Sunday, March 10, 2024

 ಕಥೆ-331

ದೋಟಿಹಾಳ ಸುಖಮನಿ ಜಾತ್ರೆ ಮಹದಾನಂದ...

ಈ ನಾಡಿನಲ್ಲಿ ಸಂತರು ಉದಯಿಸುವ ಮೂಲಕ ಬಾಳು ಬೆಳಗಿ ತಮ್ಮದೇ ಆದ ಕೀರ್ತಿ ಬಿಟ್ಟು ಹೋಗಿದ್ದಾರೆ. ಅಂತವರಲ್ಲಿ ದೋಟಿಹಾಳ ಅವಧೂತ ಶುಖಮುನಿ ಸ್ವಾಮಿಗಳು ಓರ್ವರು. 

18ನೇ ಶತಮಾನದಿಂದಲೇ ಅವಧೂತ ಶುಖಮುನಿ ಸ್ವಾಮೀಜಿ ಅನೇಕ ಪವಾಡಗಳನ್ನು ಮಾಡುವ ಮೂಲಕ ಮನೆ ಮಾತಾಗಿದ್ದರು. ಭಕ್ತರು 18-19ನೇ ಶತಮಾನ ದಲ್ಲಿಯೇ ಅವಧೂತ ಶುಖಮುನಿ ಸ್ವಾಮೀಜಿ ಜೀವಂತ ಇರುವಾಗಲೇ ಜಾತ್ರೆ ಹಾಗೂ ಪಲ್ಲಕ್ಕಿ ಉತ್ಸವ ಆರಂಭಿಸಿದ್ದರು. ಅವರು ಲಿಂಗೈಕ್ಯರಾದ ನಂತರವೂ ಅವರ ಇಚ್ಛೆಯಂತೆ ಗ್ರಾಮಸ್ಥರು ಶಿವರಾತ್ರಿ ಅಮಾವಾಸ್ಯೆಯಂದು ಜಾತ್ರೆಯನ್ನು ಮಾಡಲಾಗುತ್ತಿದ್ದು, ಸಹಸ್ರಾರು ಭಕ್ತರ ಜಯ ಘೋಷಗಳ ನಡುವೆ ಪ್ರತಿ ವರ್ಷ ಶಿವರಾತ್ರಿ ಅಮಾವಾಸ್ಯೆಯ ದಿನ ಮಹಾರಥೋತ್ಸವ ನಡೆಯಲಿದೆ.

ಭಾವೈಕ್ಯತೆಯ ಮಠ: ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಅವಧೂತ ಶುಖಮುನಿ ಸ್ವಾಮೀಜಿ ದೇವಸ್ಥಾನವು ಕೇವಲ ಒಂದೇ ಧರ್ಮ, ಜಾತಿಗೆ ಸೀಮಿತವಾಗಿಲ್ಲ. ಇಲ್ಲಿಗೆ ಸರ್ವ ಧರ್ಮದವರು ಬಂದು ಸ್ವಾಮೀಜಿಯನ್ನು ಆರಾಧಿಸುತ್ತಾರೆ. ಪೂಜಿಸುತ್ತಾರೆ. 'ಈ ಮಠಕ್ಕೆ ಯಾವುದೇ ಪೀಠಾಧಿಪತಿ ಸಹ ಇಲ್ಲ. ಇದು ಕೊಪ್ಪಳ ಜಿಲ್ಲೆಯಲ್ಲಿಯೇ ಭಾವೈಕ್ಯತೆ ಸಾರುವ ಪೀಠಾಧಿಪತಿ ಇಲ್ಲದ ಮಠ ಎಂಬ ಖ್ಯಾತಿಗೆ ಹೆಸರಾಗಿದೆ.

