ಕಥೆ-470
ಜೀವಿಸಿರುವಾಗ ನೋಡಿಕೊಳ್ಳುವುದು ನಿಜವಾದ ಬೆಲೆ
ಸುಂದರ ಕಥೆ
ಓದಿ ಮತ್ತೆ ಚಿಂತಿಸಿ ನಾವು
ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಕಥೆ...
ಗಂಡ ಹೆಂಡತಿ ಎರಡು ಮಕ್ಕಳಿರುವ ಕುಟುಂಬ...
ಒಂದು ದಿವಸ ದುಬೈ ಪೆಸ್ಟಿವಲ್ ಗೆ ಸುತ್ತಲು ಹೋದ ಈ ಕುಟುಂಬ
ಗಂಟೆಗಟ್ಟಲೆ ಸುತ್ತಿ ಸಂತೋಷಿಸಿದರು...
ಅದರೆಡೆಯಲ್ಲಿ ಅಲ್ಲಿನ ನೂಕುನುಗ್ಗಲಿಗೆ ಅವರ ಮಗ
ಕಾಣುವುದಿಲ್ಲ...
ಅವರು ಅವನನ್ನು ಹುಡುಕಿ ಹುಡುಕಿ ಸಿಗದಾದಾಗ ಅವನ ತಾಯಿ
ಬೊಬ್ಬೆ ಹಾಕಲು ಶುರುಮಾಡಿದಳು....
ಬೊಬ್ಬೆ ಕೇಳಿ ಸಾರ್ವಜನಿಕರು ಒಟ್ಟು ಗೂಡಿದರು ಪೋಲಿಸರಿಗೆ
ತಿಳಿಸಿದರು
ಪೋಲಿಸರು ಗಂಟೆಗಟ್ಟಲೆ ಹುಡುಕಿ ಹೇಗೋ ಮಗನನ್ನು ಹುಡುಕಿದರು.
ಅವನನ್ನು ತಂದೆ ತಾಯಿಗೆ ಮುಟ್ಟಿಸಿದರು.
ಮಗ ಸಿಕ್ಕಿದ ಕೂಡಲೇ ಹೆಂಡತಿ ಮತ್ತು ಮಕ್ಕಳನ್ನು ಪ್ಲಾಟಿಗೆ
ಕಳುಹಿಸಿ ಗಂಡ ಟ್ರಾವಲ್ಸಿಗೆ ಹೋಗಿ ನಾಲ್ಕು ಟಿಕೆಟ್ ಬುಕ್
ಮಾಡುತ್ತಾರೆ....
ಟಿಕೆಟ್ ಕೈಯಲ್ಲಿ ಸಿಕ್ಕಿದಾಗ ಹೆಂಡತಿ ಆಶ್ಚರ್ಯದಿಂದ
ಕೇಳಿದಳು
ಅಲ್ಲ ರೀ ನಿಮಗೇನಾಗಿದೆ...?
ಊರಿನಲ್ಲಿ ಯಾರಾದರೂ ಮರಣ
ಹೊಂದಿದಾರಾ......?ಅವಸರದಿಂದ ಮನೆಗೆ
ಹೋಗಲಿಕ್ಕೆ....?
ಕೂಡಲೆ ಗಂಡ ಅಳುತ್ತಾ ಹೇಳಿದ
"ಸ್ವಂತ ಮಗ ಎರಡು ಗಂಟೆ ಸಮಯ
ಕಾಣಾದಾದಾಗ ನೀನು ತುಂಬಾ ಬೇಜಾರು ಮಾಡಿಕೊಂಡು ಬೊಬ್ಬೆ ಹೊಡೆದೆಯಲ್ಲ ....?
"" ಹಾಗಾದರೆ ನಾನು ಕಳೆದ ಹತ್ತು ವರ್ಷದಿಂದ ನಿನ್ನ ಮಾತು ಕೇಳಿ ಊರಿಗೆ ಹೋಗದ ಕಾರಣ ನನ್ನನ್ನು ಒಂದು ಸಲ ನೋಡದೆ ನನ್ನ ತಾಯಿ ಎಷ್ಟು ಸರ್ತಿ ಬೇಜಾರು ಮಾಡಿಕೊಂಡಿರಬೇಕು..?
ಅದಕ್ಕೆ ಅವಳ ಪ್ರತಿಕ್ರಿಯೆ ಮೌನವಾಗಿತ್ತು......
ತಂದೆ ತಾಯಿಯ ಮನಸ್ಸಿಗೆ ಘಾಸಿ ಉಂಟು ಮಾಡಿ ಯಾರು
ಅಧಿಕ ಕಾಲ ಸುಖವಾಗಿ ಜೀವಿಸಿಲ್ಲ. ಜೀವಿಸಲು ಸಾಧ್ಯವಿಲ್ಲ..
ತಂದೆ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ..
ನಾವು ತಂದೆ ತಾಯಿಯರನ್ನು
ಪ್ರೀತಿಸುವುದಾದರೆ ಬಾಧ್ಯತೆಗಳು ನೆರವೇರಿಸುದಾದರೆ ಅವರು
ಜೀವಿಸಿರುವಾಗ ಮಾಡಿದರೆ ನಮ್ಮ ಜನ್ಮ ಸಾರ್ಥಕ.
ಮರಣ ಹೊಂದಿದಾಗ ಶತ್ರು ಕೂಡ ಅಳುತ್ತಾನೆ....
👍
No comments:
Post a Comment