Friday, February 23, 2024

 ಕಥೆ-315

ಅವಕಾಶಕ್ಕೆ ನಮ್ಮನ್ನು ನಾವು ತೆರೆದುಕೊಳ್ಳಬೇಕು.      

ಹದ್ದುಗಳಿಗೆ ಒಂದು ವಿಶೇಷ ಶಕ್ತಿಯಿದೆಯಂತೆ. ಜೋರು ಮಳೆ, ಬಿರುಗಾಳಿ ಬೀಸುವ ಮುನ್ನ ಹದ್ದುಗಳಿಗೆ ಮುನ್ಸೂಚನೆ ಸಿಗುತ್ತದೆ. ಅದು ಪ್ರಾಣಿ-ಪಕ್ಷಿಗಳಿಗೆ ಪ್ರಕೃತಿ ನೀಡಿರುವ ವರದಾನ. ಉಳಿದೆಲ್ಲ ಸಣ್ಣಪುಟ್ಟ ಪಕ್ಷಿಗಳು ಆಗ ಹೆದರಿ ಗೂಡು ಸೇರಿಬಿಡುತ್ತವೆ. ಆದರೆ ಹದ್ದು ಎತ್ತರದ ಪ್ರದೇಶಕ್ಕೆ ಹಾರಿ ಹೋಗಿ ಕುಳಿತುಕೊಳ್ಳುತ್ತದೆ. ಗಾಳಿ ಬೀಸಿದಾಗ ಅದರ ಜತೆಗೇ ಹಾರಿ, ಆ ರಭಸದ ಸಹಾಯದಿಂದ ಮೋಡದ ಮಟ್ಟಕ್ಕಿಂತ ಎತ್ತರವಾಗಿ ಹಾರುತ್ತದಂತೆ. ಹದ್ದು ಹಾಗೆ ಹಾರುವುದು ಬಿರುಗಾಳಿಗೆ ಹೆದರಿಯಲ್ಲ. ಬದಲಿಗೆ ಗಾಳಿಯ ಸಹಾಯದಿಂದಲೇ ಅದು ಅಪಾಯದ ಮಟ್ಟಕ್ಕಿಂತ ಎತ್ತರಕ್ಕೆ ಹಾರುತ್ತದೆ. ಹಾಗೆಯೇ ಬದುಕಿನಲ್ಲಿ ಕಷ್ಟಗಳೆಂಬ ಬಿರುಗಾಳಿ ಬೀಸಿದಾಗ ಹೆದರಿ ಓಡಿ ಹೋಗುವ ಬದಲು, ಅದರಿಂದ ಪಾಠ ಕಲಿಯುವ, ಗಟ್ಟಿಯಾಗುವ ಅವಕಾಶಕ್ಕೆ ನಮ್ಮನ್ನು ನಾವು ತೆರೆದುಕೊಳ್ಳಬೇಕು.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು