".
ದುಃಖ, ನಲಿವು ಕ್ಷಣಿಕ. ಇದು ನಿಸರ್ಗ. ಇದೇ ಬದುಕು. ದುಃಖದ ಮಧ್ಯೆ ಶಾಂತಿಯನ್ನು ಕಾಣಬೇಕು.
ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು
No comments:
Post a Comment