ಶ್ರೀಗಳ ಇತಿಹಾಸ: ಈ ಹಿಂದೆ ದೋಟಿಹಾಳದ ದಕ್ಷಿಣ ಭಾಗಕ್ಕೆ ದಟ್ಟವಾಗಿ ಬೆಳೆದಿದ್ದ ಡಬಗಳ್ಳಿ ಗಿಡದ ಮಧ್ಯದಲ್ಲಿ ಪುರಾತನ ಬಯಲು ಬಸವೇಶ್ವರ ದೇವಸ್ಥಾನವಿತ್ತು. ಒಂದು ದಿನ ಕುರಿಮರಿಯೊಂದು ತಪ್ಪಿಸಿಕೊಂಡು ಅಲ್ಲಿಗೆ ಹೋಯಿತು. ಕುರಿಗಾಹಿ ಕುರಿ ಹುಡುಕುತ್ತಾ ಬಸವೇಶ್ವರ ದೇವಾಲಯದ ಹತ್ತಿರ ಹೋಗಿ ನೋಡಿದಾಗ ಕಲ್ಲು ಬಂಡೆಯ ಮೇಲೆ ದಿಗಂಬರ ಸ್ವರೂಪದಲ್ಲಿ ನೆಲದಿಂದ ಸುಮಾರು ನಾಲ್ಕು ಅಡಿ ಎತ್ತರದಲ್ಲಿ ಯೋಗಾಸನದಲ್ಲಿದ್ದ ಯೋಗಿಯನ್ನು ಕಂಡು ಕುರಿಗಾಹಿ ಆಶ್ಚರ್ಯಚಕಿತನಾಗಿ ಗ್ರಾಮಸ್ಥರಿಗೆ ತಿಳಿಸುತ್ತಾನೆ.

ಗ್ರಾಮದ ಪೊಲೀಸ್‌ಗೌಡ ರಾಜೇಗೌಡರು ಗ್ರಾಮಸ್ಥರೊಡನೆ ದೇವಾಲಯದ ಹತ್ತಿರ ಬಂದು ನೋಡಿ ಆತನ ಕುರಿತು ವಿಚಾರಣೆ ನಡೆಸಿದಾಗ ಅವರಿಂದ ಬಂದ ಉತ್ತರ ಕೇವಲ ಮೌನ. ಇದನ್ನು ಅರ್ಥ ಮಾಡಿಕೊಳ್ಳದೇ ರಾಜೇಗೌಡರು ಈತ ಮಹಾಕಳ್ಳ ಇರಬಹುದೆಂದು ಭಾವಿಸಿ ಚಾವಡಿ” ಕಂಬಕ್ಕೆ ಕಟ್ಟಿ ಮುಳ್ಳು ಕಟ್ಟಿಗೆಗಳಿಂದ ಹೊಡೆಸುತ್ತಾರೆ. ಆದರೆ ಕಟ್ಟಿಗೆಗಳು ಮುರಿದವೇ ಹೊರತು, ಯೋಗಿ ಮುಖದಲ್ಲಿ ದುಃಖದ ಚಿಹ್ನೆ, ನೋವು ಕಾಣಲಿಲ್ಲ. ಶಾಂತಚಿತ್ತನಾಗಿದ್ದ.

ಶುಖಮುನಿ ನಾಮಕರಣ: ಅದೇ ಸಮಯಕ್ಕೆ ಸಿದ್ದಲಿಂಗ ಮಹಾಸಾಧುಗಳು ಚಾವಡಿಗೆ ಬಂದು ಹೊಡೆಯುವುದನ್ನು ನಿಲ್ಲಿಸಲು ತಿಳಿಸಿದರು. ನಂತರ ಇವರಲ್ಲಿನ ಲಕ್ಷಣಗಳನ್ನು ಕಂಡು ಈತ ಕಳ್ಳನಲ್ಲ, ಮಹಾಯೋಗಿ ಪವಾಡ ಪುರುಷರು. ಶುಖಮುನಿ ಎಂದು ಪುನರ್ ನಾಮಕರಣ ಮಾಡಿದರು.


ಸೇವೆ ಮಾಡಿದ ಚೌರಿ ಮಲ್ಲಮ್ಮ: ಶುಖಮುನಿ ಸ್ವಾಮಿಗಳನ್ನು ಮಲ್ಲಮ್ಮ ಚೌರಿ ಹೆಸರಿನ ಅಜ್ಜಿ ತಮ್ಮ ಮನೆಗೆ ಕರೆದುಕೊಂಡು ಬಂದು ಮಂಚದ ಮೇಲೆ ಕುಳಿತುಕೊಳ್ಳಲು ತಿಳಿಸಿಸ್ವಾಮಿಗಳ ದೇಹಕ್ಕೆ ಚುಚ್ಚಿರುವ ಮುಳ್ಳುಗಳನ್ನು ಒಂದೊಂದು ತೆಗೆಯುತ್ತಿದ್ದಳು. ಬಹಳ ಹೊತ್ತಿನ ನಂತರ ಶುಖಮುನಿಗಳು ನಿದ್ರೆಗೆ ಜಾರಿದರು. ಇಂದಿಗೂ ಅವರ ಮನೆತನವು ಶುಖಮುನಿ ದೇವರಿಗೆ ನಡೆದುಕೊಳ್ಳುತ್ತಿದ್ದಾರೆ.


 ಹಲವು ಪವಾಡಗಳನ್ನು ಮಾಡುತ್ತಾ ಕೆಲ ದಿನಗಳು ಉರುಳಿದವು 1938ರ ನವೆಂಬರ್26 ರಂದು (ಭಾದ್ರಪದ ಶುದ್ಧ ಪ್ರತಿಪದ ಶುಕ್ರವಾರ) ಬೆಳಿಗ್ಗೆ 8 ಗಂಟೆಗೆ ಶುಖಮುನಿ ತಾತನವರು ಶ್ರೀ

ರುದ್ರಮುನಿ ಸ್ವಾಮೀಜಿ ಮಠದ ಹತ್ತಿರ ಲಿಂಗೈಕ್ಯರಾದರು. ಗ್ರಾಮದ ಭಕ್ತರು ಒಗ್ಗೂಡಿ ಸಾಧು-ಸಂತರ ಮಠದಲ್ಲಿ ಧಾರ್ಮಿಕ ವಿಧಿವಿಧಾನಗಳಿಂದ ಗದ್ದುಗೆ ಪ್ರತಿಷ್ಠಾಪಿಸಿದರು. ಇಂತಹ ಮಹಿಮಾ ಪುರುಷನ ಜಾತ್ರೆ ಮಾಡಬೇಕು ಎಂದು ಅರಿತ ಜನರು ಭಜನೆ ಆರಂಭಿಸಿ ಶಿವರಾತ್ರಿ ಅಮಾವಾಸ್ಯೆ ದಿನ ಜಾತ್ರೆ ಮಾಡಲು ನಿರ್ಧರಿಸಿದರು.


ಪಲ್ಲಕ್ಕಿ ಉತ್ಸವ: ಅವಧೂತ ಶುಖಮುನಿ ಸ್ವಾಮೀಜಿ ಸುತ್ತಮುತ್ತಲಿನ ಗ್ರಾಮಗಳಾದ ಹೆಸರೂರು ಕಲಕೇರಿ, ಕೇಸೂರು, ಜಾಲಿಹಾಳ, ರಾವಣಕಿ, ನಡಲಕೊಪ್ಪ ಸೇರಿದಂತೆ ಗ್ರಾಮಗಳಿಗೆ ತೆರಳುವುದು. ಜಾತ್ರೆಯ ಮುಂಚಿತವಾಗಿ ಸುಮಾರು ಎಂಟು ದಿನಗಳ. ಪಲ್ಲಕ್ಕಿ ಉತ್ಸವ ಆಚರಿಸಲಾಗುತ್ತಿದೆ. ಈ ಆಚರಣೆ ವೇಳೆ ಓಂ ನಮಃ ಶಿವಾಯ ಎಂಬ ಮಂತ್ರ ಪಠಣ ಮಾಡುತ್ತಾರೆ. ಪಲ್ಲಕ್ಕಿಯು ಹಳ್ಳಿಗಳಿಗೆ ಸಂಚರಿಸುತ್ತದೆ. ಭಜನೆ ಹಾಗೂ ಅನ್ನದಾಸೋಹ: ರಥೋತ್ಸವಕ್ಕೆ ಎಂಟು ದಿನಗಳ ಮುಂಚಿತವಾಗಿ ಮಠದಲ್ಲಿ ಸಪ್ತಭಜನೆಯನ್ನು ಹಾಗೂ ಅನ್ನದಾಸೋಹವನ್ನು ಆರಂಭಿಸಲಾಗುತ್ತದೆ. ಭಜನೆಯಲ್ಲಿ ದೋಟಿಹಾಳ, ಕೇಸೂರು ಸುತ್ತಮುತ್ತಲಿನ 25ಕ್ಕೂ ಹೆಚ್ಚು ಗ್ರಾಮಸ್ಥರು, ಮಹಿಳೆಯರು, ಯುವಕರು ಭಾಗವಹಿಸುತ್ತಾರೆ. ಇದು ದಿನದ 24 ತಾಸುಗಳ ಕಾಲ ನಡೆಯುತ್ತದೆ. ಸಪ್ತಭಜನೆ ಮುಕ್ತಾಯದ ನಂತರ ಸಹಸ್ರಾರು ಭಕ್ತರ ಮಧ್ಯೆ. ಮಹಾರಥೋತ್ಸವ ನಡೆಯುತ್ತದೆ. ಲಕ್ಷಾಂತರ ಭಕ್ತರು ಉತ್ತತ್ತಿ, ಬಾಳೆಹಣ್ಣನ್ನು ಸಮರ್ಪಣೆ ಮಾಡುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ

ದೇವರ ಜಾತ್ರೆಗಳು, ಗ್ರಾಮಗಳ ಒಂದು ಪ್ರಮುಖ ಪರಂಪರೆ. ಸಾಮಾನ್ಯವಾಗಿ ಒಂದು ಸಾರ್ವಜನಿಕ ಉದ್ದೇಶಕ್ಕಾಗಿ ಒಂದುಗೂಡುವಿಕೆಯನ್ನು ಜಾತ್ರೆ ಎಂದು ಪರಿಗಣಿಸಲಾಗುತ್ತದೆ. ಪ್ರತಿ ವರ್ಷಗಳಿಗೊಮ್ಮೆ ಸರ್ವತ್ರ ಸುಭಿಕ್ಷಾರ್ಥವಾಗಿ ಧಾರ್ಮಿಕ ಪರಂಪರೆಯಂತೆ ಪೂಜಾ ಉತ್ಸವಗಳಿಂದೊಡಗೂಡಿದ ದೋಟಿಹಾಳ ಶ್ರೀ ಸುಖಮನಿ ಸ್ವಾಮಿ ಜಾತ್ರೆಯನ್ನು ಅತೀ ವಿಜ್ರಂಭಣೆಯಿಂದ ನಡೆಸಲಾಗುತ್ತದೆ.


ನನ್ನೂರು ನನಗೆ ಚೆಂದ

ವಾಲಿಬಾಲ್ ಸ್ಪರ್ಧೆ ಅಂದ

ಸ್ನೇಹ ಒಂದುಗೂಡುವಿಕೆ ಬಂಧ

ಪಲ್ಲಕ್ಕಿ ಭಜನೆ ಆನಂದ

ಸುಖಮನಿ ಜಾತ್ರೆ ಮಹದಾನಂದ...

By : Shankargouda Basapur

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು