Monday, April 1, 2024

 ಕಥೆ-353

ನಾವು ನೋಡುವ ದೃಷ್ಟಿ ಬದಲಾಗಬೇಕು

ಪ್ರಾಥಮಿಕ ಶಾಲೆಯ ಇಬ್ಬರು ವಿದ್ಯಾರ್ಥಿಗಳ ನಡುವೆ ಯಾವುದೋ ವಿಚಾರದಲ್ಲಿ ವಾಗ್ವಾದ ಏರ್ಪಟ್ಟಿತ್ತು. ಯಾವುದೋ ಚಿಕ್ಕ ವಿಷಯವನ್ನೇ ಹಿಡಿದು ಇಬ್ಬರೂ ಜಗ್ಗಾಡುತ್ತಿದ್ದರು. ಸೋಲಲು ಇಬ್ಬರಿಗೂ ಇಷ್ಟವಿರಲಿಲ್ಲ. ನಾನು ಹೇಳಿದ್ದೇ ಸರಿ ಎಂದು ವಾದಿಸುತ್ತಿದ್ದರು. ಇಬ್ಬರ ಜಗಳದ ವಿಷಯ ಶಿಕ್ಷಕಿಗೆ ತಿಳಿಯಿತು. ತರಗತಿಗೆ ಬಂದ ಟೀಚರ್ ಇಬ್ಬರನ್ನೂ ಕರೆದು ಕೇಳಿದರು. ಒಬ್ಬ ಹೇಳಿದ-‘ನಾನು’ ಸರಿ ‘ಅವನದ್ದೇ’ ತಪ್ಪು ಅಂತ. ಇನ್ನೊಬ್ಬನೂ ಅದೇ ಮಾತುಗಳನ್ನು ಹೇಳಿದ. ಇಬ್ಬರಲ್ಲಿ ಒಬ್ಬರಿಗೆ ಬೈದು ಸುಮ್ಮನಾಗಿಸಿ ಬಿಡಬಹುದಿತ್ತು. ಆದರೆ ಟೀಚರ್ ಇಬ್ಬರಿಗೂ ಒಂದೊಳ್ಳೆ ಪಾಠ ಕಲಿಸಲು ಯೋಚಿಸಿದರು.

ಅವರು ಇಬ್ಬರನ್ನೂ ತರಗತಿಯ ಮುಂಭಾಗಕ್ಕೆ ಕರೆದರು. ಅಲ್ಲಿದ್ದ ಟೇಬಲ್‌ನ ಒಂದು ಬದಿಯಲ್ಲಿ ಒಬ್ಬನನ್ನು, ಇನ್ನೊಂದು ಬದಿಯಲ್ಲಿ ಇನ್ನೊಬ್ಬನನ್ನೂ ನಿಲ್ಲಿಸಿದರು. ಮೇಜಿನ ಮೇಲೆ ಗುಂಡಗಿನ ವಸ್ತುವೊಂದನ್ನು ಇಟ್ಟಿದ್ದರು. ಈ ಕಡೆಯ ಹುಡುಗನಿಗೆ ಆ ವಸ್ತುವಿನ ಬಣ್ಣ ಕಪ್ಪು ಎಂದು ತಿಳಿಯಿತು. ಆಗ ಶಿಕ್ಷಕಿ ಇನ್ನೊಬ್ಬನ ಕಡೆಗೆ ತಿರುಗಿ ‘ಇದು ಯಾವ ಬಣ್ಣದಲ್ಲಿದೆ?’ ಎಂದು ಕೇಳಿದರು. ಅದಕ್ಕೆ ಆ ಹುಡುಗ ‘ಬಿಳಿ ಬಣ್ಣದಲ್ಲಿ’ ಎಂದ. ಈ ಕಡೆಯ ಹುಡುಗನಿಗೆ ಅಚ್ಚರಿಯೋ ಅಚ್ಚರಿ! ಅರೇ ಕಪ್ಪನ್ನು ಬಿಳಿ ಎನ್ನುತ್ತಿದ್ದಾನಲ್ಲ ಎಂದು ಈತನಿಗೆ ಕೋಪ ಬಂತು. ‘ನೋಡಿ ಟೀಚರ್, ಇವನು ಹೀಗೆ ಯಾವಾಗಲೂ ಸುಳ್ಳನ್ನೇ ಹೇಳುವುದು’ ಎಂದು ದೂರಿದ.

ಆಗ ಟೀಚರ್ ಈತನಿಗೆ ಮೇಜಿನ ಇನ್ನೊಂದು ಬದಿಗೆ ಬಂದು ನಿಲ್ಲಲು, ಇನ್ನೊಬ್ಬನಿಗೆ ಈತನಿದ್ದ ಜಾಗಕ್ಕೆ ಬಂದು ನಿಲ್ಲಲು ಹೇಳಿದರು. ಆಗ ವಸ್ತುವಿನ ಬಣ್ಣ ಅದಲು ಬದಲಾಯಿತು. ವಸ್ತುವನ್ನು ಕಪ್ಪು ಎಂದು ವಾದಿಸುತ್ತಿದ್ದ ಹುಡುಗನಿಗೆ, ವಸ್ತುವಿನ ಬಣ್ಣ ಯಾವುದು ಎಂದು ಕೇಳಿದಾಗ ಆತ ಬಿಳಿ ಎಂದು ಹೇಳಲೇಬೇಕಾಯಿತು. ಆಗ ಶಿಕ್ಷಕಿ ಹೇಳಿದರು ‘ಎಲ್ಲಾ ಸಂಗತಿಗಳೂ ಈ ವಸ್ತುವಿನ ಹಾಗೆಯೇ. ಒಬ್ಬರಿಗೆ ಸರಿ ಎನಿಸಿದ್ದು ಇನ್ನೊಬ್ಬರಿಗೆ ತಪ್ಪಾಗಿ ಕಾಣುತ್ತದೆ. ನೀವು ಇನ್ನೊಬ್ಬರ ಸ್ಥಾನದಲ್ಲಿ ನಿಂತು ಯೋಚಿಸಿದಾಗ ಮಾತ್ರ, ನಿಮ್ಮ ಅಭಿಪ್ರಾಯವೇ ಸರಿ ಎಂಬ ಭಾವನೆ ದೂರಾಗಲು ಸಾಧ್ಯ.


ಯಾವಾಗಲೂ ಅಷ್ಟೇ ವಿಷಯವೊಂದನ್ನು ಇನ್ನೊಬ್ಬರ ದೃಷ್ಟಿಕೋನದಲ್ಲಿ, ಇನ್ನೊಬ್ಬರ ಸ್ಥಾನದಲ್ಲಿ ನಿಂತು ನೋಡಿದಾಗ ಮಾತ್ರ ನಿಜಸ್ಥಿತಿಯ ಅರಿವಾಗುತ್ತದೆ’ ಎಂದರು. ಈ ಸರಳ ಸಂಗತಿ ನಮಗೆಲ್ಲರಿಗೂ ಅರಿವಾದರೆ ಎಷ್ಟೋ ಸಮಸ್ಯೆಗಳು, ಜಗಳಗಳು, ವಾದ-ವಿವಾದಗಳು ಕ್ಷುಲ್ಲಕ ಎನಿಸಿಬಿಡುತ್ತವೆ. ವಿದ್ಯುತ್ ಬಲ್ಬಗಳನ್ನು ಕಂಡು ಹಿಡಿದ ಥಾಮಸ್ ಆಲ್ವ ಎಡಿಸನ್ ಹಲವಾರು ಬಾರಿ ತನ್ನ ಸಂಶೋಧನೆಯಲ್ಲಿ ಸೋಲನ್ನುಂಡಿದ್ದ. ಬಲ್ಬ್ ನಲ್ಲಿ ಬಳಸುವ ಫಿಲಮೆಂಟ್‌ಗಾಗಿ ಬರೋಬ್ಬರಿ ಎರಡು ಸಾವಿರ ವಸ್ತುಗಳನ್ನು ಬಳಸಿ ಪ್ರಯೋಗ ಮಾಡಿದ್ದ. ಆದರೆ ಯಾವುದೂ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ.


ಆಗ ಎಡಿಸನ್‌ರ ಸಹಾಯಕ ಬಹಳ ಬೇಸರದಿಂದ ಹೇಳಿದನಂತೆ-‘ನಮ್ಮೆಲ್ಲಾ ಪ್ರಯತ್ನಗಳೂ ವ್ಯರ್ಥವಾಗುತ್ತಿವೆ. ನಾವು ಕೊನೆಗೂ ಏನನ್ನೂ ಸಾಧಿಸಲಿಲ್ಲ, ಏನನ್ನೂ ಕಲಿಯಲಿಲ್ಲ’. ಅದಕ್ಕೆ ಎಡಿಸನ್ ಹೇಳಿದ್ದೇನು ಗೊತ್ತೇ? ‘ಹಾಗೇಕೆ ಯೋಚಿಸುತ್ತಿದ್ದೀಯ? ನಾವು ನಮ್ಮ ಸಂಶೋಧನೆಯಲ್ಲಿ ಸಾಕಷ್ಟು ವಿಷಯಗಳನ್ನು ಕಲಿಯುತ್ತಿದ್ದೇವೆ. ಆ ಎರಡು ಸಾವಿರ ವಸ್ತುಗಳಿಂದ ಬಲ್ಬ್ ತಯಾರಿಸಲು ಸಾಧ್ಯವಿಲ್ಲ ಎಂದು ಪ್ರಾಯೋಗಿಕವಾಗಿ ಕಲಿತಿದ್ದೇವಲ್ಲ. ಅಷ್ಟು ಸಾಲದೇ?’ ಎಂದು ಕೇಳಿದನಂತೆ.

ಕೃಪೆ:ಗೌರ್ ಗೋಪಾಲ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು