Friday, February 16, 2024

ಕಥೆ-308

 ಹಣೆಬರಹ ಬದಲಿಸಿದ ಮಾತು

ಅಲಿಬಾಬಾ ಸಂಸ್ಥೆಯ ಜಾಕ್ ಮಾ ಅವರನ್ನು ಒಬ್ಬ ಬಿಜಿನೆಸ್‌ಮನ್ ಭೇಟಿಯಾಗಿ, ‘ನಾನು ನನ್ನ ಉದ್ಯಮದಲ್ಲಿ ಕೈ ಸುಟ್ಟುಕೊಂಡಿದ್ದೇನೆ. ಈ ಬಿಜಿನೆಸ್‌ನ್ನು ಮುಂದುವರಿಸುವ ಆಸೆಯಿಲ್ಲ. ನನಗೆ ನಿಮ್ಮ ಪ್ರೇರಣದಾಯಕವಾದ ಒಂದು ಮಾತು ಬೇಕು’ ಎಂದು ಕೇಳಿಕೊಂಡ.

ಜಾಕ್ ಮಾ ಅವನನ್ನೇ ಒಂದು ಕ್ಷಣ ದಿಟ್ಟಿಸಿದರು. ‘ನೀವು ಇನ್ನೂ ಕೈ ಚೆಲ್ಲಿಲ್ಲ ಅಂದ್ರೆ ನಿಮಗೆ ಇನ್ನೂ ಸಾಕಷ್ಟು ಅವಕಾಶಗಳಿವೆ. ಒಮ್ಮೆ ನೀವು ಕೈ ಚೆಲ್ಲಿದಿರಿ ಅಂದ್ರೆ ಅಲ್ಲಿಗೆ ಮುಗಿಯಿತು, ಎಲ್ಲ ದಾರಿಗಳೂ ಬಂದ್ ಆದಂತೆ. ನೀವು ನಿಮ್ಮ ಬಿಜಿನೆಸ್‌ನ್ನು ಪೂರ್ತಿ ಬಂದ್ ಮಾಡಿಲ್ಲ ಎಂದಾದರೆ, ಅದನ್ನು ಮುಂದುವರಿಸುವ ಅವಕಾಶ ತೆರೆದಿದೆ ಎಂದರ್ಥ. ಆ ಅವಕಾಶ ತೆರೆದಿದ್ದರೆ, ಏನು ಬೇಕಾದರೂ ಮಾಡಬಹುದು’ ಎಂದರು.

ಆ ಬಿಜಿನೆಸ್‌ಮನ್‌ಗೆ ಕೋಲ್ಮಿಂಚು ಸುಳಿದಂತಾಯಿತು. ತನ್ನ ಫ್ಯಾಕ್ಟರಿಗೆ ಬಂದು ನೌಕರರನ್ನುದ್ದೇಶಿಸಿ, ಜಾಕ್ ಮಾ ಹೇಳಿದ ಮಾತುಗಳನ್ನು ಹೇಳಿದ. ನೌಕರರಿಗೂ ಅದೇನೋ ಹೊಸ ಹುಮ್ಮಸ್ಸು ಬಂದಂತಾಯಿತು. ಎಲ್ಲರೂ ಹೊಸ ಭರವಸೆಯಿಂದ ಕೆಲಸ ಮಾಡಲು ನಿರ್ಧರಿಸಿದರು. ಮೂರು ವರ್ಷಗಳ ಅವಧಿಯಲ್ಲಿ ಆ ಕಂಪನಿಯ ಹಣೆಬರಹವೇ ಬದಲಾಗಿ ಹೋಯಿತು. ‘’If you don’t give up, you still have a chance. Giving up is the greatest failure’ ಎಂಬ ಜಾಕ್ ಮಾ ಮಾತು ಅವನ ಭವಿಷ್ಯವನ್ನೇ ಬದಲಿಸಿತು.

ಅದಾದ ಬಳಿಕ ಆ ಬಿಜಿನೆಸ್‌ಮನ್ ಜಾಕ್‌ಮಾನನ್ನು ಭೇಟಿ ಮಾಡಿ, ತನ್ನ ಬದುಕಿನ ದೆಸೆಯನ್ನು ಬದಲಿಸುವ ಮಾತುಗಳನ್ನು ಹೇಳಿ ಹೊಸ ಭರವಸೆ ಮೂಡಿಸಿದ್ದಕ್ಕೆ ಕೃತಜ್ಞತೆಗಳನ್ನು ಸೂಚಿಸಿದ. ತನ್ನ ಮಾತುಗಳಿಂದ ಯಾರಿಗೋ ಹೊಸ ಪ್ರೇರಣೆ ಸಿಕ್ಕಿದ್ದಕ್ಕೆ ಜಾಕ್ ಮಾ ಅವರಿಗೂ ಸಮಾಧಾನವಾಯಿತು. ಆತ ಅಲ್ಲಿಂದ ಹೊರಡುವ ಮುನ್ನ ಸಂಕೋಚದಿಂದಲೇ ಕೇಳಿದ- ‘ನಿಮ್ಮಿಂದ ನಾನು ಮತ್ತೊಂದು ಪ್ರೇರಣಾದಾಯಕ ಮಾತುಗಳನ್ನು ಕೇಳಿ ಹೊರಡುತ್ತೇನೆ’. ಆಗ ಜಾಕ್ ಮಾ ಹೇಳಿದರು-‘ಮುಂದಿನ ಹತ್ತು ವರ್ಷಗಳ ನಂತರ ಏನು ಮಾಡಬೇಕು ಎಂಬುದನ್ನು ಈಗಲೇ ಪ್ಲಾನ್ ಮಾಡಿ. ಇಂದಿನ ನಮ್ಮ ಯಶಸ್ಸಿಗೆ ನಾವು ಹತ್ತು ವರ್ಷಗಳ ಹಿಂದೆ ಕಂಡ ಕನಸು ಕಾರಣ. ಯಾವತ್ತೂ ನಾಳೆಯಲ್ಲಿ ನಿಂತು ಯೋಚಿಸಬೇಕು.              

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು