ಕಥೆ-307
ಹಣ್ಣುಗಳ ಬೆಲೆಯ ಹೊಸ ಪಾಠ!
ಬಜಾರದಲ್ಲಿ ದ್ರಾಕ್ಷಿ ಖರೀದಿಸಲಿಕ್ಕೆ ಹೋಗಿದ್ದೆ, ಒಂದು ಕಿಲೋ ಗೆ ₹80 ಇತ್ತು. ಪಕ್ಕದಲ್ಲಿಯೇ ಇದ್ದ ಇನ್ನೊಬ್ಬ ಮಾರುವಾತನಿಗೆ ಕೇಳಿದರೆ ₹30 ಯಾಕೆ ಈ ಕಡಿಮೆ ದರ? ಏಕೆಂದರೆ ಕಡಿಮೆ ದರದವನ ಬಳಿ ಇದ್ದದ್ದು ಗೊಂಚಲಿನಿಂದ ಉದುರಿದ ದ್ರಾಕ್ಷಿಗಳು. ಇದೇ ಪರಿಸ್ಥಿತಿ ಬಾಳೆ ಹಣ್ಣಿನದೂ ಆಗಿತ್ತು!!! ಎಲ್ಲ ಒಂದೇ ತೆರನಾದ ಅಷ್ಟೇ ರುಚಿಯಾದ ಹಣ್ಣುಗಳು, ಆದರೆ ಬೆಲೆ ಬೇರೆ ಬೇರೆ. ನಾವು ನಮ್ಮ ಪರಿವಾರ, ಬಂಧು, ಬಳಗ, ಗೆಳೆಯರೊಂದಿಗೆ ಹಣ್ಣಿನ ಗೊಂಚಲಿನಂತೆ ಒಂದಾಗಿ ಇದ್ದರೆ ಸಮಾಜದಲ್ಲಿ ಹೆಚ್ಚು ಬೆಲೆ !!! ಇಲ್ಲದಿದ್ದರೆ ಮಾತನಾಡಿಸುವದಿರಲಿ ಹೊರಳಿ ನೋಡುವವರೂ ಇರುವದಿಲ್ಲ.ನೀವೆನಂತಿರಿ ಇದಕ್ಕೆ._*
ಒಗ್ಗಟ್ಟಿನಲ್ಲಿ ಬಲವಿದೆ ಮತ್ತು ಬೆಲೆ ಇದೆ
No comments:
Post a Comment