ಕಥೆ-416
ಮಾನವೀಯತೆಗೆ ಬಿಲ್ ಇಲ್ಲ
ಇದು ಸಿನಿಮಾ ಕತೆಯಲ್ಲ, ಜೀವನದಲ್ಲಿ ನಡೆದ ಸಂಗತಿ. ಇದು ನಡೆದದ್ದು ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ.
*ಅದೊಂದು ದಿನ ದೀರ್ಘ ಹೊತ್ತಿನ ಮೀಟಿಂಗ್ ಮುಗಿಸಿ ಊಟ ಮಾಡಲೆಂದು ಹೋಟೆಲ್‌ವೊಂದಕ್ಕೆ ಹೋಗಿ ಊಟ ಆರ್ಡರ್ ಮಾಡಿದ. ಹಾಗೆ ಆರ್ಡರ್ ಕೊಟ್ಟ ಊಟವನ್ನು ಕಾದು ಕುಳಿತಿರುವಾಗ ಅಲೆಮಾರಿಯಾದ ಪುಟ್ಟ ಬಾಲಕನೊಬ್ಬ ಹೋಟೆಲ್ ನ ತಿಂಡಿಗಳ ಮೇಲೆ ಕಣ್ಣಿಟ್ಟು ನಿಂತಿರುವುದು ಕಾಣಿಸಿತು. ಕೂಡಲೇ ಆ ಹುಡುಗನಿಗೆ ಒಳಗೆ ಬರುವಂತೆ ಸನ್ನೆ ಮಾಡಿ ಕರೆದ. ಅವನನ್ನು ಗಮನಿಸಿದ ಆ ಬಾಲಕ, ತನ್ನ ಪುಟ್ಟ ಸಹೋದರಿಯನ್ನೂ ಕರೆದು ಕೊಂಡು ಒಳಗೆ ಬಂದ. ನಿಮಗೇನು ಬೇಕು ಎಂದು ಕೇಳಿದಾಗ ಇದೇ ಬೇಕು ಎಂದು ಆ ಬಾಲಕ ಅವನ ಪ್ಲೇಟ್‌ನತ್ತ ಕೈ ತೋರಿಸಿದ. ಇನ್ನೊಂದು ಪ್ಲೇಟ್ ಊಟಕ್ಕೆ ಮತ್ತೆ ಆರ್ಡರ್ ಕೊಟ್ಟ. ಆ ಊಟವನ್ನು ಬಡಿಸುವಾಗ ಬಾಲಕ ಕಣ್ಣು ಖುಷಿಯಿಂದ ಅರಳುತ್ತಿತ್ತು. ಜತೆಗೆ ಒಂದಷ್ಟು ಅಳುಕು!.*
*ಅವರಿಬ್ಬರಿಗೆ ಸಿಕ್ಕಾಪಟ್ಟೆ ಹಸಿವಾಗಿದ್ದಿರಬೇಕು. ಊಟ ನೋಡಿದೊಡನೆ ಗಬಗಬನೆ ತಿನ್ನಲು ಆತ ಮುಂದಾದರೂ ಪುಟ್ಟ ಸಹೋದರಿ ಆತನನ್ನು ತಡೆದಳು. ಊಟಕ್ಕೆ ಮುನ್ನ ಕೈ ತೊಳೆದಿಲ್ಲ ಎಂಬುದನ್ನು ಆಕೆ ನೆನಪಿಸಿದ್ದಳು. ಕೈ ತೊಳೆದು ಬಂದ ಅವರಿಬ್ಬರು ಪರಸ್ಪರ ಮುಖ ನೋಡಿಕೊಂಡು ಖುಷಿಯಾಗಿ ಉಣ್ಣುತ್ತಿದ್ದರು. ಊಟ ಮುಗಿಸಿ ಕೈ ತೊಳೆದು ಅವರು ಖುಷಿ ಖುಷಿಯಾಗಿಯೇ ಹೊರಗೆ ನಡೆದದ್ದನ್ನು ಅವನು ನೋಡುತ್ತಾ ಕುಳಿತ. ಅವರನ್ನು ನೋಡುತ್ತಾ ತನ್ನ ಊಟವನ್ನೇ ಮರೆತಿದ್ದ. ಅವನಿಗೆ ಆಮೇಲೆ ಊಟ ಮಾಡಬೇಕೆಂದೂ ಅನಿಸಿರಲೂ ಇಲ್ಲ.*
*ಬಿಲ್ ಕೊಡಿ ಎಂದು ಕೇಳಿದ. ಹೋಟೆಲ್‌ನ ಮಾಣಿ ಬಿಲ್ ಕೈಗಿತ್ತಾಗ ಅವನಿಗೆ ಅಚ್ಚರಿ!*
*ಊಟದ ಬಿಲ್ ಬದಲು ಅದರಲ್ಲಿ ಹೀಗೆ ಬರೆಯಲಾಗಿತ್ತು*
*ಮಾನವೀಯತೆಗೆ ಬಿಲ್ ನೀಡಬಲ್ಲ ಯಂತ್ರ ಇಲ್ಲಿಲ್ಲ, ನಿಮಗೆ ಒಳ್ಳೆಯದಾಗಲಿ...*
ಕೃಪೆ :ಕನ್ನಡ ಪ್ರಭ ದಿನ ಪತ್ರಿಕೆ
No comments:
Post a Comment