ಕಥೆ-343
ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ....
& ವಾಟರ್ ಮನ್ ಗಳಿಗೆ ಒಂದು ದೊಡ್ಡ ಸಲಾಂ🤝🙏💐💐💐💐💐
1999-2000ನೇ ಇಸವಿ. ರಾಜಸ್ಥಾನದ ಮಾರ್ವರ್ ಜಿಲ್ಲೆಯ ಹಳ್ಳಿಗಳಲ್ಲಿ ಕುಡಿಯಲು ಹನಿ ನೀರು ಇಲ್ಲದಂತೆ ಬರ ತಾಂಡವವಾಡಿತ್ತು. ಈಗ ಅಲ್ಲಿನ 518ಕ್ಕೂ ಅಧಿಕ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಬಹುಪಾಲು ನೀಗಿದೆ. ಇದಕ್ಕೆಲ್ಲ ಕಾರಣರು ಅಮಲಾ ರುಯಿಯಾ ಎಂಬ ‘ವಾಟರ್ ಮದರ್’. ಮಳೆನೀರು ಕೊಯ್ಲು ಮೂಲಕ ಸುಮಾರು 351 ಚೆಕ್ ಡ್ಯಾಂ ನಿರ್ಮಿಸಿರುವ ಅಮಲಾ ನೇತೃತ್ವದ ತಂಡವು ರಾಜಸ್ಥಾನದ ನೂರಾರು ಹಳ್ಳಿಗಳ ಬರ ಸಮಸ್ಯೆ ದೂರವಾಗಿಸಿದೆ. ಆ ಬಳಿಕ ಸುಮಾರು 2 ಲಕ್ಷ ಜನರಿಗೆ ನೀರು ಸಿಗಲಾರಂಭಿಸಿದ್ದು ದೊಡ್ಡ ಸಾಧನೆ..
ಅಮೃತಕ್ಕೆ ಸಮಾನವಾದ ಈ ನೀರು ದಿನನಿತ್ಯದ ಬದುಕಿಗೆ ಅತ್ಯಗತ್ಯ. ಬೇಸಿಗೆ ಆರಂಭವಾಗುತ್ತಿದ್ದಂತೆ ಎಲ್ಲೆಡೆ ನೀರಿನ ಹಾಹಾಕಾರವು ಶುರುವಾಗುತ್ತದೆ. ಈ ಸಮಯದಲ್ಲಿ ಕುಡಿಯಲು ನೀರಿಲ್ಲದೆ ಒದ್ದಾಡುವವರು ಇದ್ದಾರೆ. ಈ ನೀರಿನ ಮಹತ್ವವನ್ನು ಸಾರುವ ಸಲುವಾಗಿ ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನು ಆಚರಿಸಲಾಗುತ್ತದೆ.
ಭೂಮಿಯ ಮೇಲೆ ಶೇಕಡ 71 ರಷ್ಟು ಭಾಗ ನೀರಿದೆ, ಅದರಲ್ಲಿ ಶೇಕಡ 97 ರಷ್ಟು ನೀರು ಸಮುದ್ರದ ನೀರು ಅದು ಕುಡಿಯಲು ಮತ್ತು ನಿತ್ಯ ಚಟುವಟಿಕೆಗಳಿಗೆ ಯೋಗ್ಯವಲ್ಲದ ನೀರು.. ಉಳಿದ 3% ಮಾತ್ರ ಸಿಹಿನೀರು.. ಇದರಲ್ಲಿ 0.7% ಮಾತ್ರ ಅಂತರ್ಜಲ ನೀರಾಗಿದೆ..
ಮಾನವನ ಸ್ವಾರ್ಥದಿಂದ ಅದೆಷ್ಟೋ ಸಿಹಿ ಜಲ ಮೂಲಗಳು ಅಳಿವಿನಂಚಿನಲ್ಲಿದೆ. ಕೆಲವು ಅಳಿದು ಹೋಗಿವೆ. ಕಾಡಿನ ನಾಶದಿಂದ ಸರಿಯಾದ ಸಮಯಕ್ಕೆ ಮಳೆ ಬಾರದೆ ಹಳ್ಳ ಕೊಳ್ಳ ಸೇರಿದಂತೆ ನೀರಿನ ಮೂಲಗಳು ಬತ್ತಿ ಹೋಗಿವೆ, ಅಂತರ್ಜಲ ಕುಸಿದು ಹೋಗಿದೆ. ಸಿಹಿ ನೀರಿನ ಮೂಲಗಳನ್ನು ಉಳಿಸಿ, ಮುಂದಿನ ಪೀಳಿಗೆಯವರಿಗೆ ಈ ಜಲವನ್ನು ನೀಡಬೇಕಿದೆ...
ಮಳೆ ನೀರನ್ನು ವ್ಯವಸ್ಥಿತವಾಗಿ ಕೊಯ್ಲು ಮಾಡದೆ ಇದ್ದರೆ, ನೀರಿನ ಸಂರಕ್ಷಣೆ ಮಾಡದೇ ಹೋದರೆ ಮುಂದಿನ ಇನ್ನು ಹತ್ತಿಪ್ಪತ್ತು ವರ್ಷಗಳಲ್ಲಿ ಕೆಳಗಿನ ಕೆಟ್ಟ ಪರಿಸ್ಥಿತಿ ನಮಗೆ ಉಂಟಾಗಬಹುದು..
ಟ್ಯಾಂಕರು ಬಂದಿದೆ ರಸ್ತೆಗೆ... ನೀಲಿ, ಹಳದಿ, ಕೇಸರಿ, ಹಸಿರು, ಕೆಂಪು- ಎಲ್ಲಥರದ ಬಣ್ಣಗಳ ಕೊಡಪಾನಗಳು ಬೀದಿಗಳಲ್ಲಿ. ‘ಖಾಲಿ ಕೊಡದ ಹಾಗೆ ಲೈಫು’ ಎಂದು ನೀರಿಗಾಗಿ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಮ್ಮದಾಗಬಹುದು..
‘‘ಇವತ್ತು ಯಾರು ಸ್ನಾನ ಮಾಡಿದ್ದೀರಪ್ಪಾ?,’’ ಅಂತ ಟೀಚರ್ ಕೇಳಿದಾಗ, ಯಾವ ಪುಟಾಣಿಯೂ ತರಗತಿಯಲ್ಲಿ ಕೈಯೆತ್ತಲಾಗದ ಪರಿಸ್ಥಿತಿ. ಈ ಸ್ಥಿತಿ ಬಾರದಿರಲಿ ಎಂದು ಬೇಡೋಣ..
ನಮ್ ಫ್ಯಾಮಿಲಿಗೆ ನೀರು ಬೇಕಪ್ಪಾ,’’ ಎಂದು ನಾವೆಲ್ಲ ಕೇವಲ ನಮ್ಮ ಬಗ್ಗೆ ಯೋಚಿಸುತ್ತಿರುವಾಗ
ಕೆಲವು ದಶಕಗಳಿಂದ ಶ್ರಮಿಸುತ್ತಲೇ ಇರುವ ಭಾರತದ ಈ ವಾಟರ್ ಮ್ಯಾನ್ ಗಳು ನೀರು ಎನ್ನುವುದು ಸಮಸ್ತ ಜೀವಸಂಕುಲ, ಭವಿಷ್ಯದ ಪೀಳಿಗೆಗೆ ಜಲಸಂಪತ್ತು ಅಂತಲೇ ಆಲೋಚಿಸಿದವರು. ಇವರಿಗೆ ನೀರೇ ಜೀವನ, ನೀರೇ ಕನಸು, ನೀರೇ ಧ್ಯಾನ, ನೀರೇ ಸಕಲವೂ. ಸುತ್ತಲಿನ ನೂರಾರು ಹಳ್ಳಿಗಳಿಗೆ ನೀರುಣಿಸಿದ ಎಲ್ಲ ವಾಟರ್ ಮನ್ ಗಳಿಗೆ ಒಂದು ದೊಡ್ಡ ಸಲಾಂ🙏🙏🙏🙏🙏
ಬೋರ್ ಹಾಕಿಸುತ್ತೇವೆ ನೀರಿಲ್ಲ ಏಕೆಂದರೆ ಇವತ್ತಿನ ಅಂತರ್ಜಲ ಮಟ್ಟ ಅತ್ಯಂತ ಹೀನಾಯ ಸ್ಥಿತಿಗೆ ತಲುಪಿದೆ.
ಪ್ರತಿಯೊಬ್ಬ ಜವಾಬ್ದಾರಿ ನಾಗರಿಕರು ಜಾಗೃತಿಗೊಂಡಾಗ ಮಾತ್ರ ಸಸ್ಯ ಮತ್ತು ಜಲಸಂಪತ್ತನ್ನು ಕಾಪಾಡಿಕೊಳ್ಳಬಹುದು..
ಸ್ಥಳೀಯ ಸಂಸ್ಥೆಗಳ ಸಹಕಾರ ಪಡೆದು ಪ್ರತಿಯೊಂದು ಹಳ್ಳಿಗಳಲ್ಲಿಯೂ ಕೆರೆ ನಿರ್ಮಾಣ, ಚೆಕ್ ಡ್ಯಾಮ್ ನಾಲಾ ಬಂಡಿ ಕೆರೆಕಟ್ಟೆಗಳನ್ನು ಸ್ಥಾಪಿಸುವುದು ಅತಿ ಅವಶ್ಯಕವಾಗಿದೆ. ಗಿಡಮರಗಳನ್ನು ಬೆಳೆಸುವುದರ ಜೊತೆಗೆ ಮಳೆ ನೀರು ಕೊಯ್ಲು ಅನಿವಾರ್ಯವಾಗಿದೆ. ಅಲ್ಲದೆ ಪ್ರತಿಯೊಂದು ಬೋರ್ವೆಲ್ ಗಳನ್ನು ರಿಚಾರ್ಜ್ ಮಾಡಿದಾಗ ಮತ್ತೆ ಸ್ವಲ್ಪ ಪ್ರಮಾಣದಲ್ಲಿ ಅಂತರ್ಜಲವನ್ನು ಹೆಚ್ಚಿಸಬಹುದು. ನಾವು ಜಾಗೃತಿಗೊಂಡಾಗ ಮಾತ್ರ ನೀರಿನ ಸಂರಕ್ಷಣೆ ಸಾಧ್ಯ..
ನೀರನ್ನು ಮಿತವಾಗಿ ಬಳಸಿ ನೀರಿನ ಮೂಲಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಗುರಿಯಾಗಬೇಕಿದೆ.

No comments:
Post a Comment