ಕಥೆ-459
ಭಾವೈಕ್ಯತೆ ಬೆಸೆಯುವ ಹಬ್ಬ ಮೊಹರಂ
ಜಾತಿಯ ಚೌಕಟ್ಟನ್ನು ಮೀರಿ ಮನುಕುಲವೆಲ್ಲ ಒಂದೇ ಎಂಬ ಸಂದೇಶ ಸಾರುವ ಭಾವೈಕ್ಯತೆ ಹಬ್ಬವೇ ಮೊಹರಂ. ಸರ್ವ ಧರ್ಮಗಳ ನಡುವೆ ಭಾವೈಕ್ಯತೆಯನ್ನು ಮೂಡಿಸುವ ಮೂಲಕ ಮಾನವೀಯ ಮೌಲ್ಯಗಳ ಸಾರುವ ಹಬ್ಬವೇ ಮೊಹರಂ, ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಸರ್ವಧರ್ಮಿಯರು ಸೇರಿ ಆಚರಿಸುವ ಹಬ್ಬವಾಗಿದೆ.
ಪ್ರವಾದಿ ಮಹಮ್ಮದರ ಮೊಮ್ಮಗ ಹುಸೇನ್ ಇಬ್ ಅಲಿಯವರ ತ್ಯಾಗ ಬಲಿದಾನವನ್ನು ಸ್ಮರಿಸುವ ದಿನವೇ ಈ ಮೊಹರಂ. ಪ್ರತಿ ವರ್ಷ ಮುಸ್ಲಿಂ ಬಾಂಧವರು ಮೊಹರಂ ಹಬ್ಬವನ್ನು ಆಚರಿಸುತ್ತಾರೆ. ಮುಸ್ಲಿಮರು 9 ದಿನಗಳ ಕಾಲ ಉಪವಾಸ ಆಚರಿಸಿ ಹತ್ತನೇ ದಿನ ಅಶುರಾ ಎಂದು ಆಚರಿಸುತ್ತಾರೆ. ಮೊಹರಂ ಹಬ್ಬವು ಮುಸ್ಲಿಮರಿಗೆ ದುಃಖವನ್ನು ಸೂಚಿಸುವ ಹಾಗೂ ಶೋಕಾಚರಣೆ ಹಬ್ಬವಾಗಿದೆ. ಇಸ್ಲಾಂ ಧರ್ಮದ ಸ್ಥಾಪಕರಾದ ಪ್ರವಾದಿ ತಾದ ಮೊಹಮ್ಮದ ಮೊಮ್ಮಗ ಇಮಾಮ್ ಕೇಶ್, ಹುಸೇನ್ ಹಾಗೂ 72 ಹಿಂಬಾಲಕರು ಧರ್ಮದ ಉಳಿವಿಗಾಗಿ ಯುದ್ಧ ಮಾಡಿ
ಹುತಾತ್ಮರಾದ ದಿನವೇ ಈ ಮೊಹರಂ. ಕರ್ಬಲಾ ಯುದ್ಧವು ಇಮಾಮ್ ಹುಸೇನ್ ಮತ್ತು ಉಮಯ್ಯದ ಖಲೀಪ್ ಯಾಜಿದ ನಡುವೆ ನಡೆಯಿತು. ಈ ಯುದ್ಧದ ಸಮಯದಲ್ಲಿ ಇಮಾಮ್ ಹುಸೇನರನ್ನು ಮೋಸದಿಂದ ಕೊಲ್ಲಲಾಯಿತು. ಈ ತಿಂಗಳ 10ನೇ ದಿನದಂದು ಹುಸೇನರ ತ್ಯಾಗ ಬಲಿದಾನವನ್ನು ಇಂದಿಗೂ ಸ್ಮರಿಸಲಾಗುತ್ತಿದೆ. ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಸಹ ಎಲ್ಲಾ ಜಾತಿ ಜನಾಂಗಗಳ ಸದಸ್ಯರು ಮುಂದೆನೆಂತು ಮೊಹರಂ ಆಚರಣೆಯನ್ನು ಮಾಡುತ್ತಾರೆ. ಹಿಂದೂ ಹಾಗೂ ಮುಸ್ಲಿಮರು ಭಾವೈಕ್ಯ ಭಾವನೆಯಿಂದ ಜೊತೆ ಜೊತೆಗೆಸಾಗುತ್ತಿದ್ದಾರೆ.ಮೊಹರಂ ಅಂತಹ ಹಬ್ಬಗಳು ಭಾವೈಕ್ಯತೆಯನ್ನು ಬೆಸೆಯುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ.
ಇಂದು ಮೊಹರಂ ಕೇವಲ ಇಸ್ಲಾಂ ಧರ್ಮಕ್ಕೆ ಮಾತ್ರ ಸೀಮಿತವಾಗದೆ ಸರ್ವ ಧರ್ಮಗಳ ಭಾವೈಕ್ಯತೆಯ ಹಬ್ಬವಾಗಿ ಪರಿವರ್ತನೆಯಾಗಿದೆ.
ಭಾವೈಕ್ಯತೆಯ ಮೋಹರಂ
ಇಲ್ಲಿ ಹೆಜ್ಜೆ ಹಾಕುತ್ತೇವೆ ಕುಣಿಯುತ್ತೇವೆ ಕೈ ಕೈಯಿಗಳ ಮಿಲನ ಗಟ್ಟಿಯಾಗಿರುತ್ತೆ ಬಣ್ಣಗೆಳ ಬಡಿದಾಟ విల్ల ನಾವೆಲ್ಲ ಒಂದೆ ಇಲ್ಲಿ ಹೊಸತನ ಮನೆ ಮನಸುಗಳ ತೊಳೆದು ಮತ್ತೇ ಪ್ರೇಮದ ಬತ್ತಿ ಉರಿಯುತ್ತಿದೆ ಸದ್ದಿಲ್ಲದೇ ಇಲ್ಲಿ ಭೇದವಿಲ್ಲ ,ಜಾತಿ ಗೊತ್ತಿಲ್ಲ ನ್ಯಾಯವಿದೆ ಧರ್ಮವಿದೆ ಪಕ್ಷವಂತೂ ಮೊದಲೇ ಇಲ್ಲ ನೈಜತೆಯ ಅನಾವರಣ ಕಾಲ ಕಾಲದ ಸಂಪ್ರದಾಯವಲ್ಲ ಇಲ್ಲಿ ಸತ್ಯವಿದೆ ನೈತಿಕತೆ ಇದೆ ಮತ್ತೆ ಒಂದಾಗುವ ಭಾವವಿದೆ ನನ್ನವರೆಂಬ ಮಮತೆ ಗೂಡಾಗಿದೆ
ಐಕ್ಯತೆಯ ಸಾರುವ ಗೆಜ್ಜೆ,ಹಲಗೆಯ ನಾದ ಶಾಂತಿಯ ತೋಟವಿದೆ ಅಹಿಂಸಾ ಸತ್ಯಗಳ ತತ್ವವಿದೆ ಹೀಗೆ ಎಲ್ಲರೂ ಕೂಡುವ ಸೇರಿ ಪ್ರೀತಿ ಹಂಚುವ ಹಬ್ಬಗಳಾದರೆ ಸಾಕು
No comments:
Post a Comment