ಕಥೆ-372
ಮಹಾವೀರರು ಜಯಂತಿ ಶುಭಾಶಯಗಳು..💐💐
ಬದುಕಿ ಬದುಕಲು ಬಿಡಿ (ಜೀಯೋ ಔರ್ ಜೀನೇ ದೋ) ಮಹಾವೀರರ ತತ್ವ
ಅವರು ಬಾಳಿದ್ದು-ಬದುಕಿದ್ದು ಇಂದಿಗೆ ಸುಮಾರು 2600 ವರ್ಷಗಳ ಹಿಂದೆ. ಇಂದಿನ ಬಿಹಾರ ಪ್ರಾಂತದ ಕುಂಡಲಪುರದಲ್ಲಿ
ಜೀವದಯೆ, ಅಹಿಂಸೆ ಮತ್ತು ಅನೇಕಾಂತವಾದ ಇವು ಮಹಾವೀರರು ಪ್ರತಿಪಾದಿಸಿದ ಪ್ರಮುಖ ತತ್ತಗಳು. ಈ ತತ್ವಗಳು ಸಂಪೂರ್ಣ ಜೀವಪರವಾಗಿವೆ. "ಅಹಿಂಸಾ ಪರಮೋಧರ್ಮ' ಎಂಬುದು ಜೈನ ಧರ್ಮದ ಧೈಯ ವಾಕ್ಯವಾಗಿದೆ. ಈ ಜಗತ್ತಿನಲ್ಲಿ ಕೊಲ್ಲುವ ಹಕ್ಕು ಯಾರಿಗೂ ಇಲ್ಲ. 'ಬದುಕು ಬದುಕಲು ಬಿಡು' (ಜೀಯೋ ಔರ್ ಜೀನೇ ದೋ) ಎಂದು ಮಹಾವೀರರು ಬೋಧಿಸಿದ್ದಾರೆ. ಜಗತ್ತಿನಲ್ಲಿರುವ ಪಶು-ಪಕ್ಷಿ ಮತ್ತು ಸಸ್ಯ ಸಂಕುಲಗಳ ಬಗ್ಗೆ ನಮ್ಮಲ್ಲಿ ಜೀವದಯಾ ಭಾವವಿರಬೇಕೆಂದು ಅವರು ತಿಳಿಸಿದ್ದಾರೆ. ಇಂದು ನಮ್ಮ ಸುತ್ತ ಮುತ್ತ ನಡೆಯುತ್ತಿರುವ ಕೊಲೆ, ಸುಲಿಗೆ, ಹತ್ಯೆಗಳನ್ನು ತಡೆಯಬಲ್ಲ ಒಂದೇ ಉಪಾಯ ಈ ಅಹಿಂಸಾ ತತ್ವವೆಂಬುದನ್ನು ನಾವು ಮನಗಾಣಬೇಕಿದೆ.
ಅನೇಕಾಂತವಾದವು ಪ್ರಮುಖವಾಗಿ ಪ್ರಜಾಪ್ರಭುತ್ವ ಮತ್ತು ಸಹಕಾರ ತತ್ವದ ಬುನಾದಿಯಂತಿದೆ. ಎಲ್ಲರನ್ನೂ, ಎಲ್ಲರ ಅಭಿಪ್ರಾಯಗಳನ್ನು ಗೌರವಿಸಬೇಕೆಂಬುದು ಈ ತತ್ವದ ಉದ್ದೇಶವಾಗಿದೆ. ನಾನೇ ಶ್ರೇಷ್ಠ, ನನ್ನ ಅಭಿಪ್ರಾಯವೇ ಅಂತಿಮ ಎಂಬ ಸರ್ವಾಧಿಕಾರಿ ಧೋರಣೆಯನ್ನು ಜೈನ ಧರ್ಮವು ಮಾನ್ಯ ಮಾಡುವುದಿಲ್ಲ. ಜಗತ್ತಿನಲ್ಲಿರುವ ಮೇಲು-ಕೀಳು, ಎಂಬ ಭಾವನೆಗಳನ್ನು ತೊಡೆದುಹಾಕಿ ಸಮಾನತೆಯನ್ನು ಸಾಧಿಸುವಲ್ಲಿ ಅನೇಕಾನಂತವಾದ ತುಂಬ ನೆರವಾಗಬಲ್ಲದು.
ಸೂಕ್ಷ್ಮವಾಗಿ ನೋಡಿದರೆ ನಮ್ಮ ಜೀವನವಿಧಾನವೇ ನಮ್ಮ ಧರ್ಮವಾಗಿರುತ್ತದೆ. ನಮ್ಮ ಧರ್ಮಪಾಲನೆಯಿಂದ ಇನ್ನೊಬ್ಬರಿಗೆ ತೊಂದರೆಯಾಗುವಂತೆ ನೋಡಿಕೊಳ್ಳುವುದೇ ಶ್ರೇಷ್ಠ ಧರ್ಮ, ಪರರ ಧರ್ಮ ಮತ್ತು ವಿಚಾರಗಳನ್ನು ಗೌರವಿಸುವುದು ನಿಜವಾದ ಧರ್ಮ.
ಹಾಗೆ ನೋಡಿದರೆ ಯಾವ ಧರ್ಮವೂ ಕೆಟ್ಟದ್ದನ್ನು ಬೋಧಿಸಿಲ್ಲ. ಆ ದೃಷ್ಟಿಯಿಂದ ನೋಡಿದಾಗ "ಎಲ್ಲ ಸಂತರ ಬೋಧೆಯೂ ಒಂದೇ' ಎಂಬುದು ನಮಗೆ ಕಂಡುಬರುತ್ತದೆ.
ಮಹಾವೀರರಂಥ ದಾರ್ಶನಿಕರ ಸಂದೇಶಗಳು ನಮಗೆ ದಾರಿದೀಪಗಳಾಗಲಿ.💐💐💐
ಕೋಪವು ಹೆಚ್ಚು ಕೋಪವನ್ನು ಉಂಟುಮಾಡುತ್ತದೆ ಮತ್ತು ಕ್ಷಮೆ ಮತ್ತು ಪ್ರೀತಿಯು ಹೆಚ್ಚು ಕ್ಷಮೆ ಮತ್ತು ಪ್ರೀತಿಗೆ ಕಾರಣವಾಗುತ್ತದೆ.
ಎಲ್ಲರೂ ನನ್ನ ಸ್ನೇಹಿತರು. ನನಗೆ ಯಾರೂ ಶತ್ರುಗಳಿಲ್ಲ.
ನಿಮಗೆ ಅಗತ್ಯವಿಲ್ಲದಿದ್ದರೆ ಸಂಗ್ರಹಿಸಬೇಡಿ. ನಿಮ್ಮ ಕೈಯಲ್ಲಿ ಹೆಚ್ಚಿನ ಸಂಪತ್ತು ಸಮಾಜಕ್ಕೆ, ಮತ್ತು ನೀವು ಅದಕ್ಕೆ ಟ್ರಸ್ಟಿ.
ಮಿಲಿಯನ್ ಶತ್ರುಗಳನ್ನು ಗೆಲ್ಲುವುದಕ್ಕಿಂತ ಆತ್ಮವನ್ನು ಗೆಲ್ಲುವುದು ಉತ್ತಮ. - ಭಗವಾನ್ ಮಹಾವೀರ
No comments:
Post a Comment